ETV Bharat / bharat

ಕಳೆದ 10 ವರ್ಷದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅದ್ಭುತ.. ಜೀವಿತಾವಧಿ 85 ವರ್ಷಗಳವರೆಗೆ ಹಿಗ್ಗಿಸುವ ಯತ್ನ: ನೀತಿ ಆಯೋಗದ ಸದಸ್ಯ - Niti Aayog

1946ರಲ್ಲಿ ಬೋರ್ ಸಮಿತಿಯ ವರದಿ ಪ್ರಕಾರ ಭಾರತೀಯರ ಜೀವಿತಾವಧಿ 27 ವರ್ಷಗಳಾಗಿತ್ತು. ಇದೇ ಸಮಯದಲ್ಲಿ ಬ್ರಿಟನ್​ನಲ್ಲಿ ಜೀವಿತಾವಧಿ 58 ವರ್ಷಗಳಾಗಿತ್ತು. ಇಂದು ಭಾರತದಲ್ಲಿ ಜೀವಿತಾವಧಿ 71 ವರ್ಷವಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ತಿಳಿಸಿದರು.

VK Paul
ವಿ.ಕೆ.ಪೌಲ್
author img

By ETV Bharat Karnataka Team

Published : Mar 2, 2024, 8:42 PM IST

ನವದೆಹಲಿ: ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಳೆದ 10 ವರ್ಷಗಳು ಅದ್ಭುತವಾಗಿದ್ದು, ಮುಂದಿನ 25 ವರ್ಷಗಳಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮನುಷ್ಯನ ಜೀವಿತಾವಧಿ 71ರಿಂದ 85 ವರ್ಷಗಳವರೆಗೆ ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ತಿಳಿಸಿದ್ದಾರೆ.

ಎಎನ್​ಐ ಸುದ್ಧಿಸಂಸ್ಥೆಯ ಸಂವಾದ ಕಾರ್ಯಕ್ರಮದಲ್ಲಿ ಆರೋಗ್ಯ ವಲಯದ ಕುರಿತು ಮಾತನಾಡಿದ ಅವರು, ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕೆ ಸರಿಹೊಂದುವ ಆರೋಗ್ಯ ವ್ಯವಸ್ಥೆಯನ್ನು ಸರ್ಕಾರ ಹುಡುಕುತ್ತಿದೆ. ಜೀವನಕ್ಕೆ ಆರೋಗ್ಯ ಅತ್ಯಗತ್ಯ. ಆರೋಗ್ಯವನ್ನು ಮಾನವ ಹಕ್ಕು ಎಂದು ಪರಿಗಣಿಸಲಾಗಿದೆ. ಇದು ಸಂವಿಧಾನದಲ್ಲೂ ಉಲ್ಲೇಖವಾಗಿದೆ. ಕಾಲಕಾಲಕ್ಕೆ ಅತ್ಯುನ್ನತ ನ್ಯಾಯಾಲಯಗಳು ಇದನ್ನು ಎತ್ತಿಹಿಡಿದಿವೆ ಎಂದರು.

ಸ್ವಾತಂತ್ರ್ಯದ ನಂತರ ಆರೋಗ್ಯವನ್ನು ಸಾಧ್ಯವಾದಷ್ಟು ಕೈಗೆಟುಕುವ ದರದಲ್ಲಿ ಸಂಪೂರ್ಣ ಮತ್ತು ಗುಣಮಟ್ಟದಿಂದ ಒದಗಿಸಲು ಪ್ರಯತ್ನಗಳನ್ನು ಮಾಡಲಾಗಿದೆ. ಈ ಪ್ರಯಾಣದಲ್ಲಿ ಕಳೆದ 10 ವರ್ಷಗಳು ಅಸಾಧಾರಣವಾಗಿವೆ. ಇದು ಒಂದು ಮಹತ್ವದ ತಿರುವು. ಆರೋಗ್ಯ ಕ್ಷೇತ್ರದಲ್ಲಿ ನಿಜವಾಗಿಯೂ ಗಣನೀಯ ಬದಲಾವಣೆಗಳು ನಡೆದಿವೆ ಎಂದು ಹೇಳಿದರು.

