ETV Bharat / bharat

ಬದುಕಿಗೆ ಬರೆ ಎಳೆದ ಭೂಕುಸಿತಗಳು: 76 ವರ್ಷಗಳಲ್ಲಿ ಮಾನವನ ಹುಚ್ಚಾಟಕ್ಕೆ ಪ್ರಕೃತಿ ಮುನಿಸಿನ ಝಲಕ್​​​​​ ಹೀಗಿದೆ! - Major Landslides in India

Major Landslides in India: ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಭೂಮಿ ಕುಸಿದು ಅಪಾರ ಸಾವು -ನೋವುಗಳು ಸಂಭವಿಸಿವೆ. ಇದುವರೆಗೆ ಸುಮಾರು 67 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಸುಮಾರು 66 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 1948ರಿಂದ ಇಲ್ಲಿಯವರೆಗೆ ಸಂಭವಿಸಿದ ಭಯಂಕರ ಭೂಕುಸಿತಗಳು ಮತ್ತು ಅದರಿಂದಾದ ಸಾವು-ನೋವುಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ ನೋಡಿ..

GUWAHATI LANDSLIDE ASSAM 1948  LANDSLIDES IN INDIA  SHIRUR LANDSLIDE  LANDSLIDE INCIDENCE
76 ವರ್ಷಗಳಲ್ಲಿ ಮಾನವನ ಹುಚ್ಚಾಟಕ್ಕೆ ಪ್ರಕೃತಿ ಮುನಿಸಿನ ಝಲಕ್​ ಹೀಗಿದೆ (ETV Bharat)
author img

By ETV Bharat Karnataka Team

Published : Jul 30, 2024, 3:15 PM IST

Updated : Jul 30, 2024, 3:50 PM IST

Major Landslides in India: ಭಾರಿ ಮಳೆಯಿಂದಾಗಿ ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಬಹು ಹಳ್ಳಿಗಳಲ್ಲಿ ಸರಣಿ ಭೂಕುಸಿತಗಳು ಸಂಭವಿಸಿದ್ದು, ಮಕ್ಕಳು ಸೇರಿದಂತೆ ಕನಿಷ್ಠ 67 ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಅಷ್ಟೇ ಅಲ್ಲ ಈ ಭೂಕುಸಿದಲ್ಲಿ ಸುಮಾರು ನೂರಾರು ಮಂದಿ ಸಿಲುಕಿರುವ ಆತಂಕವೂ ಇದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ. ಆದರೆ, ಈ ಹಿಂದೆ ಭಾರತದಲ್ಲಿ ಕೆಲವು ಗಂಭೀರ ಮತ್ತು ಮಾರಣಾಂತಿಕ ಭೂಕುಸಿತಗಳು ಸಂಭವಿಸಿದ್ದವು. ಆ ಬಗೆಗಿನ ಸಂಪೂರ್ಣ ವಿವರ ಈ ಕೆಳಗಿನಂತಿದೆ.

ಅಸ್ಸಾಂನ ಗುವಾಹಟಿ ಭೂಕುಸಿತ: 18 ಸೆಪ್ಟೆಂಬರ್​​ 1948ರಲ್ಲಿ ಅಸ್ಸಾಂನ ಗುವಾಹಟಿ ಬಳಿಯ ಗ್ರಾಮವೊಂದರಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿತು. ಈ ಭೂಕುಸಿತದಲ್ಲಿ ಸುಮಾರು 60 ಮನೆಗಳು ಕುಸಿದು, 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ವರದಿಗಳ ಪ್ರಕಾರ ಭೂಕುಸಿತವು ಇಡೀ ಗ್ರಾಮವನ್ನೇ ನುಂಗಿ ಹಾಕಿತ್ತು.

