ETV Bharat / bharat

ಪಾಲಿಕೆ ಮೇಯರ್​- ದಫೇದಾರ್​ 'ಲಿಪ್​ಸ್ಟಿಕ್'​ ಫೈಟ್​: ವರ್ಗಾವಣೆಗೆ ಕಾರಣವಾಯ್ತಾ ತುಟಿಗೆ ಹಚ್ಚುವ ಬಣ್ಣ? - TRANSFER OVER LIPSTICK - TRANSFER OVER LIPSTICK

ಚೆನ್ನೈ ಮಹಾನಗರ ಪಾಲಿಕೆಯ ಮಹಿಳಾ ದಫೇದಾರ್​ ವರ್ಗಾವಣೆ ವಿಚಾರ ಭಾರಿ ಸದ್ದು ಮಾಡಿದೆ. ತಾವು ಹಚ್ಚುತ್ತಿದ್ದ 'ಲಿಪ್​ಸ್ಟಿಕ್​'​ ಕಾರಣಕ್ಕಾಗಿ ವರ್ಗಾವಣೆ ಶಿಕ್ಷೆ ವಿಧಿಸಲಾಗಿದೆ ಎಂದು ದಫೇದಾರ್​ ಆರೋಪಿಸಿದ್ದಾರೆ.

ಚೆನ್ನೈ ಪಾಲಿಕೆ ಮೇಯರ್​- ದಫೇದಾರ್​ 'ಲಿಪ್​ಸ್ಟಿಕ್'​ ಫೈಟ್​
ಚೆನ್ನೈ ಪಾಲಿಕೆ ಮೇಯರ್​- ದಫೇದಾರ್​ 'ಲಿಪ್​ಸ್ಟಿಕ್'​ ಫೈಟ್​ (ETV Bharat)
author img

By ETV Bharat Karnataka Team

Published : Sep 26, 2024, 8:02 PM IST

ಚೆನ್ನೈ (ತಮಿಳುನಾಡು): ಮಹಿಳೆಯರು ಸೌಂದರ್ಯ ವರ್ಧಕಗಳನ್ನು ಬಳಸುವುದು ಸಹಜ. ಅವೇ ಕೆಲವೊಮ್ಮೆ ಇಬ್ಬರ ಮಧ್ಯೆ ಮತ್ಸರಕ್ಕೂ ಕಾರಣವಾಗುತ್ತವೆ. ತುಟಿಗಳ ಅಂದ ಹೆಚ್ಚಿಸುವ 'ಲಿಪ್​ಸ್ಟಿಕ್​​' ಚೆನ್ನೈ ಮೇಯರ್​ ಮತ್ತು ಆಕೆಯ ದಫೇದಾರ್​ ನಡುವೆ ಮುನಿಸಿಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೊಂದು ವಿವಾದ ಸ್ವರೂಪ ಪಡೆದು ಮಾಧ್ಯಮಗಳಲ್ಲಿ ವರದಿಯೂ ಆಗಿದೆ.

ಚೆನ್ನೈ ಮಹಾನಗರ ಪಾಲಿಕೆಯ ಮೇಯರ್ ಪ್ರಿಯಾ ಅವರ ದಫೇದಾರ್​​ ಆಗಿರುವ ಮಾಧವಿ ಎಂಬಾಕೆಯನ್ನು ವರ್ಗಾವಣೆ ಮಾಡಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದ್ದು, ಮೇಯರ್ ಹಚ್ಚುವ ಲಿಪ್​​ಸ್ಟಿಕ್​​ ಬಣ್ಣವನ್ನ ತಾನು ಬಳಸಿದ್ದಕ್ಕಾಗಿ ವರ್ಗಾವಣೆ ಮಾಡಲಾಗಿದೆ ಎಂದು ವರ್ಗಗೊಂಡ ಮಹಿಳಾ ದಫೇದಾರ್​​ ಆರೋಪಿಸಿದ್ದಾರೆ. ಆದರೆ, ಇದನ್ನು ಮೇಯರ್​ ಕಚೇರಿ ನಿರಾಕರಿಸಿದೆ.

ಏನಿದು ಆರೋಪ?: ಚೆನ್ನೈ ಮೇಯರ್ ಪ್ರಿಯಾ ಅವರ ಮಹಿಳಾ ದಫೇದಾರ್ ಆಗಿ ಕೆಲಸ ಮಾಡುತ್ತಿದ್ದ ಮಾಧವಿ (50) ಎಂಬಾಕೆಯನ್ನು ಕಳೆದ ತಿಂಗಳು ಮನಾಲಿ ಪ್ರಾದೇಶಿಕ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಆದೇಶದಲ್ಲಿ ಕರ್ತವ್ಯಲೋಪ, ನಿರ್ಲಕ್ಷ್ಯದ ಕಾರಣ ನೀಡಲಾಗಿದೆ. ಆದರೆ, ಮಾಧವಿ ಅವರ ವಾದವೇ ಬೇರೆಯಾಗಿದೆ. ತನ್ನನ್ನು ಮೇಯರ್​ ಅವರು ವೈಯಕ್ತಿಕ ಕಾರಣಕ್ಕಾಗಿ ಟ್ರಾನ್ಸ್​​ಫರ್​​ ಮಾಡಿದ್ದಾರೆ ಎಂದು ದೂರಿದ್ದಾರೆ.

