ETV Bharat / bharat

ಭಾರತದಲ್ಲಿನ ದೇವಾಲಯಗಳಲ್ಲಿ ನಡೆದ ಪ್ರಮುಖ ಕಾಲ್ತುಳಿತ ದುರಂತಗಳ ಒಂದು ನೋಟ - Stampedes

author img

By ETV Bharat Karnataka Team

Published : Jul 2, 2024, 8:02 PM IST

ದೇಶದ ಧಾರ್ಮಿಕ ಕೇಂದ್ರಗಳಲ್ಲಿ ಆಗಾಗ ಕಾಲ್ತುಳಿತ ಸಂಭವಿಸಿ ಸಾಕಷ್ಟು ಭಕ್ತರು ಸಾವನ್ನಪ್ಪುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಅದರಂತೆ ಪ್ರಮುಖ ಕಾಲ್ತುಳಿತದ ಘಟನೆಗಳು ಇಲ್ಲಿವೆ.

stampedes
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಕಾಲ್ತುಳಿತ (ETV Bharat (ಸಂಗ್ರಹ ಚಿತ್ರ))

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ದೇಶದಲ್ಲಿ ಇಂತಹುದೇ ಅನೇಕ ಘಟನೆಗಳು ನಡೆದಿದ್ದವು. ಅದರಲ್ಲಿ ಕೆಲವು ಘಟನೆಗಳ ವಿವರ ಹೀಗಿದೆ.

ಅಕ್ಟೋಬರ್ 13, 2013: ಮಧ್ಯಪ್ರದೇಶದ ದಾತಿಯಾದ ರತನ್‌ಗಢ ಹಿಂದೂ ದೇವಾಲಯದ ಬಳಿ ಕಾಲ್ತುಳಿತದಲ್ಲಿ ಬರೋಬ್ಬರಿ 89 ಜನರು ಸಾವನ್ನಪ್ಪಿದ್ದರು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ರತನ್‌ಗಢ್‌ನಲ್ಲಿ ದೇವಸ್ಥಾನಕ್ಕೆ ಹೋಗುವ ಸಿಂಧ್ ನದಿಯ ಸೇತುವೆಯ ಮೇಲಿನ ಕಾಲ್ತುಳಿತದಲ್ಲಿ ಈ ದುರ್ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಅಲ್ಲಿ ಲಕ್ಷಾಂತರ ಭಕ್ತರು ಜಮಾಯಿಸಿದ್ದರು.

14.01.2011: ಕೇರಳದ ಶಬರಿಮಲೆ ದೇಗುಲದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬರೋಬ್ಬರಿ 106 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು; 100ಕ್ಕೂ ಹೆಚ್ಚು ಮಂದಿ ಈ ಘಟನೆಯಲ್ಲಿ ಗಾಯಗೊಂಡಿದ್ದರು. ಕೇರಳದ ಇಡುಕ್ಕಿ ಜಿಲ್ಲೆಯ ಪುಲ್ಮೇಡು ಎಂಬಲ್ಲಿ ಮನೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳ ಮೇಲೆ ಜೀಪ್ ಡಿಕ್ಕಿ ಹೊಡೆದಿದ್ದರಿಂದ ಈ ಕಾಲ್ತುಳಿತ ಸಂಭವಿಸಿತ್ತು. ಯಾತ್ರಾರ್ಥಿಗಳು ಬಸ್ ಹಿಡಿಯಲು ಬರುತ್ತಿದ್ದಾಗ ಪುಲ್ಮೇಡುವಿನಲ್ಲಿ ಈ ಕಾಲ್ತುಳಿತವಾಗಿತ್ತು. ಇದರಲ್ಲಿ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