GUWAHATI LANDSLIDE ASSAM 1948  LANDSLIDES IN INDIA  SHIRUR LANDSLIDE  LANDSLIDE INCIDENCE
ರಕ್ಷಣಾ ಕಾರ್ಯಾಚರಣೆ (Assosiated Press)

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಭೂಕುಸಿತ: 4 ಅಕ್ಟೋಬರ್ 1968 ರಲ್ಲಿ ಡಾರ್ಜಿಲಿಂಗ್​ನಲ್ಲಿ ಭೂಕುಸಿತ ಸಂಭವಿಸಿತ್ತು. ಪ್ರವಾಹದಿಂದಾಗಿ ಉಂಟಾದ ಈ ದುರಂತದಲ್ಲಿ ಸುಮಾರು 60 ಕಿಮೀ ಉದ್ದದ ಹೆದ್ದಾರಿ 91 ಭಾಗಗಳಾಗಿ ತುಂಡರಿಸಿತ್ತು. ವರದಿಗಳ ಪ್ರಕಾರ, ಭೂಕುಸಿತದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದು, ನಿಖರ ಸಂಖ್ಯೆ ದಾಖಲಾಗಿಲ್ಲ.

ಉತ್ತರಾಖಂಡದ ಮಲ್ಪಾ ಭೂಕುಸಿತ : 1998 ರಲ್ಲಿ ಆಗಸ್ಟ್ 11 ಮತ್ತು ಆಗಸ್ಟ್ 17 ರ ನಡುವೆ ಮಲ್ಪಾ ಗ್ರಾಮದಲ್ಲಿ ಸತತ ಭೂಕುಸಿತಗಳು ಸಂಭವಿಸಿದ್ದವು. ಇಡೀ ಗ್ರಾಮವು ಭೂಕುಸಿತದಲ್ಲಿ ಕೊಚ್ಚಿಹೋಗಿದ್ದು, ಸುಮಾರು 380 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಭೂಕುಸಿತವು ಭಾರತದ ಅತ್ಯಂತ ಭೀಕರ ಭೂಕುಸಿತಗಳಲ್ಲಿ ಒಂದಾಗಿದೆ.

ಮಹಾರಾಷ್ಟ್ರದ ಮುಂಬೈ ಭೂಕುಸಿತ: ಜುಲೈ 2000 ರಲ್ಲಿ ಮುಂಬೈನ ಉಪನಗರಗಳಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿತ್ತು. ವರದಿಗಳ ಪ್ರಕಾರ ಸುಮಾರು 67 ಜನರು ಸಾವನ್ನಪ್ಪಿದ್ದು, ಸ್ಥಳೀಯ ರೈಲುಗಳನ್ನು ಸಹ ಬಂದ್​ ಮಾಡಲಾಗಿತ್ತು.

ಕೇರಳದ ಅಂಬೂರಿ ಭೂಕುಸಿತ : ಅಂಬೂರಿ ಭೂಕುಸಿತವನ್ನು ಕೇರಳದ ಇತಿಹಾಸದಲ್ಲಿ ಅತ್ಯಂತ ಭೀಕರ ಭೂಕುಸಿತ ಎಂದು ಕರೆಯಲಾಗುತ್ತದೆ. 9 ನವೆಂಬರ್ 2001ರಂದು ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 40 ಜನರು ಸಾವನ್ನಪ್ಪಿದ್ದರು.

ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ದೃಶ್ಯ (Assosiated Press)

ಉತ್ತರಾಖಂಡದ ಕೇದಾರನಾಥ ಭೂಕುಸಿತ: ಜೂನ್ 16, 2013 ರಂದು ಉತ್ತರಾಖಂಡದ ಪ್ರವಾಹದ ಪರಿಣಾಮ ಭೂಕುಸಿತ ಸಂಭವಿಸಿತ್ತು. ಪ್ರವಾಹ ಮತ್ತು ಪ್ರವಾಹದ ನಂತರದ ಭೂಕುಸಿತದಿಂದ 5700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 4,200 ಕ್ಕೂ ಹೆಚ್ಚು ಹಳ್ಳಿಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿತ್ತು.

