ETV Bharat / bharat

ವಿಕ್ರಂ-1 ಕಕ್ಷೆ ರಾಕೆಟ್​​ನ ಎರಡನೇ ಹಂತದ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಸ್ಕೈರೂಟ್​​​ - Vikram 1 Orbital Rocket

ಮೊದಲ ಬಾರಿಗೆ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ರಾಕೆಟ್​​ವೊಂದು ಉಡಾವಣೆ ನಡೆಸಲು ಸ್ಕೈರೂಟ್​​ ಏರೋಸ್ಪೇಸ್ ಸಜ್ಜಾಗಿದೆ.

author img

By ETV Bharat Karnataka Team

Published : Mar 28, 2024, 5:08 PM IST

skyroot-aerospace-successfully-tests-stage-2-of-its-vikram-1-orbital-rocket

ಹೈದರಾಬಾದ್​​: ಖಾಸಗಿ ಬಾಹ್ಯಾಕಾಶ ಸಂಸ್ಥೆಯಾಗಿರುವ ಸ್ಕೈರೂಟ್​​ ಏರೋಸ್ಪೇಸ್ ಕಲಾಂ 250 ಎಂದು ಕರೆಯಲ್ಪಡುವ ​​ ವಿಕ್ರಂ-1 ರಾಕೆಟ್​​ನ ಎರಡನೇ ಹಂತದ ಪರೀಕ್ಷಾರ್ಥ ಪ್ರಯೋಗವನ್ನು ಶ್ರೀಹರಿಕೋಟದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಿದೆ.

ಶ್ರೀಹರಿಕೋಟದಲ್ಲಿ 85 ಸೆಕೆಂಡ್​ನ ಪರೀಕ್ಷೆಯನ್ನು ನಡೆಸಲಾಗಿದ್ದು, ಈ ವೇಳೆ 186 ಕಿಲೋನ್ಯೂಟನ್‌ಗಳ ಗರಿಷ್ಠ ಸಮುದ್ರ ಮಟ್ಟದ ಒತ್ತಡವನ್ನು ದಾಖಲಿಸಿತು. ಇದು ಹಾರಾಟದ ಸಮಯದಲ್ಲಿ ಸುಮಾರು 235ಕೆಎನ್​ ನಷ್ಟು ಸಂಪೂರ್ಣ ವಿಸ್ತರಿತ ನಿರ್ವಾತ ಒತ್ತಡಕ್ಕೆ ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಕ್ರಂ 1 ಉಡಾವಣೆಯು ಭಾರತೀಯ ಬಾಹ್ಯಾಕಾಶ ವಲಯದಲ್ಲಿ ಒಂದು ಮೈಲಿಗಲ್ಲು ಆಗಿದೆ. ಕಾರಣ ಇದೇ ಮೊದಲ ಬಾರಿಗೆ ಖಾಸಗಿ ಸಂಸ್ಥೆಯೊಂದು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ರಾಕೆಟ್​​ವೊಂದು ಉಡಾವಣೆ ನಡೆಸಲು ಸಜ್ಜಾಗಿದೆ. 2022ರಲ್ಲೂ ಕೂಡ ಸ್ಕೈರೂಟ್​​ ವಿಕ್ರಂ -ಎಸ್​​ ಅನ್ನು ಉಪ ಕಕ್ಷೆಗೆ ಸಾಗಿಸುವ ರಾಕೆಟ್​​ ಉಡಾವಣೆ ಮಾಡಿದ ಮೊದಲ ಭಾರತೀಯ ಖಾಸಗಿ ಸಂಸ್ಥೆ​ ಆಗಿದೆ.

