ETV Bharat / bharat

ಉಭಯ ಸದನಗಳಲ್ಲಿ ನೀಟ್​ ಗದ್ದಲ: ಸದನದಿಂದ ಯುವಕರಿಗೆ ಸರಿಯಾದ ಸಂದೇಶ ರವಾನೆಯಾಬೇಕೆಂದು ಪಟ್ಟು ಹಿಡಿದ ರಾಹುಲ್​ - NEET row - NEET ROW

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ದೇಶದ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವ ಕುರಿತು ಶುಕ್ರವಾರ ಸಂಸತ್ತಿನ ಉಭಯ ಸದನಗಳಲ್ಲಿ ಭಾರಿ ಕೋಲಾಹಲ ಏರ್ಪಟ್ಟಿತ್ತು. ಸದನದ ಕಲಾಪ ಆರಂಭವಾದ ಕೂಡಲೇ ಪ್ರತಿಪಕ್ಷಗಳ ಮೈತ್ರಿಕೂಟ ಐಎನ್​​​​​​ಡಿಐಎ ಮೂಲಕ ಈ ಸಮಸ್ಯೆ ಎತ್ತಿದ್ದರು.

OPPOSITION DEMANDS  DISCUSSION OVER PAPER LEAKS  NEET PAPER LEAK ISSUE
ಉಭಯ ಸದನಗಳಲ್ಲಿ ನೀಟ್​ ಗದ್ದಲ, ಕಲಾಪ ಮುಂದೂಡಿಕೆ (ANI)
author img

By ANI

Published : Jun 28, 2024, 1:04 PM IST

ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ಪ್ರಸ್ತಾಪಿಸಿದರು. ವಿದ್ಯಾರ್ಥಿಗಳೇ ದೇಶದ ಭವಿಷ್ಯ. ಸದನದಿಂದ ಯುವಕರಿಗೆ ಸರಿಯಾದ ಸಂದೇಶ ರವಾನೆಯಾಗಬೇಕು ಎಂದರು. ಕಾಂಗ್ರೆಸ್‌ನ ಮಾಣಿಕಂ ಟ್ಯಾಗೋರ್ ಸೇರಿದಂತೆ ಅನೇಕ ಸಂಸದರು ನೀಟ್ ವಿವಾದದ ಕುರಿತು ಕುರಿತು ಮುಂದೂಡಿಕೆ ನಿರ್ಣಯವನ್ನು ಮಂಡಿಸಿದರು. ಆದರೆ, ಸದನದಲ್ಲಿ ರಾಹುಲ್ ಗಾಂಧಿ ಬೇಡಿಕೆಗೆ ಆಸನದಿಂದ ಯಾವುದೇ ಭರವಸೆ ಸಿಗದ ಕಾರಣ ಸದ್ಯ ಚರ್ಚೆ ನಡೆಯುವುದಿಲ್ಲ ಎಂದು ಹೇಳಲಾಗಿದೆ. ಈ ಕುರಿತು ಲೋಕಸಭೆಯಲ್ಲಿ ಭಾರಿ ಕೋಲಾಹಲ ಉಂಟಾಗಿ ಸದನದ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು.

ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನೀಟ್ ವಿಷಯ ಪ್ರಸ್ತಾಪಿಸಿ, ವಿರೋಧ ಪಕ್ಷದ ಸಂಸದರೊಂದಿಗೆ ಈ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯವನ್ನು ಮೊದಲು ಚರ್ಚಿಸಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಒತ್ತಾಯಿಸಿದರು. ವಿರೋಧ ಪಕ್ಷದ ನಾಯಕ, "ನಾವು ಪ್ರತಿಪಕ್ಷಗಳು ಮತ್ತು ಸರ್ಕಾರದ ಪರವಾಗಿ ಭಾರತದ ವಿದ್ಯಾರ್ಥಿಗಳಿಗೆ ಜಂಟಿ ಸಂದೇಶವನ್ನು ನೀಡಲು ಬಯಸಿದ್ದೇವೆ. ನಾವು ಇದನ್ನು ಪ್ರಮುಖ ವಿಷಯ ಎಂದು ಪರಿಗಣಿಸುತ್ತೇವೆ. ಆದ್ದರಿಂದ, ನಾವು ವಿದ್ಯಾರ್ಥಿಗಳ ಮೇಲಿನ ಗೌರವದಿಂದ ಯೋಚಿಸಿದ್ದೇವೆ ಎಂದರು. ಆದರೆ, ಸ್ಪೀಕರ್ ಅದಕ್ಕೆ ಅನುಮತಿ ನೀಡಿದ್ದರಿಂದ ಕೋಲಾಹಲ ಉಂಟಾಯಿತು ಮತ್ತು ಸದನವನ್ನು 12 ಗಂಟೆಗೆ ಮುಂದೂಡಲಾಯಿತು.

ಇದೇ ರೀತಿಯಲ್ಲಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಟ್ ವಿಷಯ ಪ್ರಸ್ತಾಪಿಸಿದರು. ಕೂಡಲೇ ಸದನದಲ್ಲಿ ಚರ್ಚೆ ನಡೆಸಬೇಕು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನೀಟ್ ಕುರಿತು ಚರ್ಚೆ ಅಗತ್ಯ. ಆದರೆ, ಸದ್ಯ ಚರ್ಚೆ ಬೇಡ ಎಂದು ಆಡಳಿತ ಪಕ್ಷ ಹಾಗೂ ಆಸನ ಸದಸ್ಯರು ಹೇಳಿದರು ಎಂದು ಖರ್ಗೆ ಹೇಳಿದರು. ಈ ವಿಚಾರವಾಗಿ ಸದನದಲ್ಲಿ ಗದ್ದಲ ಉಂಟಾಯಿತು. ಅಂತಿಮವಾಗಿ ರಾಜ್ಯಸಭೆಯ ಅಧ್ಯಕ್ಷರು ಸದನದ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು. ಈ ಮೂಲಕ ಉಭಯ ಸದನಗಳಲ್ಲಿ ಕಲಾಪ ಆರಂಭವಾದ ಕೂಡಲೇ ಕೋಲಾಹಲ ಉಂಟಾಗಿ ಸದನವನ್ನು ಒಂದು ಗಂಟೆ ಮುಂದೂಡಲಾಯಿತು.

NEET-UG ಮತ್ತು UGC-NET ಪರೀಕ್ಷೆಗಳ ವಿವಾದದ ನಡುವೆ, ಕೇಂದ್ರೀಯ ತನಿಖಾ ದಳ (ಸಿಬಿಐ) ಜೂನ್ 23 ರಂದು ಎನ್‌ಟಿಎ ಪರೀಕ್ಷೆಯ ನಡವಳಿಕೆಯಲ್ಲಿನ ಅಕ್ರಮಗಳ ಕುರಿತು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದೆ ಮತ್ತು ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿದೆ.

ಓದಿ: ಕಳಪೆ ಪೂರಕ ಆಹಾರ ಪೂರೈಸಿದರೆ ಡಿಡಿ ವಿರುದ್ಧ ಕಠಿಣ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾರ್ನಿಂಗ್​​ - POOR FOOD SUPPLY HEBBALKAR WARNING

ETV Bharat Logo

Copyright © 2024 Ushodaya Enterprises Pvt. Ltd., All Rights Reserved.