ಮಹಾರಾಷ್ಟ್ರದ ಮಲಿನ್ ಭೂಕುಸಿತ: ಜುಲೈ 30, 2014 ರಂದು ಮಲಿನ್​ ಹಳ್ಳಿಯಲ್ಲಿ ಭೂಕುಸಿತ ಸಂಭವಿಸಿತ್ತು. ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ದುರಂತದ ನಂತರ ಸುಮಾರು 151 ಜನರು ಸಾವನ್ನಪ್ಪಿದ್ದರು. ಈ ಭೂಕುಸಿತದಲ್ಲಿ ಸುಮಾರು 100 ಜನರು ನಾಪತ್ತೆಯಾಗಿದ್ದರು ಎಂದು ವರದಿಯಾಗಿದೆ.

ಮಣಿಪುರದಲ್ಲಿ ಭೂಕುಸಿತ: 1 ಆಗಸ್ಟ್ 2015ರ ಮಾಧ್ಯಮ ವರದಿಯ ಪ್ರಕಾರ, ಜೌಮೋಲ್ ಗ್ರಾಮದ ಸಂಪೂರ್ಣ ವಸಾಹತು ಪ್ರದೇಶವು ಬೃಹತ್ ಭೂಕುಸಿತ ಮತ್ತು ಪ್ರವಾಹದಿಂದ ಸಮಾಧಿಯಾಗಿತ್ತು. ಈ ಘಟನೆಯಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದಲ್ಲಿ ಭೂಕುಸಿತ: 22 ಜೂನ್ 2015ರ ಮಾಧ್ಯಮ ವರದಿಯ ಪ್ರಕಾರ, ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ದಾಭೋಲ್ ಗ್ರಾಮದಲ್ಲಿ ಭೂಕುಸಿತದ ನಂತರ ಮೂರು ಮನೆಗಳು ಕುಸಿದು ಕನಿಷ್ಠ 12 ಜನರು ಅವಶೇಷಗಳಲ್ಲಿ ಹೂತು ಹೋಗಿದ್ದರು. ಆ ಭೂಕುಸಿತವು ನಸುಕಿನ ಜಾವ 03.30ಕ್ಕೆ ಸಂಭವಿಸಿತ್ತು ಎಂದು ವರದಿಯಾಗಿದೆ.

ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭೂಕುಸಿತ: 22 ಏಪ್ರಿಲ್​ 2016ರಂದು ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭೂಕುಸಿತದಿಂದ 16 ಮಂದಿ ಸಜೀವ ಸಮಾಧಿಯಾಗಿದ್ದರು. ಎಲ್ಲ ಕಟ್ಟಡ ಕಾರ್ಮಿಕರು ಸಾವನ್ನಪ್ಪಿದ್ದರು. ಮತ್ತೊಂದೆಡೆ ಇಬ್ಬರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು. ತವಾಂಗ್, ಚೀನಾ ಗಡಿಯಲ್ಲಿರುವ ಒಂದು ಪ್ರಮುಖ ಪ್ರವಾಸಿ ತಾಣ ಮತ್ತು ಬೌದ್ಧ ಯಾತ್ರಾ ಕೇಂದ್ರವಾಗಿದೆ. ಇದು ಪೂರ್ವ ಹಿಮಾಲಯದ ಸಮುದ್ರ ಮಟ್ಟದಿಂದ ಸುಮಾರು 3,000 ಮೀಟರ್‌ಗಳಷ್ಟು ಎತ್ತರದಲ್ಲಿದೆ.