ಆರೋಗ್ಯ ಕ್ಷೇತ್ರದ ನೀತಿಗಳ, ಅದನ್ನು ತಲುಪಿಸುವ ಹಂತ ಮತ್ತು ಸಾಂಕ್ರಾಮಿಕದಂತಹ ಸವಾಲನ್ನು ಎದುರಿಸುವ ಹಂತದಲ್ಲಿ ವೇಗವರ್ಧನೆ ಸ್ಪಷ್ಟವಾಗಿ ಉಂಟಾಗಿದೆ. ವಾಸ್ತವವಾಗಿ ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕೆ ಸೂಕ್ತವಾದ ಆರೋಗ್ಯ ವ್ಯವಸ್ಥೆ ಮತ್ತು ಆರೋಗ್ಯ ರಕ್ಷಣೆಯ ಫಲಿತಾಂಶಗಳನ್ನು ಎದುರು ನೋಡುತ್ತಿದ್ದೇವೆ. ಏಕೆಂದರೆ, ಆರೋಗ್ಯವು ರಾಷ್ಟ್ರದ ಸಮೃದ್ಧಿ ಶಕ್ತಗೊಳಿಸುತ್ತದೆ ಎಂದು ನಾನು ನಂಬುತ್ತೇನೆ ಎಂದರು.

ಭಾರತದ ಆರೋಗ್ಯ ವ್ಯವಸ್ಥೆ ಮತ್ತು ಆರೋಗ್ಯದ ಫಲಿತಾಂಶಗಳು ಉನ್ನತ ಕ್ರಮದಲ್ಲಿ ಇರಬೇಕು. ಇಂದು ಭಾರತದ ಜೀವಿತಾವಧಿ 71 ವರ್ಷವಾಗಿದೆ. 1946ರಲ್ಲಿ ಬೋರ್ ಸಮಿತಿ ತನ್ನ ವರದಿಯನ್ನು ನೀಡಿದಾಗ ಆ ಸಮಯದಲ್ಲಿ ಭಾರತೀಯರ ಜೀವಿತಾವಧಿ 27 ವರ್ಷಗಳಾಗಿತ್ತು. ಇದೇ ಸಮಯದಲ್ಲಿ ಬ್ರಿಟನ್​ನಲ್ಲಿ ಜೀವಿತಾವಧಿ 58 ವರ್ಷಗಳಾಗಿತ್ತು. ಭಾರತ ಮತ್ತು ಬ್ರಿಟನ್ ನಡುವೆ ಇಷ್ಟೊಂದು ವ್ಯತ್ಯಾಸ ಇತ್ತು ಎಂದು ವಿವರಿಸಿದರು.

ಮುಂದುವರೆದು, ಇಂದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು 85ರ ವಿಶಿಷ್ಟ ಜೀವಿತಾವಧಿ ಹೊಂದಿವೆ. ಆದ್ದರಿಂದ ನಾವೆಲ್ಲರೂ ಒಟ್ಟಾಗಿ ಮಾಡಬೇಕಾದ ಒಂದು ಪ್ರಯತ್ನ ಎಂದರೆ, ನಾವು ಈ ಜೀವಿತಾವಧಿಯನ್ನು 71 ರಿಂದ 85ಕ್ಕೆ ಅಥವಾ ಅದಕ್ಕಿಂತ ಹೆಚ್ಚಿನದಕ್ಕೆ ತಳ್ಳುವುದು. ಅದು ಮುಂದಿನ 24-25 ವರ್ಷಗಳ ಸವಾಲು. ಅದಕ್ಕಾಗಿ ಜೀವಿಸುವುದು ಸುಧಾರಿಸಬೇಕು. ಆರೋಗ್ಯದಲ್ಲಿ ಸೇವೆಗಳು ಲಭ್ಯವಾಗಬೇಕು. ನಮ್ಮ ಕೈಯಲ್ಲಿ ಆಗುವ ಕೆಲವು ರೋಗಗಳನ್ನು ತೊಡೆದು ಹಾಕಲು ನಾವು ಸಾಧ್ಯ ಇರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಪೌಲ್ ತಿಳಿಸಿದರು.