ಕಲಾಂ 250 ಹೆಚ್ಚು ಬಲವಾದ ಇಂಗಾಲದ ಸಂಯೋಜನೆಯ ರಾಕೆಟ್​ ಮೋಟಾರ್​​ ಹೊಂದಿದ್ದು, ಇದು ಘನ ಇಂಧನವನ್ನು ಬಳಕೆ ಮಾಡಿದೆ. ಹೆಚ್ಚು ಸಾಮರ್ಥ್ಯದಾಯಕ ಎಥಿಲಿನ್ಪ್ರೊ - ಪಿಲೀನ್- ಡೈನ್ ಟೆರ್ಪಾಲಿಮರ್ಸ್ (ಇಪಿಡಿಎಂ) ಥರ್ಮಲ್ ಪ್ರೊಟೆಕ್ಷನ್ ಸಿಸ್ಟಮ್ (ಟಿಪಿಎಸ್) ಹೊಂದಿದೆ.

ಭಾರತದ ಬಾಹ್ಯಾಕಾಶ ಉದ್ಯಮದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಆಗಿದೆ. ಭಾರತೀಯ ಖಾಸಗಿ ವಲಯವು ಇದುವರೆಗೆ ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ ಅತಿದೊಡ್ಡ ಪ್ರೊಪಲ್ಷನ್ ಸಿಸ್ಟಮ್‌ನ ಯಶಸ್ವಿ ಪರೀಕ್ಷೆ ಇದಾಗಿದ್ದು, ಇಸ್ರೋದಿಂದ ಪರೀಕ್ಷಿಸಲಾದ ಮೊದಲ ಕಾರ್ಬನ್‌ಕಾಂಪೊಸಿಟ್​ ನಿರ್ಮಿತ ಮೋಟಾರ್ ಕೂಡ ಇದಾಗಿದೆ ಎಂದು ಸ್ಕೈರೂಟ್​​ ಏರೋಸ್ಪೇಸ್​​ನ ಸಿಇಒ ಮತ್ತು ಸಹ ಸಂಸ್ಥಾಪಕರಾದ ಪವನ್​ ಚಂದನ ತಿಳಿಸಿದ್ದಾರೆ.

ಎಲ್ಲಾ ಪರೀಕ್ಷೆಗಳನ್ನು ನಿರೀಕ್ಷಿತ ಮಟ್ಟದಲ್ಲಿ ಪೂರೈಸಿದೆ. ಈ ಸಾಧನೆಯು ವಿಕ್ರಂ 1 ರಾಕೆಟ್​​ ಕಕ್ಷೆಯ ಉಡಾವಣೆಗೆ ಮತ್ತೊಂದು ಹೆಜ್ಜೆ ಹತ್ತಿರಕ್ಕೆ ಕರೆದೊಯ್ದಿದೆ ಎಂದಿದ್ದಾರೆ.

ಈ ವರ್ಷದ ಮಧ್ಯ ಭಾಗದಲ್ಲಿ ವಿಕ್ರಂ 1ರ ಉಡಾವಣೆಗೆ ಯೋಜನೆ ರೂಪಿಸಲಾಗುತ್ತಿದೆ. ವಿಕ್ರಂ 1 ಮೂರು ಹಂತದ ಘನ ಇಂಧನಾಧಾರಿತ ರಾಕೆಟ್​ ಆಗಿದೆ. ಈ ವರ್ಷವೇ ವಿಕ್ರಂ 1ರ ಉಡಾವಣೆಗೆ ಯೋಜನೆ ರೂಪಿಸಲಾಗುತ್ತಿದೆ. ವಿಕ್ರಂ 1 ಮೂರನೇ ಹಂತದ ಘನ ಇಂಧನಾಧಾರಿತ ರಾಕೆಟ್​ ಆಗಿದ್ದು, ಇಸ್ರೋ ಪ್ರೊಪಲ್ಷನ್ ಟೆಸ್ಟ್​ ನಡೆಸಿದೆ.

ಇದನ್ನೂ ಓದಿ: ಹಾಸ್ಟೆಲ್‌ನ ಸಾಧಾರಣ ಕೊಠಡಿಯಲ್ಲಿ ವಾಸ, ಹಳೆಯ ಸೈಕಲ್‌ ಸವಾರಿ: ಇಸ್ರೋ ಅಧ್ಯಕ್ಷರ ಆತ್ಮಚರಿತ್ರೆ​ ಶೀಘ್ರದಲ್ಲೇ ಮಾರುಕಟ್ಟೆಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.