ನವದೆಹಲಿ: ಇಂದು ಅಂತಾರಾಷ್ಟ್ರೀಯ ವಿಕೋಪ ಅಪಾಯ ತಗ್ಗಿಸುವಿಕೆ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ವಿಕೋಪದಂತಹ ಕಠಿಣ ಪರಿಸ್ಥಿತಿಗಳಿಂದ ಮಕ್ಕಳನ್ನು ರಕ್ಷಿಸುವ ಮತ್ತು ಸಬಲೀಕರಣಗೊಳಿಸುವಲ್ಲಿ ಶಿಕ್ಷಣದ ನಿರ್ಣಾಯಕ ಪಾತ್ರದ ಮೇಲೆ ಈ ದಿನ ಕೇಂದ್ರೀಕರಿಸುತ್ತದೆ.
ಈ ವರ್ಷದ ಥೀಮ್, ಮಕ್ಕಳು ಎದುರಿಸುತ್ತಿರುವ ಆತಂಕವನ್ನು ಪರಿಹರಿಸುವ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ. ವಿಶೇಷವಾಗಿ ಅವರ ಸುರಕ್ಷತೆ, ಶಿಕ್ಷಣ ಮತ್ತು ಯೋಗಕ್ಷೇಮಕ್ಕೆ ಬೆದರಿಕೆಯೊಡ್ಡುವ ಹವಾಮಾನ ಸಂಬಂಧಿತ ವಿಪತ್ತುಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅವರಲ್ಲಿನ ಆತಂಕ ದೂರ ಮಾಡುವ ಅಗತ್ಯತೆ ಇದೆ.
ಯುನಿಸೆಫ್‌ನ ಇತ್ತೀಚಿನ ವರದಿಗಳ ಪ್ರಕಾರ, ಪ್ರಪಂಚದಾದ್ಯಂತ ಸುಮಾರು ಒಂದು ಶತಕೋಟಿ ಮಕ್ಕಳು ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ವಿಕೋಪಗಳ ಪರಿಣಾಮಗಳಿಂದ ತೀವ್ರ ಅಪಾಯದಲ್ಲಿದ್ದಾರೆ. ತೀವ್ರ ಪ್ರವಾಹ ಮತ್ತು ಇತರ ಹವಾಮಾನ-ಪ್ರೇರಿತ ವಿಪತ್ತುಗಳು ಆಗಾಗ್ಗೆ ಎದುರಾಗುತ್ತಿರುವುದು ಯುವ ಜನಸಂಖ್ಯೆಯನ್ನು ರಕ್ಷಿಸಲು ಪೂರ್ವಭಾವಿ ಕ್ರಮಗಳ ಅಗತ್ಯ ಬಹಳ ಮುಖ್ಯವಾಗಿದೆ.
ಗಮನಾರ್ಹವಾಗಿ, 2022 ರಲ್ಲಿ ಪ್ರವಾಹಗಳು ಚಾಡ್, ಗ್ಯಾಂಬಿಯಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವಾರು ದೇಶಗಳಲ್ಲಿನ ಮಕ್ಕಳ ಮೇಲೆ ಪರಿಣಾಮ ಬೀರಿದ್ದವು. ಅಂತಹ ವಿಪತ್ತುಗಳ ಪರಿಣಾಮಗಳು ದೈಹಿಕ ಹಾನಿಯನ್ನು ಮೀರಿ ವಿಸ್ತರಿಸುತ್ತವೆ. ಮಕ್ಕಳು ತಮ್ಮ ಶಿಕ್ಷಣ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.
ಪ್ರವಾಹದಿಂದ ಮಕ್ಕಳು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುತ್ತಾರೆ. ಇದು ಅಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ ಮತ್ತು ಅವರಿಗೆ ವಿವಿಧ ಸಮಸ್ಯೆಗಳು ಎದುರಾಗುತ್ತವೆ. ಆಘಾತಕಾರಿ ಅನುಭವಗಳು ಮಾನಸಿಕವಾಗಿ ಪರಿಣಾಮ ಬೀರಿ ಮಕ್ಕಳ ಬೆಳವಣಿಗೆ ಮತ್ತು ಭವಿಷ್ಯಕ್ಕೆ ತೊಂದರೆಯಾಗುತ್ತದೆ.
ವಿಪತ್ತಿನ ವೇಳೆ ಮಕ್ಕಳಿಗಾಗುವ ಸಮಸ್ಯೆಗಳ ಬಗ್ಗೆ ಗಮನಹರಿಸಿ: ರಾಷ್ಟ್ರೀಯ ಮತ್ತು ಸ್ಥಳೀಯ ವಿಕೋಪ ಅಪಾಯ ತಗ್ಗಿಸುವ ತಂತ್ರಗಳಲ್ಲಿ ಮಕ್ಕಳ ಅವಶ್ಯಕತೆಗಳನ್ನು ಸೇರಿಸುವುದರ ಮಹತ್ವವನ್ನು ತಜ್ಞರು ಒತ್ತಿಹೇಳುತ್ತಾರೆ. ವಿಪತ್ತು ಸನ್ನದ್ಧತೆ ಮತ್ತು ಪ್ರತಿಕ್ರಿಯೆಯನ್ನು ಗುರಿಯಾಗಿಟ್ಟುಕೊಂಡು ನೀತಿಗಳು ಮತ್ತು ತಂತ್ರಗಳನ್ನು ಅಭಿವೃದ್ಧಿಪಡಿಸುವಾಗ ಸರ್ಕಾರಗಳು ಮಕ್ಕಳಿಗೆ ಆಗುವ ಸಮಸ್ಯೆಗಳನ್ನು ಗುರುತಿಸುವುದು ಅತ್ಯಗತ್ಯ.
