ETV Bharat / bharat

ಮದುವೆ ಮೆರವಣಿಗೆ ಮೇಲೆ ಹರಿದ ಟ್ರಕ್​: ಐವರು ಸಾವು, 11ಕ್ಕೂ ಹೆಚ್ಚು ಜನರಿಗೆ ಗಾಯ

Raisan Road Accident: ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಇಲ್ಲಿ ವೇಗವಾಗಿ ಬಂದ ಟ್ರಕ್ ಮದುವೆ ಮೆರವಣಿಗೆಯ ಮೇಲೆ ಹರಿದಿದೆ. ಈ ಘಟನೆಯಲ್ಲಿ ಈವರೆಗೆ ಐವರು ಸಾವನ್ನಪ್ಪಿದ್ದು, 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Truck Crushed people  wedding procession
ಸಂಭ್ರಮದಿಂದ ಸಾಗುತ್ತಿದ್ದ ಮದುವೆ ಮೆರವಣಿಗೆಗೆ ನುಗ್ಗಿದ ಟ್ರಕ್
author img

By ETV Bharat Karnataka Team

Published : Mar 12, 2024, 7:15 AM IST

Updated : Mar 12, 2024, 7:37 AM IST

ರೈಸನ್​, ಮಧ್ಯಪ್ರದೇಶ: ರಸ್ತೆ ಪಕ್ಕದಲ್ಲಿ ಸಾಗುತ್ತಿದ್ದ ಮದುವೆ ಮೆರವಣಿಗೆ ಮೇಲೆ ವೇಗವಾಗಿ ಬಂದ ಟ್ರಕ್​ವೊಂದು ಹರಿದಿದೆ. ಘಟನೆಯಲ್ಲಿ ಸುಮಾರು ಐವರು ಸಾವನ್ನಪ್ಪಿದ್ದು, 11ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲೆಯ ಖಮಾರಿಯಾ ಘಾಟ್‌ನಲ್ಲಿ ಭೋಪಾಲ್-ಜಬಲ್‌ಪುರ ರಸ್ತೆ NH-45 ನಲ್ಲಿ ಘಟನೆ ನಡೆದಿದೆ.

ಮದುವೆ ಮೆರವಣಿಗೆ ನುಗ್ಗಿದ ಟ್ರಕ್​: ರೈಸನ್ ಜಿಲ್ಲೆಯ ಘಾಟ್ ಪಿಪಾರಿಯಾ ಗ್ರಾಮದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಹೋಶಂಗಾಬಾದ್‌ನಿಂದ ರೈಸನ್‌ನ ಪಿಪಾರಿಯಾ ಗ್ರಾಮಕ್ಕೆ ಮದುವೆ ಮೆರವಣಿಗೆ ಬಂದಿತ್ತು ಎಂದು ಹೇಳಲಾಗುತ್ತಿದೆ. ಇದೇ ವೇಳೆ ವೇಗವಾಗಿ ಬಂದ ಲಾರಿಯೊಂದು ನಿಯಂತ್ರಣ ತಪ್ಪಿ ಮದುವೆ ಮೆರವಣಿಗೆ ಮೇಲೆ ಹರಿದಿದೆ. ಇದರಿಂದಾಗಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳು ಬಿದ್ದು ಒದ್ದಾಡುತ್ತಿರುವುದು ಕಂಡುಬಂತು.

ಗಾಯಾಳುಗಳು ಆಸ್ಪತ್ರೆಗೆ ದಾಖಲು: ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕೆಲವರನ್ನು ಭೋಪಾಲ್ ಏಮ್ಸ್‌ಗೆ ಕೂಡ ಶಿಫಾರಸು ಮಾಡಲಾಗಿದೆ. ಈ ನಿಟ್ಟಿನಲ್ಲಿ ಸಿವಿಲ್ ಸರ್ಜನ್ ಅನಿಲ್ ಓಧೆ ಅವರನ್ನು ಸಂಪರ್ಕಿಸಿದಾಗ, ಪ್ರಸ್ತುತ ರೈಸನ್ ಜಿಲ್ಲಾ ಕೇಂದ್ರದಲ್ಲಿ ನಾಲ್ವರು ರೋಗಿಗಳು ಇದ್ದಾರೆ. ಅದರಲ್ಲಿ ಒಬ್ಬರನ್ನು ಭೋಪಾಲ್‌ಗೆ ಶಿಫ್ಟ್​ ಮಾಡಲಾಗಿದೆ ಎಂದರು. ಪೊಲೀಸರು ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆಯಲ್ಲಿ ನಿರತರಾಗಿದ್ದಾರೆ.

ಪರಿಹಾರ ಘೋಷಿಸಿದ ಸಿಎಂ ಮೋಹನ್ ಯಾದವ್: ರೈಸನ್‌ನಲ್ಲಿ ನಡೆದ ಈ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಸಿಎಂ ಮೋಹನ್ ಯಾದವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ ಸದಸ್ಯರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ 4 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಧನಸಹಾಯವನ್ನು ಮುಖ್ಯಮಂತ್ರಿಗಳು ನೀಡಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಕ್ಯಾಬಿನೆಟ್ ಸಚಿವ ವಿಶ್ವಾಸ್ ಸಾರಂಗ್ ಅವರು ಭೋಪಾಲ್ ಏಮ್ಸ್‌ನಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಓದಿ: 7 ಸಾವಿರ ಕಿಮೀ ದೂರದ ಗುರಿ ಭೇದಿಸುವ ಸ್ವದೇಶಿ ಅಗ್ನಿ-5 ಕ್ಷಿಪಣಿಯ ವಿಶೇಷತೆಗಳೇನು ಗೊತ್ತಾ!?

Last Updated : Mar 12, 2024, 7:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.