ಅಸ್ಸಾಂನಲ್ಲಿ ನಾಲ್ಕು ಭೂಕುಸಿತ: ಅಸ್ಸಾಂನಲ್ಲಿ 18 ಮೇ 2016 ರಂದು ನಿರಂತರ ಮಳೆಯಿಂದ ನಾಲ್ಕು ವಿನಾಶಕಾರಿ ಭೂಕುಸಿತ ಘಟನೆಗಳು ಸಂಭವಿಸಿದ್ದವು. ಇದು 11 ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಂಡಿತು. ಅಷ್ಟೇ ಅಲ್ಲ ಆಸ್ತಿ, ಜಾನುವಾರು, ಕೃಷಿ ಭೂಮಿ ಮತ್ತು ರಸ್ತೆ ಸೇರಿದಂತೆ ಅಪಾರ ಪ್ರಮಾಣದ ಹಾನಿಯನ್ನುಂಟುಮಾಡಿದೆ. ನಾಲ್ಕು ಭೂಕುಸಿತಗಳಲ್ಲಿ, ಒಂದು ಕರೀಮ್‌ಗಂಗ್ ಜಿಲ್ಲೆಯ ಸೋನೈಚೆರಾ ಟೀ ಗಾರ್ಡನ್‌ನ ರಾಖಲ್ಬಸ್ತಿ ಪ್ರದೇಶದಲ್ಲಿ ಸಂಭವಿಸಿದ್ದು,, ಐವರು ಸಾವನ್ನಪ್ಪಿದ್ದರು. ಇತರ ಮೂರು ಭೂಕುಸಿತಗಳು ಅಸ್ಸಾಂನ ಹತ್ತಿರದ ಹಿಲಕಂಡಿ ಜಿಲ್ಲೆಯ ಮೂರು ವಿಭಿನ್ನ ಸ್ಥಳಗಳಲ್ಲಿ ಸಂಭವಿಸಿದ್ದವು.

ಸಿಕ್ಕಿಂನಲ್ಲಿ ಭೂಕುಸಿತ: ದಕ್ಷಿಣ ಸಿಕ್ಕಿಂನ ಅಪ್ಪರ್ ಗುರ್ಪಿಸೆಯಲ್ಲಿ ಭೂಕುಸಿತವು (20 ಸೆಪ್ಟೆಂಬರ್ 2017) ಸುಮಾರು 02.00 ಗಂಟೆಯ ಸಮಯದಲ್ಲಿ ಸಂಭವಿಸಿತ್ತು. ಈ ದುರಂತದಲ್ಲಿ ಮೂವರು ಜೀವ ಕಳೆದುಕೊಂಡಿದ್ದು, ಇಬ್ಬರಿಗೆ ಗಾಯಗಳಾಗಿದ್ದು, ದೊಡ್ಡ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟವಾಗಿತ್ತು.

ಕೇರಳದಲ್ಲಿ ಭೂಕುಸಿತ: 09 ಆಗಸ್ಟ್​ 2019 ರಂದು ನಿರಂತರ ಮಳೆಯಿಂದಾಗಿ ಕೇರಳದ ಇಪಾಡಿ, ಪುಟ್ಟುಪಾಲ, ವಯನಾಡ್ ಮತ್ತು ಭೂದಾನಂ, ನೀಲಂಬೂರ್, ಮಲ್ಲಪುರಂನಲ್ಲಿ ಭಾರಿ ಭೂಕುಸಿತಗಳು ಸಂಭವಿಸಿ ಹಲವಾರು ಜನರು ಅವಶೇಷಗಳ ಅಡಿ ಸಿಲುಕಿಕೊಂಡಿದ್ದರು. ಎನ್‌ಡಿಆರ್‌ಎಫ್‌ನ 5 ತಂಡಗಳು ತಕ್ಷಣವೇ ಐಪಾಡಿ, ಪುಟ್ಟುಪಾಲ, ವಯನಾಡ್‌ನಲ್ಲಿ ಘಟನಾ ಸ್ಥಳಕ್ಕೆ ಧಾವಿಸಿದ್ದವು, ಇನ್ನು 4 ತಂಡಗಳು ಭೂದಾನಂ, ನೀಲಂಬೂರ್, ಮಲ್ಲಾಪುರಂ ಕಡೆಗೆ ತೆರಳಿ ರಕ್ಷಣಾ ಕಾರ್ಯ ಕೈಗೊಂಡಿದ್ದವು. ದಾರಿಯಲ್ಲಿ ಭಾರಿ ಮಳೆ ಮತ್ತು ಅವಶೇಷಗಳು ಬಿದ್ದಿದ್ದರಿಂದ NDRF ತಂಡಗಳ ಸಂಚಾರಕ್ಕೆ ಅಡ್ಡಿಯಾಯಿತು. ಎಲ್ಲ ವಿರೋಧಾಭಾಸಗಳ ನಡುವೆಯೂ NDRF ತಂಡಗಳು ಎರಡೂ ಘಟನಾ ಸ್ಥಳಕ್ಕೆ ತಲುಪುವಲ್ಲಿ ಯಶಸ್ವಿಯಾದವು. 09 ಆಗಸ್ಟ್​ 2019 ರಿಂದ 25 ಆಗಸ್ಟ್​ 2019 ರವರೆಗೆ ಇಪಾಡಿ, ಪುಟ್ಟುಪಾಲ, ವಯನಾಡಿನಲ್ಲಿ 13 ಮೃತದೇಹಗಳನ್ನು ಹೊರ ತೆಗೆಯಲಾಯಿತು. ಇನ್ನು 09 ಆಗಸ್ಟ್​ 2019 ರಿಂದ 28 ಆಗಸ್ಟ್​ 2019 ರವರೆಗೆ ಭೂದಾನ, ನೀಲಂಬೂರ್, ಮಲ್ಲಾಪುರಮದಲ್ಲಿ ಕಾರ್ಯಾಚರಣೆ ನಡೆಸಿ 48 ಮೃತ ದೇಹಗಳನ್ನು ಹೊರತೆಗೆಯಲಾಯಿತು.

