ಲಖನೌ (ಉತ್ತರಪ್ರದೇಶ): ಲಡ್ಡು ತಿಂದ 15 ಮಕ್ಕಳು ಅಸ್ವಸ್ಥರಾಗಿರುವ ಘಟನೆ ನಗರದ ಮೆಹದಿಗಂಜ್ ಪ್ರದೇಶದಲ್ಲಿ ನಡೆದಿದೆ. ಎಲ್ಲರನ್ನೂ ಬಲರಾಂಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಮೇಲ್ವಿಚಾರಣೆಯಲ್ಲಿ ಎಲ್ಲರಿಗೂ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಸಹನಾ ಅವರ ಮನೆಯಲ್ಲಿ ಹೆಣ್ಣು ಮಗು ಜನಿಸಿತ್ತು ಎಂದು ಹೇಳಲಾಗುತ್ತಿದೆ. ಈ ಖುಷಿಯಲ್ಲಿ ಸಹನಾ ಲಡ್ಡು ಹಂಚಿದ್ದರು. ಇವುಗಳನ್ನು ತಿಂದ ಬಹುತೇಕ ಮಕ್ಕಳಿಗೆ ವಾಂತಿ, ಬೇದಿ ಶುರುವಾಗಿದೆ. ಎಲ್ಲ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕೆಲವು ಮಕ್ಕಳನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆದರೆ, ಸದ್ಯ ಸುಮಾರು 9 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಕ್ಕಳಿಗೆ ಸೋಂಕು ತಗುಲಿದೆ: ಲಖೌನದ ಮೆಹದಿಗಂಜ್ ಪ್ರದೇಶದಲ್ಲಿ ವಾಸಿಸುತ್ತಿರುವ 15 ಮಕ್ಕಳ ಆರೋಗ್ಯ ಗಣನೀಯವಾಗಿ ಹದಗೆಟ್ಟಿದೆ. ಎಲ್ಲ ಮಕ್ಕಳನ್ನು ತುರ್ತು ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಮಕ್ಕಳು ಲಡ್ಡು ತಿಂದಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ. ಇದಾದ ನಂತರ ಎಲ್ಲರಿಗೂ ತುಂಬಾ ಹೊಟ್ಟೆನೋವು ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಎಲ್ಲಾ ಮಕ್ಕಳನ್ನು ಆಸ್ಪತ್ರೆಗೆ ಕರೆತರಲಾಯಿತು. ತುರ್ತು ದಾಖಲಾತಿ ಹಾಗೂ ಪ್ರಥಮ ಚಿಕಿತ್ಸೆ ಬಳಿಕ ಎಲ್ಲರನ್ನೂ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಮಕ್ಕಳಿಗೆ ಸೋಂಕು ತಗುಲಿತ್ತು ಎಂದು ಬಲರಾಂಪುರ ಆಸ್ಪತ್ರೆಯ ಸಿಎಂಎಸ್ ಡಾ. ಎನ್.ಬಿ.ಸಿಂಗ್ ಹೇಳಿದ್ದಾರೆ.
ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ: ಆಸ್ಪತ್ರೆಗೆ ದಾಖಲಾಗಿರುವ 13 ವರ್ಷದ ಆದರ್ಶ್ ತಂದೆ ಶೈಲೇಂದ್ರ ಕುಮಾರ್ ಮಾತಾನಾಡಿ, ಹೆಣ್ಣು ಮಗು ಜನಿಸಿದಾಗ ಪಕ್ಕದ ಮನೆಯಲ್ಲಿ ಲಡ್ಡುಗಳನ್ನು ವಿತರಿಸಲಾಯಿತು. ಇದಾದ ಬಳಿಕ ಲಡ್ಡು ತಿಂದ ಮಕ್ಕಳೆಲ್ಲ ಅಸ್ವಸ್ಥರಾದರು. ಇದು ಸಂಪೂರ್ಣವಾಗಿ ಅಂಗಡಿyವನ ತಪ್ಪು. ಗ್ರಾಹಕರ ಜೀವಕ್ಕೆ ಅಪಾಯವನ್ನುಂಟುಮಾಡುವ ಯಾವುದನ್ನೂ ಮಾರಾಟ ಮಾಡಬಾರದು ಎಂಬುದನ್ನು ಅವರು ನೆನಪಿನಲ್ಲಿಡಬೇಕು. ಆ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಅಂಗಡಿಯವನ ವಿರುದ್ಧ ದೂರು ದಾಖಲಾಗಿದೆ. ಇದಲ್ಲದೇ ಆಹಾರ ಮತ್ತು ಸುರಕ್ಷತಾ ಇಲಾಖೆಗೂ ಲಿಖಿತ ದೂರು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಓದಿ: ಪಲ್ಟಿಯಾಗಿ ಮರವೇರಿದ ಕಾರು: ರಸ್ತೆ ಅಪಘಾತದಲ್ಲಿ ಮೂವರು ಭಾರತೀಯ ಮಹಿಳೆಯರು ಸಾವು - Indian women died