ಈ ನಿರ್ದಿಷ್ಟ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ಯುವ ಜನಸಂಖ್ಯೆಯನ್ನು ರಕ್ಷಿಸಲು ತಂತ್ರಗಳನ್ನು ವಿನ್ಯಾಸಗೊಳಿಸಬಹುದು ಮತ್ತು ವಿಪತ್ತುಗಳು ಅವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬಹುದು. ಇದಲ್ಲದೆ, ವಿಪತ್ತು ಅಪಾಯವನ್ನು ಕಡಿಮೆ ಮಾಡುವಲ್ಲಿ ಸಕ್ರಿಯ ಪಾತ್ರ ವಹಿಸಲು ಮಕ್ಕಳು ಮತ್ತು ಯುವಕರನ್ನು ಸಬಲೀಕರಣಗೊಳಿಸುವುದು ಈಗ ನಿರ್ಣಾಯಕವಾಗಿದೆ.
ಡಿಸಾಸ್ಟರ್ ರಿಸ್ಕ್ ರಿಡಕ್ಷನ್ 2015-2030 ರ ಸೆಂಡೈ ಫ್ರೇಮ್‌ವರ್ಕ್ ಮಕ್ಕಳು ಮತ್ತು ಯುವಕರನ್ನು ಅವರ ಜೀವನದ ಮೇಲೆ ಪರಿಣಾಮ ಬೀರುವ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಈ ಸಬಲೀಕರಣದಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ವಿಪತ್ತು ಸನ್ನದ್ಧತೆ, ಪ್ರತಿಕ್ರಿಯೆ ತಂತ್ರಗಳು ಮತ್ತು ಸಮುದಾಯ ತ್ವರಿತವಾಗಿ ಹೇಗೆ ಅಪಾಯದಿಂದ ಹೇಗೆ ಹೊರ ಬರಬೇಕು ಎಂಬ ಬಗ್ಗೆ ಮಕ್ಕಳಿಗೆ ಕಲಿಸಲು ಶಾಲೆಗಳು ಉತ್ತಮ ವೇದಿಕೆಗಳಾಗಿವೆ.
ಶಿಕ್ಷಣದ ಮೂಲಕ, ಮಕ್ಕಳು ಅಪಾಯಗಳನ್ನು ಗುರುತಿಸಲು, ವಿಮರ್ಶಾತ್ಮಕ ಆಲೋಚನಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಸಮುದಾಯ ಯೋಜನಾ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳುವುದನ್ನು ಕಲಿಯಬಹುದು.
ಅಂತಾರಾಷ್ಟ್ರೀಯ ವಿಕೋಪ ಅಪಾಯ ತಗ್ಗಿಸುವಿಕೆ ದಿನದಂದು ವಿಪತ್ತು ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳು ಮತ್ತು ಅನೇಕ ಉಪಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿಪತ್ತು ಅಪಾಯಗಳು ಮತ್ತು ಅದರಿಂದ ಹೊರ ಬರಲು ಇರುವ ತಂತ್ರಗಳ ಬಗ್ಗೆ ಅರಿವು ಮೂಡಿಸುವ ಚಟುವಟಿಕೆಗಳಲ್ಲಿ ಭಾಗವಹಿಸಲು ಶಾಲೆಗಳು, ಸಮುದಾಯ ಸಂಸ್ಥೆಗಳು ಮತ್ತು ಸರ್ಕಾರಗಳನ್ನು ಇದು ಪ್ರೋತ್ಸಾಹಿಸಲಾಗುತ್ತದೆ.
ಶಿಕ್ಷಣತಜ್ಞರು, ನೀತಿ ನಿರೂಪಕರು ಮತ್ತು ಸಮುದಾಯದ ನಾಯಕರ ಸಾಮೂಹಿಕ ಪ್ರಯತ್ನಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ಮುಂದಿನ ಪೀಳಿಗೆಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು ಗುರಿಯಾಗಿದೆ.
ಕಾಲ್ ಟು ಆ್ಯಕ್ಷನ್ ಏನು: ನಮ್ಮ ಮಕ್ಕಳಿಗೆ ವಿಪತ್ತು ಅಪಾಯಗಳ ಬಗ್ಗೆ ಶಿಕ್ಷಣ ನೀಡಿ ಮತ್ತು ಅವರಿಗೆ ತಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಸಕ್ರಿಯ ಪಾತ್ರವಹಿಸಲು ಅನುವು ಮಾಡಿಕೊಡಿ.
ಇದನ್ನೂ ಓದಿ: ವಿಶ್ವ ಥ್ರಂಬೋಸಿಸ್ ದಿನ: ರಕ್ತ ಹೆಪ್ಪುಗಟ್ಟುವುದೇಕೆ? ಇದನ್ನು ತಡೆಯುವ ಸರಳ ವ್ಯಾಯಾಮಗಳಿವು