ಕರ್ನಾಟಕದಲ್ಲಿ ಭೂಕುಸಿತ: ಕೊಡಗು ಜಿಲ್ಲೆಯ ಭಾಗಮಂಡಲದ ಬಳಿಯ ಬ್ರಹ್ಮಗಿರಿ ಬೆಟ್ಟದ ತಲಕಾವೇರಿ ದೇವಸ್ಥಾನದ ಬಳಿ 06 ಆಗಸ್ಟ್ 2020 ರಂದು ಬೆಳಗಿನ ಜಾವ 02:30 ಕ್ಕೆ ಭೂಕುಸಿತ ಸಂಭವಿಸಿತ್ತು. ತಲಕಾವೇರಿ, ಕಾವೇರಿ ನದಿಯು ಹುಟ್ಟುವ ಸ್ಥಳವಾಗಿದ್ದು, ಪ್ರಮುಖ ಯಾತ್ರಿಕ ಮತ್ತು ಪ್ರವಾಸಿ ಕೇಂದ್ರವಾಗಿದೆ. ತಲಕಾವೇರಿ ಭೂಕುಸಿತವು ನಾಲ್ಕು ಹಂತಗಳಲ್ಲಿ ಅಂದರೆ 2007, 2018, 2019 ಮತ್ತು 2020 ರಲ್ಲಿ ಸಂಭವಿಸಿದೆ. ಆದ್ರೆ ಯಾವುದೇ ಪ್ರಾಣ ಹಾನಿಯ ಕುರಿತು ಮಾಹಿತಿ ಇಲ್ಲ.

ಕೇರಳದ ಇಡುಕ್ಕಿಯಲ್ಲಿ ಭೂಕುಸಿತ: ಆಗಸ್ಟ್ 6, 2020 ರಂದು ಇಡುಕ್ಕಿ ಜಿಲ್ಲೆಯ ಟೀ ತೋಟದ ಎಸ್ಟೇಟ್ ಪೆಟ್ಟಿಮುಡಿಯಲ್ಲಿ ನಿರಂತರ ಮಳೆಯಿಂದ ಉಂಟಾದ ಭೂಕುಸಿತವು 65 ಕ್ಕೂ ಹೆಚ್ಚು ಕಾರ್ಮಿಕರು ಬಲಿ ಪಡೆದಿತ್ತು. ಕಂಪನಿಯು ವಸತಿಗಾಗಿ ಒದಗಿಸಿದ ಕಟ್ಟಡದ 10 ವಸತಿ ಸ್ಥಳಗಳ ಸಾಲಿನಲ್ಲಿ ಅವರೆಲ್ಲರು 'ಲಯಂ' ನಲ್ಲಿ ವಾಸಿಸುತ್ತಿದ್ದರು.