ಪ್ರಧಾನಿ ಈ ರಾಷ್ಟ್ರಕ್ಕೆ ನೀಡಿದ ಪರಿವರ್ತಕ ಪಥದಿಂದ ಈ ಪ್ರಯಾಣವು ಚಲಿಸುತ್ತಿದೆ. ಅದು ಈಗ ನಿಜವಾಗಿಯೂ ಘಾತೀಯವಾಗಬಹುದು. ನಾವು ಸಹ ಈ ದಿಕ್ಕಿನಲ್ಲಿ ಕೆಲಸ ಮಾಡಬೇಕಾಗಿದೆ. ಪ್ರಸ್ತುತ ಬೆಡ್​ ಮತ್ತು ಜನಸಂಖ್ಯೆಯ ಅನುಪಾತವು ಸುಮಾರು 1ರಿಂದ 1.5ರಷ್ಟಿದೆ. ಅಂದರೆ, ನಮ್ಮಲ್ಲಿ ಸುಮಾರು 12 ಲಕ್ಷ ಆಸ್ಪತ್ರೆಗಳಿವೆ. ಇದರಲ್ಲಿ ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಸಾರ್ವಜನಿಕ ವಲಯದ ಮತ್ತು ಸುಮಾರು ಆರು ಲಕ್ಷ ಖಾಸಗಿ ವಲಯದಲ್ಲಿವೆ. ಒಂದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಈ ಅನುಪಾತವು 3 ಆಗಿರಬೇಕು. ಹಾಗಾದರೆ ಮುಂದಿನ 10 ವರ್ಷಗಳಲ್ಲಿ 15 ಲಕ್ಷ ಹೆಚ್ಚು ಬೆಡ್​ಗಳನ್ನು ಹೊಂದಲು ನಾವು ಹೇಗೆ ಕೆಲಸ ಮಾಡುತ್ತೇವೆ ಎಂಬುವುದು ಮುಖ್ಯ. ಇದರಲ್ಲಿ ಖಾಸಗಿ ವಲಯದ ಪಾತ್ರ ಗಮನಾರ್ಹವಾಗಿದೆ. ಸರ್ಕಾರಿ ವಲಯವು ಕೂಡ ಅದರ ಹಾದಿಯನ್ನು ಮಾಡುತ್ತದೆ. ಆದರೆ, ಒಟ್ಟಾಗಿ ನಾವು ಈ ಅನುಪಾತ ತಲುಪಬೇಕು. ಅದರಲ್ಲೂ, ಈ ನಿಟ್ಟಿನಲ್ಲಿ ಖಾಸಗಿ ವಲಯವು ವೇಗವಾಗಿ ಸಾಗಬೇಕು ಎಂದು ಪ್ರತಿಪಾದಿಸಿದರು.

ರಾಜ್ಯಗಳು ಭೂಮಿ ಮತ್ತು ಮೂಲಸೌಕರ್ಯಗಳನ್ನು ಮಂಜೂರು ಮಾಡುತ್ತವೆ. ಇದಕ್ಕೆ ಕೇಂದ್ರ ಸರ್ಕಾರವು ಅನುಕೂಲಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಖಾಸಗಿ ವಲಯದ ಸಾಮರ್ಥ್ಯವನ್ನು ಇಲ್ಲಿಯವರೆಗೆ ಒಂದು ನಿರ್ದಿಷ್ಟ ಮಾದರಿಯ ಮೇಲೆ ನಿರ್ಮಿಸಲಾಗಿದೆ. ನಾವು ಅದನ್ನು ಮರು ಹೊಂದಿಸುತ್ತಿದ್ದೇವೆ. ಆರೋಗ್ಯ ಮತ್ತು ಸಂಶೋಧನಾ ವಿಭಾಗದಲ್ಲಿ ಆರ್ಥಿಕ ವಿಶ್ಲೇಷಣೆ, ಆರೋಗ್ಯ ತಂತ್ರಜ್ಞಾನ ಮೌಲ್ಯಮಾಪನಗಳನ್ನು ಹೊಂದಿದ್ದೇವೆ. ಖಾಸಗಿ ವಲಯಕ್ಕೆ ನನ್ನ ವಿನಂತಿ ಎಂದರೆ, ದಯವಿಟ್ಟು ನೀವು ಕೂಡ ಇದರ ಪಾಲುದಾರ ಎಂಬುವುದಾಗಿ ಪರಿಗಣಿಸಿ ಎಂದು ನೀತಿ ಆಯೋಗದ ಸದಸ್ಯರು ಹೇಳಿದರು. ಯಥಾರ್ಥ್ ಆಸ್ಪತ್ರೆಯ ಸಿಇಒ ಅಮಿತ್ ಕುಮಾರ್ ಸಿಂಗ್, ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯ ನರವಿಜ್ಞಾನ ಹಿರಿಯ ತಜ್ಞ ಡಾ.ಪಿ.ಎನ್.ರಂಜನ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಮಕ್ಕಳಲ್ಲಿ ಕಡಿಮೆ ತೂಕದ ದರ ಇಳಿಕೆ; ಸ್ಥೂಲಕಾಯತೆ 4 ಪಟ್ಟು ಹೆಚ್ಚಳ-ಲ್ಯಾನ್ಸೆಟ್​ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.