ಒಂದೇ ಬಣ್ಣದ ಲಿಪ್​​ಸ್ಟಿಕ್ ಕಾರಣ: ವರ್ಗಗೊಂಡ ಮಾಧವಿ ಆರೋಪಿಸುವಂತೆ, ಮೇಯರ್ ಪ್ರಿಯಾ ಅವರು ಕೆಂಪು ಬಣ್ಣದ ಲಿಪ್​ಸ್ಟಿಕ್​ ಹಚ್ಚುತ್ತಿದ್ದರು. ಇಂಥದ್ದೇ ಬಣ್ಣವನ್ನು ನಾನೂ ಬಳಸುತ್ತಿದೆ. ಇದು ಮೇಯರ್​ ಅವರಿಗೆ ಸಹಿಸಲಾಗುತ್ತಿರಲಿಲ್ಲ. ಈ ಬಗ್ಗೆ ಅವರ ಆಪ್ತ ಸಹಾಯಕನ ಬಳಿ ಹೇಳಿಕೊಂಡಿದ್ದರು. ಇನ್ನು ಮುಂದೆ ಲಿಪ್‌ಸ್ಟಿಕ್ ಧರಿಸಬಾರದು ಎಂದು ಆತ ಸೂಚನೆ ನೀಡಿದ್ದ. ಲಿಪ್‌ಸ್ಟಿಕ್ ಹಚ್ಚುವುದು ನನ್ನ ವೈಯಕ್ತಿಕ ಆಯ್ಕೆ ಎಂದು ಆಪ್ತ ಸಹಾಯಕನಿಗೆ ಹೇಳಿದ್ದೆ ಎಂದು ಅವರು ಹೇಳಿದರು.

ಕಚೇರಿ ಕೆಲಸದ ವೇಳೆ ಇತರ ಸಿಬ್ಬಂದಿ ಜೊತೆಗೆ ಮಾತನಾಡದಂತೆ, ರಜಾದಿನಗಳಲ್ಲಿ ಯಾರೊಂದಿಗೂ ಹೊರಗೆ ಹೋಗದಂತೆ ತಾಕೀತು ಮಾಡಲಾಗಿತ್ತು. ಕೆಲಸದ ವಿಚಾರಗಳಲ್ಲಿ ಮೇಯರ್​​ ವಿನಾಕಾರಣ ಟೀಕಿಸುತ್ತಿದ್ದರು. ಇದೀಗ, ಮನಾಲಿ ಮಂಡಲದ ಕಚೇರಿಗೆ ನನ್ನನ್ನು ವರ್ಗ ಮಾಡಲಾಗಿದೆ. ಕಚೇರಿಯು ತನ್ನ ಮನೆಯಿಂದ ತುಂಬಾ ದೂರವಿದೆ ಎಂದು ಮಾಧವಿ ಅಲವತ್ತುಕೊಂಡಿದ್ದಾರೆ.

ಆರೋಪ ನಿರಾಕರಿಸಿದ ಮೇಯರ್: ಮಹಿಳಾ ದಫೇದಾರ್​​ ವರ್ಗಾವಣೆಗೆ ಲಿಪ್​​ಸ್ಟಿಕ್​ ಕಾರಣ ಎಂಬ ಆರೋಪವನ್ನು ಮೇಯರ್​ ಕಚೇರಿ ನಿರಾಕರಿಸಿದೆ. ಮಾಧವಿ ಅವರ ಕರ್ತವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿತನ ಸ್ಥಳಾಂತರಕ್ಕೆ ಕಾರಣ. ಈ ಬಗ್ಗೆ ಅವರಿಗೆ ಮೆಮೊ ಕೂಡ ನೀಡಲಾಗಿದೆ. ತಮ್ಮ ತಪ್ಪನ್ನು ತಿದ್ದಿಕೊಳ್ಳದ ಕಾರಣ ವರ್ಗ ಮಾಡಲಾಗಿದೆ ಎಂದು ತಿಳಿಸಿದೆ.

ಆಕೆಯ ವೈಯಕ್ತಿಕ ಅಂದದ ಬಗ್ಗೆ ಯಾವುದೇ ವಿಚಾರಣೆ ಅಥವಾ ಸ್ಪಷ್ಟೀಕರಣವನ್ನು ಕೇಳಲಾಗಿಲ್ಲ. ಕೆಲ ಮಾಧ್ಯಮಗಳಲ್ಲಿ ವೈಯಕ್ತಿಕ ಅಂದದ ಕಾರಣದಿಂದ ವರ್ಗ ಮಾಡಿದ ಬಗ್ಗೆ ತಪ್ಪಾಗಿ ವರದಿಯಾಗಿದೆ. ಇದು ಕೇವಲ ಆಡಳಿತಾತ್ಮಕ ಕಾರಣಗಳಿಂದಾಗಿಯೇ ಹೊರತು ಆಕೆಯ ವೈಯಕ್ತಿಕ ಕಾರಣಕ್ಕಾಗಿ ವರ್ಗ ಮಾಡಲಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮಾನಹಾನಿ ಕೇಸ್​​ನಲ್ಲಿ ಶಿವಸೇನೆ ನಾಯಕ ಸಂಜಯ್​ ರಾವುತ್​ಗೆ 15 ದಿನ ಜೈಲು ಶಿಕ್ಷೆ: ಜಾಮೀನು ಮಂಜೂರು - Sanjay Raut Gets Imprisonment

ETV Bharat Logo

Copyright © 2025 Ushodaya Enterprises Pvt. Ltd., All Rights Reserved.