ETV Bharat / bharat

ಜಮ್ಮು: ಪೂಂಚ್​ನಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ - Exchange of gunfire in poonch - EXCHANGE OF GUNFIRE IN POONCH

ಪೂಂಚ್​ ಜಿಲ್ಲೆಯಲ್ಲಿ ಉಗ್ರರು ಹಾಗೂ ಭದ್ರತಾ ಪಡೆಯ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಪರಾರಿಯಾಗಿರುವ ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

Gunfire between militants and security forces in Poonch
ಪೂಂಚ್​ನಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ (ಸಾಂಕೇತಿಕ ಚಿತ್ರ, IANS)
author img

By ETV Bharat Karnataka Team

Published : May 31, 2024, 4:39 PM IST

ಜಮ್ಮು/ಪೂಂಚ್​: ಪೂಂಚ್​ ಜಿಲ್ಲೆಯ ಮರ್ಹಾ ಬಫ್ಲಿಯಾಜ್​ ಪ್ರದೇಶದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಶುಕ್ರವಾರ ಬೆಳಗ್ಗೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಈ ಪ್ರದೇಶದಲ್ಲಿ ಕೆಲವು ಉಗ್ರಗಾಮಿಗಳು ಇರುವ ಬಗ್ಗೆ ಗುರುವಾರ ತಡರಾತ್ರಿ ಭದ್ರತಾ ಪಡೆಗಳಿಗೆ ಮಾಹಿತಿ ಲಭಿಸಿದೆ. ಈ ಮಾಹಿತಿ ಆಧರಿಸಿ ಡಿಕೆಜಿ ಸಮೀಪದ ಮರ್ಹಾ ಬಫ್ಲಿಯಾಜ್​ನ ಸಾಮಾನ್ಯ ಪ್ರದೇಶದಲ್ಲಿ ಪೊಲೀಸರು ಹಾಗೂ ಸೇನೆಯಿಂದ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು.

ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ 11 ಗಂಟೆ ಹೊತ್ತಿಗೆ ಬೆಹ್ರಮ್​ಗಲಾ/ಸುರನ್​ಕೋಟ್​ ಎಸ್​ಒಜಿ ಹಾಗೂ 9 ಪ್ಯಾರಾ ತಂಡದಿಂದ ಪೂಂಚ್​ ಜಿಲ್ಲೆಯ ಪಿಎಸ್​ ಸುರನ್​ಕೋಟ್​, ಡಿಕೆಜಿ ಜನರಲ್​ ಏರಿಯಾದಲ್ಲಿ ಹುಡುಕಾಟ ನಡೆಸಲಾಯಿತು. ಕಾರ್ಯಾಚರಣೆ ವೇಳೆ ಸುಮಾರು 3.30 ಹೊತ್ತಿಗೆ ಉಗ್ರರು ಎಸ್​ಎಫ್​ ಪಡೆಗಳ ಮೇಲೆ ಗುಂಡು ಹಾರಿಸಿದರು. ಸೈನಿಕರು ಕೂಡ ಗುಪ್ತ ಉಗ್ರರ ಮೇಲೆ ಪ್ರತಿದಾಳಿ ನಡೆಸಿದರು.

ಈ ಅಲ್ಪಾವಧಿಯ ಗುಂಡಿನ ಚಕಮಕಿಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ವರದಿಯಾಗಿಲ್ಲ. ಕೆಲ ಹೊತ್ತಿನ ಬಳಿಕ ಗುಂಡಿನ ಚಕಮಕಿ ನಿಂತಿದ್ದು, ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಮಧ್ಯೆ ಪರಾರಿಯಾಗಿರುವ ಉಗ್ರರ ಪತ್ತೆಗೆ ಭಾರೀ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಬಿರು ಬಿಸಿಲಿನಲ್ಲೂ ಗಡಿ ಕಾಯುತ್ತಿರುವ ಯೋಧರು: ದೇಶದ ಇತರ ಭಾಗಗಳಂತೆ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ತೀವ್ರ ಬಿಸಿಲು ಇದೆ. ಈ ಬಿರು ಬಿಸಲಿನ ನಡುವೆಯೂ ಬಿಎಸ್​ಎಫ್​ನ ವೀರ ಯೋಧರು ಗಡಿಯಲ್ಲಿ ಕಾವಲು ಕಾಯುತ್ತಿದ್ದಾರೆ. ಜಮ್ಮುವಿನಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ​ದಾಟಿದೆ. ಈ ಬಿಸಿಲಿನ ನಡುವೆಯೂ ಗಡಿ ಭದ್ರತಾ ಪಡೆಯ (ಬಿಎಸ್​ಎಫ್​) ಮಹಿಳಾ ಸೈನಿಕರು ಸಾಂಬಾದಲ್ಲಿ ಭಾರತ - ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ದೇಶದ ರಕ್ಷಣೆಯಲ್ಲಿ ನಿರತರಾಗಿದ್ದಾರೆ.

ಭಾರತ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಸೈನಿಕರು ಅಲರ್ಟ್​ ಆಗಿದ್ದಾರೆ. ವಿಪರೀತ ಬಿಸಿಲಿನಲ್ಲಿಯೂ ಸೈನಿಕರು ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ದೇಶದ ಗೌರವ, ಘನತೆ ಕಾಪಾಡಲು ಬಿಎಸ್​ಎಫ್​ ಮಹಿಳಾ ಯೋಧರು ದಿನದ 24 ಗಂಟೆಯೂ ಶತ್ರುಗಳ ಮೇಲೆ ತೀವ್ರ ನಿಗಾ ಇಡುತ್ತಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಅವಳಿ ಭಯೋತ್ಪಾದಕ ದಾಳಿ: ಬಿಜೆಪಿ ಕಾರ್ಯಕರ್ತನ ಕೊಲೆ, ಪ್ರವಾಸಿ ದಂಪತಿಗೆ ಗಾಯ - Twin Terror Attacks in Kashmir

ETV Bharat Logo

Copyright © 2025 Ushodaya Enterprises Pvt. Ltd., All Rights Reserved.