ವಾರಾಣಸಿ, ಉತ್ತರಪ್ರದೇಶ: ಇಲ್ಲಿನ ಕ್ಯಾಂಟ್ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ಪ್ರಯಾಣಿಕನೊಬ್ಬ ಕಾಲು ಜಾರಿ ಬಿದ್ದಿದ್ದಾನೆ. ಬೋಗಿಯ ಗೇಟ್ ಹಿಡಿದು ಪ್ಲಾಟ್ ಫಾರ್ಮ್ ಮೇಲೆ ಮುಗ್ಗರಿಸಿ ಮುಂದೆ ಸಾಗುತ್ತಿದ್ದ, ಪ್ರಯಾಣಿಕ ಅಪಾಯದಲ್ಲಿರುವುದನ್ನು ಕಂಡ ಅಲ್ಲಿನ ಜನ ಭಯಭೀತರಾಗಿ ಚೀರಾಟ- ಕೂಗಾಟ ನಡೆಸಿದರು. ಈ ಗದ್ದಲದಿಂದಾಗಿ ಅತ್ತ ನೋಡಿದ ಹೆಡ್ ಕಾನ್‌ಸ್ಟೆಬಲ್, ಅಪಾಯದಲ್ಲಿದ್ದ ಪ್ರಯಾಣಿಕನನ್ನು ತಕ್ಷಣ ಎಳೆದುಕೊಂಡು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೆಡ್ ಕಾನ್ಸ್‌ಟೇಬಲ್ ಈ ಕಾರ್ಯವನ್ನು ಜನ ಮೆಚ್ಚಿ, ಶ್ಲಾಘಿಸಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
LTT ಜೈ ನಗರ ಎಕ್ಸ್‌ಪ್ರೆಸ್ -11061 ಭಾನುವಾರ ಕ್ಯಾಂಟ್ ರೈಲು ನಿಲ್ದಾಣಕ್ಕೆ ಆಗಮಿಸಿತ್ತು. ಈ ಸಮಯದಲ್ಲಿ, ಪ್ರಯಾಣಿಕ ಪ್ರದೀಪ್ ಕುಮಾರ್ ಬಿಹಾರದ ಮುಜಾಫರ್‌ಪುರಕ್ಕೆ ಹೋಗಲು ಬೋಗಿ ಸಂಖ್ಯೆ S-5 ಅನ್ನು ಹತ್ತಲು ಪ್ರಾರಂಭಿಸಿದರು. ಈ ಬೋಗಿ ರಿಸರ್ವೇಷನ್ ಬೋಗಿಯಾಗಿತ್ತು. ಆ ವೇಳೆ ಪ್ಲಾಟ್‌ಫಾರ್ಮ್ ನಂಬರ್ 1 ರಿಂದ ರೈಲು ಹೊರಟಿತ್ತು. ಬೋಗಿ ಹತ್ತುವ ತರಾತುರಿಯಲ್ಲಿ ಪ್ರಯಾಣಿಕ ಪ್ರದೀಪ್ ಎಂಬುವವರು ಸಮತೋಲನ ಕಳೆದುಕೊಂಡರು. ಇದರಿಂದಾಗಿ ಅವರು ಬೋಗಿಯ ಗೇಟ್ ಮತ್ತು ವೇದಿಕೆಯ ನಡುವೆ ತೆವಳಲು ಪ್ರಾರಂಭಿಸಿದರು.
ಆತ ಬೋಗಿಯ ಒಂದು ಹ್ಯಾಂಡಲ್ ಹಿಡಿದುಕೊಂಡಿದ್ದರು. ಇದನ್ನು ಕಂಡ ಪ್ರಯಾಣಿಕರು ಚೀರಾಟ ಆರಂಭಿಸಿದರು. ಅಲ್ಲೇ ಇದ್ದ ಹೆಡ್ ಕಾನ್ಸ್‌ಟೇಬಲ್ ಅಮೃತ್ ಲಾಲ್ ಅತ್ತ ಓಡಿ ತನ್ನ ಪ್ರಾಣವನ್ನು ಲೆಕ್ಕಿಸದೇ ಪ್ರಯಾಣಿಕನನ್ನು ರಕ್ಷಿಸಿದರು. ಓಡುತ್ತಾ ಪ್ರಯಾಣಿಕನ ಜೀವ ಕಾಪಾಡಿದ ಕಾನ್ಸ್‌ಟೇಬಲ್ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹೆಡ್ ಕಾನ್ಸ್‌ಟೇಬಲ್ ಪ್ರಯಾಣಿಕನ ಪ್ರಾಣ ಉಳಿಸುತ್ತಿರುವುದು ಕಂಡು ಬಂದಿದೆ.
ಮುಂಬರುವ ದೀಪಾವಳಿ, ಛತ್ ಪೂಜೆ ಮತ್ತು ಕುಂಭಮೇಳವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚುವರಿ ಭದ್ರತೆ ಒದಗಿಸಲಾಗುತ್ತಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಕಾಶ್ ಡಿ ಅವರ ನಿರ್ದೇಶನದಲ್ಲಿ, ರೈಲ್ವೆ ನಿಲ್ದಾಣಗಳು, ಪ್ಲಾಟ್‌ಫಾರ್ಮ್‌ಗಳು ಮತ್ತು ಸಂಚಾರ ಪ್ರದೇಶಗಳಲ್ಲಿ ತಪಾಸಣೆ ಅಭಿಯಾನ ಕೈಗೊಳ್ಳಲಾಗಿದೆ ಎಂದು ಸಿಒ ಜಿಆರ್‌ಪಿ ಕುನ್ವರ್ ಪ್ರಭಾತ್ ಸಿಂಗ್ ತಿಳಿಸಿದ್ದಾರೆ.
ವಿಶೇಷ ಅಭಿಯಾನದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್‌ಸ್ಪೆಕ್ಟರ್-ಇನ್‌ಚಾರ್ಜ್ ಹೇಮಂತ್ ಸಿಂಗ್ ಮತ್ತು ಅವರ ತಂಡವೂ ಇಲ್ಲಿ ಪರಿಶೀಲನೆಯಲ್ಲಿ ತೊಡಗಿಸಿಕೊಂಡಿದೆ. ಪ್ಲಾಟ್‌ಫಾರ್ಮ್ ನಂ.1ರಲ್ಲಿ ಹೆಡ್ ಕಾನ್ಸ್‌ಟೇಬಲ್ ಅಮೃತ್ ಲಾಲ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, ಈ ಘಟನೆ ನಡೆದಿತ್ತು, ವಿಷಯ ತಿಳಿದು ಮತ್ತು ಪ್ರಯಾಣಿಕ ಅಪಾಯದಲ್ಲಿರುವುದನ್ನು ಕಂಡು, ಓಡಿ ಬಂದು ಪ್ರಯಾಣಿಕನ ಪ್ರಾಣ ಉಳಿಸಿದ್ದಾರೆ. ಅಮೃತ್ ಅವರ ಈ ಕೆಲಸ ಈಗ ಎಲ್ಲರಿಂದ ಶ್ಲಾಘನೆಗೆ ಒಳಗಾಗುತ್ತಿದೆ.
ಇದನ್ನು ಓದಿ:ಐರನ್ ಮ್ಯಾನ್ 70.3 ರೇಸ್‌ನಲ್ಲಿ ತೇಜಸ್ವಿ ಸೂರ್ಯಗೆ ಗೆಲುವು: ಈ ಸಾಧನೆ ಮಾಡಿದ ಮೊದಲ ಜನಪ್ರತಿನಿಧಿ!