04.03.2010: ಉತ್ತರ ಪ್ರದೇಶದ ಪ್ರತಾಪಗಢದ ರಾಮ್ ಜಾಂಕಿ ದೇವಸ್ಥಾನದಲ್ಲಿ ಸ್ವಯಂ ಘೋಷಿತ ದೇವಮಾನವನಿಂದ ಉಚಿತ ಬಟ್ಟೆ ಮತ್ತು ಆಹಾರವನ್ನು ಪಡೆಯಲು ಜನರು ಮುಗಿಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿ 63 ಜನರು ಸಾವನ್ನಪ್ಪಿದರು. ಸುಮಾರು 5,000 ಭಕ್ತರು ಕೃಪಾಲು ಮಹಾರಾಜ್ ಆಯೋಜಿಸಿದ್ದ ಭಂಡಾರ (ಸಮುದಾಯ ಭೋಜನ) ಗಾಗಿ ಜಮಾಯಿಸಿದ್ದರು. ಆರಂಭಿಕ ವರದಿಗಳ ಪ್ರಕಾರ, ಸೈಟ್‌ನಲ್ಲಿನ ಒಂದು ಮುಖ್ಯ ದ್ವಾರವು ಕುಸಿದು ಬಿದ್ದ ಪರಿಣಾಮ ಈ ಘಟನೆ ನಡೆದಿದ್ದರಿಂದ ಭಕ್ತರು ನೂಕುನುಗ್ಗಲು ಏರ್ಪಟ್ಟಿತ್ತು.

30.09.2008: ರಾಜಸ್ಥಾನದ ಜೋಧ್‌ಪುರದ ಮೆಹ್ರಾನ್‌ಗಡ್ ಕೋಟೆ ಆವರಣದಲ್ಲಿರುವ ಚಾಮುಂಡಾ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತದಲ್ಲಿ ಬರೋಬ್ಬರಿ 244 ಜನರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಭಕ್ತರಿಂದ ಕಿಕ್ಕಿರಿದಿದ್ದ ದೇವಸ್ಥಾನದಲ್ಲಿನ ದೇವರಿಗೆ ಹೋಗುವ ಕಿರಿದಾದ ಹಾದಿಯಲ್ಲಿ ಈ ಘಟನೆ ಸಂಭವಿಸಿತ್ತು.

03.08.2006: ಹಿಮಾಚಲ ಪ್ರದೇಶದ ನೈನಾ ದೇವಿ ದೇವಸ್ಥಾನದಲ್ಲಿ ನಡೆದ ಭೀಕರ ಕಾಲ್ತುಳಿತದಲ್ಲಿ ಸುಮಾರು 150 ಭಕ್ತರು ಮೃತಪಟ್ಟಿದ್ದರು. ಮತ್ತು 400 ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಭೂಕುಸಿತ ಮತ್ತು ಹತ್ತಿರದ ಬೆಟ್ಟದಿಂದ ಬಂಡೆಗಳು ಉರುಳುವ ವದಂತಿಗಳು ಭಕ್ತರಲ್ಲಿ ಭಯವನ್ನುಂಟು ಮಾಡಿತ್ತು. ಇದರಿಂದಾಗಿ ನೂಕುನುಗ್ಗಲು ಉಂಟಾಗಿತ್ತು.

26.01.2005: ಪಶ್ಚಿಮ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವೈ ಬಳಿಯ ಮಂಧೇರ್ ದೇವಿ ದೇವಸ್ಥಾನದಲ್ಲಿ ನಡೆದ ದೊಡ್ಡ ದುರಂತದಲ್ಲಿ 291 ಭಕ್ತರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ವೈರಿಂಗ್‌ನಲ್ಲಿ ಆಗಿದ್ದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಿಡಿಗಳು ಹೊತ್ತಿಕೊಂಡಿದ್ದರಿಂದ ಭಯಭೀತರಾದ ಸಾವಿರಾರು ಭಕ್ತರು ಅಲ್ಲಿಂದ ಓಟಕ್ಕಿತ್ತಿದ್ದರು. ಇನ್ನು ದೇವಾಲಯಕ್ಕೆ ಹೋಗುವ ಕಿರಿದಾಗಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು. ಬಾಗಿಲು ಕಿರಿದಾಗಿದ್ದರಿಂದ ಜನರು ಮುಗ್ಗರಿಸಿ ಒಬ್ಬರ ಮೇಲೊಬ್ಬರು ಬಿದ್ದಿದ್ದರು.

ಇದನ್ನೂ ಓದಿ : ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಭಾರಿ ಕಾಲ್ತುಳಿತ: 60 ಮಂದಿ ಸಾವು, ನೂರರ ಗಡಿ ದಾಟುವ ಸಾಧ್ಯತೆ, ಸಿಎಂ ಯೋಗಿ ಸಂತಾಪ - STAMPEDE BROKE OUT HATHRAS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.