ಕರಾವಳಿ ಕೊಂಕಣ ಪ್ರದೇಶದಲ್ಲಿ ಭೂಕುಸಿತ: 23 ಜುಲೈ 2021 ರಂದು ಮಾನ್ಸೂನ್ ಪರಿಣಾಮದಿಂದಾಗಿ ಪಶ್ಚಿಮ ಮಹಾರಾಷ್ಟ್ರ ಮತ್ತು ಕರಾವಳಿ ಕೊಂಕಣ ಪ್ರದೇಶದಲ್ಲಿ ತೀವ್ರವಾದ ಮಳೆಯಿಂದ ಉಂಟಾದ ಭೂಕುಸಿತಗಳಲ್ಲಿ ಕನಿಷ್ಠ 60 ಜನರು ಸಾವನ್ನಪ್ಪಿದ್ದರು.

ಮಣಿಪುರದ ನೋನಿಯಲ್ಲಿ ಭೂಕುಸಿತ: 30 ಜೂನ್​ 2022ರಲ್ಲಿ ಮಣಿಪುರದ ನೋನಿ ಜಿಲ್ಲೆಯಲ್ಲಿ ರೈಲ್ವೆ ನಿರ್ಮಾಣ ಸ್ಥಳದಲ್ಲಿ ಭಾರಿ ಭೂಕುಸಿತ ಸಂಭವಿಸಿತ್ತು. ಈ ದುರಂತದಲ್ಲಿ ಪ್ರಾದೇಶಿಕ ಸೇನೆಯ ಸಿಬ್ಬಂದಿ ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದರು.

ಕೇರಳದ ಕುಂಡಾಲ ಎಸ್ಟೇಟ್‌ನಲ್ಲಿ ಭೂಕುಸಿತ: 06 ಆಗಸ್ಟ್ 2022 ಪೆಟ್ಟಿಮುಡಿ ದುರಂತದ ಎರಡನೇ ವಾರ್ಷಿಕೋತ್ಸವದಂದು ಮುನ್ನಾರ್‌ನ ಕುಂಡಾಲ ಎಸ್ಟೇಟ್‌ಗೆ ಅಪ್ಪಳಿಸಿದ ಭೂಕುಸಿತದ ಸಂದರ್ಭದಲ್ಲಿ ಭಾರಿ ಅನಾಹುತವನ್ನು ತಪ್ಪಿಸಲಾಯಿತು ಮತ್ತು 450 ಜೀವಗಳು ಬದುಕುಳಿದಿದ್ದವು.

ಮಹಾರಾಷ್ಟ್ರದ ರಾಯಗಡದಲ್ಲಿ ಭೂಕುಸಿತ: 19 ಜುಲೈ 2023 ರಂದು ರಾಯಗಡದಲ್ಲಿ ಭೂಕುಸಿತ ಸಂಭವಿಸಿತ್ತು. ಧಾರಾಕಾರ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಕನಿಷ್ಠ 27 ಮಂದಿ ಸಾವನ್ನಪ್ಪಿದ್ದರು. ಈ ದುರಂತದಲ್ಲಿ 57 ಮಂದಿ ನಾಪತ್ತೆಯಾಗಿದ್ದಾರೆ.

ಕರ್ನಾಟಕದ ಶಿರೂರು ಭೂಕುಸಿತ: 16 ಜುಲೈ 2024ರಂದು ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ದೊಡ್ಡ ಪ್ರಮಾಣದ ಭೂಕುಸಿತ ಸಂಭವಿಸಿತ್ತು. ಈ ದುರಂತದಲ್ಲಿ ಎಂಟು ಜನ ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಕುರಿತು ರಕ್ಷಣಾ ಕಾರ್ಯ ಮುಂದುವರಿದಿದೆ. ಆದ್ರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿರುವುದು ಗಮನಾರ್ಹ.

ಓದಿ: ವಯನಾಡ್​ನಲ್ಲಿ ರಣಮಳೆಗೆ ಸರಣಿ ಭೂಕುಸಿತ: ಮಕ್ಕಳು ಸೇರಿ 41 ಮಂದಿ ಸಾವು, 400ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ - Wayanad Landslides

Last Updated : Jul 30, 2024, 3:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.