ETV Bharat / bharat

ಮಾಧವ್ ​ನ್ಯಾಷನಲ್​ ಪಾರ್ಕ್​ ಇದೀಗ ಮಧ್ಯಪ್ರದೇಶದ 8ನೇ ರಾಷ್ಟ್ರೀಯ ಹುಲಿ ಸಂರಕ್ಷಣಾ ಉದ್ಯಾನ - MADHAV NATIONAL PARK

ಈಗಾಗಲೇ ಕನ್ಹಾ, ಸತ್ಪುರ್​, ಬಂಢಾವಗಢ್​​, ಪೆಂಚ್​, ಸಂಜಯ್​ ದುಬ್ರಿ, ಪನ್ನಾ ಮತ್ತು ವೀರಂಗನ ದುರ್ಗಾವತಿ ಎಂಬ ಎಂಟು ಹುಲಿ ಸಂರಕ್ಷಿತ ತಾಣವನ್ನು ಮಧ್ಯಪ್ರದೇಶ ಹೊಂದಿದೆ.

madhav-national-park-in-madhya-pradesh-designated-as-8th-tiger-reserve
ಸಾಂದರ್ಭಿಕ ಚಿತ್ರ (ANI)
author img

By PTI

Published : Dec 2, 2024, 12:31 PM IST

ಭೋಪಾಲ್​, ಮಧ್ಯಪ್ರದೇಶ: ಈಗಾಗಲೇ ಏಳು ರಾಷ್ಟ್ರೀಯ ಹುಲಿ ಸಂರಕ್ಷಣಾ ಉದ್ಯಾನ ಹೊಂದಿರುವ ಮಧ್ಯಪ್ರದೇಶದಲ್ಲಿ ಎಂಟನೇ ಪಾರ್ಕ್ ಪ್ರಸ್ತಾಪಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್​ಟಿಸಿಎ) ತಾಂತ್ರಿಕ ಸಮಿತಿ ಸಮ್ಮತಿ ಸೂಚಿಸಿದೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಮಾಧವ್​ ರಾಷ್ಟ್ರೀಯ ಪಾರ್ಕ್​ ಹುಲಿ ಸಂರಕ್ಷಣೆ ಉದ್ಯಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಕನ್ಹಾ, ಸಾತ್ಪುರ್​, ಬಂಢಾವಗಢ್​​, ಪೆಂಚ್​, ಸಂಜಯ್​ ದುಬ್ರಿ, ಪನ್ನಾ ಮತ್ತು ವೀರಂಗನ ದುರ್ಗಾವತಿ ಎಂಬ ಎಂಟು ಹುಲಿ ಸಂರಕ್ಷಿತ ತಾಣವನ್ನು ಮಧ್ಯಪ್ರದೇಶ ಹೊಂದಿದೆ. ಈ ಕುರಿತು ಮಾತನಾಡಿರುವ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಹೆಚ್ಚುವರಿ ಪ್ರಧಾನ ಮುಖ್ಯಸ್ಥರಾದ ಎಲ್​ ಕೃಷ್ಣಮೂರ್ತಿ ಮಾತನಾಡಿ, ಎನ್​ಟಿಸಿಎ ತಾಂತ್ರಿಕ ಸಮಿತಿಯು ಮಾಧವ್​ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತಧಾಮವಾಗುವ ಪ್ರಸ್ತಾವಕ್ಕೆ ಸಮ್ಮತಿಸಿದೆ. ಈ ಉದ್ಯಾನ 1,751 ಚ. ಕಿ.ಮೀ ಇದ್ದು, ಪ್ರಮುಖ ಪ್ರದೇಶ 375 ಚ.ಕಿ.ಮೀ ವ್ಯಾಪಿಸಿದೆ. ಬಫರ್​ ಪ್ರದೇಶ 1,276 ಚ. ಕಿ.ಮೀ ಇದೆ. ಈ ಪಾರ್ಕ್​ನಲ್ಲಿ ಹುಲಿಗಳನ್ನು ಬಿಡಲು ಸಮಿತಿ ಸಮ್ಮತಿಸಿದೆ ಎಂದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಮುಖ್ಯಮಂತ್ರಿ ಮೋಹನ್​ ಯಾದವ್​ ಅವರ ಸೂಚನೆ ಮೇರೆಗೆ ಈ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಮಾಧವ್​ ಮತ್ತು ಕುನೋ ರಾಷ್ಟ್ರೀಯ ಉದ್ಯಾನದಲ್ಲಿನ ವನ್ಯಜೀವಿಗಳ ನಿರ್ವಹಣೆ ಬಲಪಡಿಸುವ ಉದ್ದೇಶದಿಂದ ಮಧ್ಯಪ್ರದೇಶದ ಸರ್ಕಾರ ಈ ಸಂರಕ್ಷಣಾ ಉಪಕ್ರಮಕ್ಕೆ ಮುಂದಾಗಿದೆ. ಇದು ಸ್ಥಳೀಯ ಸಮುದಾಯಕ್ಕೆ ಪರಿಸರ ಪ್ರವಾಸೋದ್ಯಮ ಪ್ರಯೋಜನ ತಂದುಕೊಡುವ ಜೊತೆಗೆ ಪ್ರದೇಶದಲ್ಲಿ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದರು.

ಕುನೋ ರಾಷ್ಟ್ರೀಯ ಉದ್ಯಾನ ದೇಶದಲ್ಲಿರುವ ಏಕ ಮಾತ್ರ ಚಿರತೆ ಸಂರಕ್ಷಣಾ ಕೇಂದ್ರವಾಗಿದೆ. ಇದು ಶೋಪುರ್​​ ಜಿಲ್ಲೆಯಲ್ಲಿದ್ದು, ಮಾಧವ್ ರಾಷ್ಟ್ರೀಯ ಉದ್ಯಾನದ ಪಕ್ಕದಲ್ಲಿದೆ.

ಎನ್​ಟಿಸಿಎ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ಬಿಡುಗಡೆ ಮಾಡಿದ ಹುಲಿ ಸ್ಥಿತಿಗತಿ: ಭಾರತದಲ್ಲಿ ಸಹ - ಪರಭಕ್ಷಕ ಮತ್ತು ಬೇಟೆ 2022ರ ವರದಿ ಅನುಸಾರ, ಮಧ್ಯಪ್ರದೇಶದಲ್ಲಿ 785 ಹುಲಿಗಳಿದ್ದು, ಇದು ದೇಶದಲ್ಲಿಯೇ ಅತಿಹೆಚ್ಚು ಹುಲಿ ಹೊಂದಿರುವ ರಾಜ್ಯವಾಗಿದೆ. ಇದರ ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು, ಇಲ್ಲಿ 653, ಉತ್ತರಾಖಂಡ್​ನಲ್ಲಿ 560 ಹುಲಿಗಳಿವೆ.

ಇದನ್ನೂ ಓದಿ: ದೇಶದ 14 ಹುಲಿ ಸಂರಕ್ಷಿತ ಪ್ರದೇಶಗಳಿಗೆ ಜಾಗತಿಕ ಮಾನ್ಯತೆ: ಬಂಡೀಪುರ ಕೂಡ ಅತ್ಯುತ್ತಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.