ETV Bharat / bharat

ಕಳಪೆ ವ್ಯವಸ್ಥೆ, ವಿಐಪಿ ಸಂಸ್ಕೃತಿ ಕಾಲ್ತುಳಿತಕ್ಕೆ ಕಾರಣ: ಮಲ್ಲಿಕಾರ್ಜುನ್‌ ಖರ್ಗೆ - KHARGE BLAMES POOR ARRANGEMENTS

ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ವಿಷಾದಿಸಿರುವ ಮಲ್ಲಿಕಾರ್ಜುನ ಖರ್ಗೆ, ವ್ಯವಸ್ಥೆಯಲ್ಲಿನ ಕೊರತೆ ಈ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ.

congress-president-kharge-blames-poor-arrangements-leads-maha-kumbh-stampede
ಮಲ್ಲಿಕಾರ್ಜುನ ಖರ್ಗೆ (ANI)
author img

By ETV Bharat Karnataka Team

Published : Jan 29, 2025, 2:28 PM IST

ನವದೆಹಲಿ: ಪ್ರಯಾಗ್​​ರಾಜ್​ ಮಹಾಕುಂಭ ಮೇಳದಲ್ಲಿ ನಡೆಸಿರುವ ಅರ್ಧಂಬರ್ಧ ವ್ಯವಸ್ಥೆ, ವಿಐಪಿ ಸಂಸ್ಕೃತಿ, ಸರಿಯಾದ ನಿರ್ವಹಣೆಯ ಹೊರತಾಗಿಯೂ ಸ್ವಯಂಪ್ರಚಾರ ನಡೆಸಿದ್ದರಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ಮಹಾಕುಂಭದಲ್ಲಿ ತೀರ್ಥರಾಜ್​ ಸಂಗಮದ ದಡದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಅನೇಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ವರದಿ ಕೇಳಿ ಬೇಸರವಾಯಿತು. ಅಗಲಿದ ಭಕ್ತರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು. ಹಾಗೆಯೇ ಗಾಯಾಳುಗಳು ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಇದೇ ವೇಳೆ ಕಾಲ್ತುಳಿತಕ್ಕೆ ವ್ಯವಸ್ಥೆಯ ಕೊರತೆ, ವಿಐಪಿಗಳ ಹೆಚ್ಚಿನ ಆಗಮನ ಮತ್ತು ಸೂಕ್ತ ನಿರ್ವಹಣೆ ಹೊರತಾಗಿ ಸ್ವಯಂ ಪ್ರಚಾರಕ್ಕೆ ಮುಂದಾಗಿರುವುದೇ ಕಾರಣವಾಗಿದೆ. ಸಾವಿರಾರು ಕೋಟಿ ರೂ ವ್ಯಯಿಸಿದ ಬಳಿಕವೂ ಈ ರೀತಿಯ ಅವ್ಯವಸ್ಥೆಗಳನ್ನು ಸಹಿಸಲಸಾಧ್ಯ. ಮಹಾಕುಂಭದಲ್ಲಿನ ವಿಐಪಿ ಸಂಸ್ಕೃತಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಪವಿತ್ರ ಸ್ನಾನಕ್ಕೆ ಇನ್ನೂ ಹಲವು ಪ್ರಮುಖ ದಿನಗಳಿವೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲೇ ಎಚ್ಚೆತ್ತು, ಭವಿಷ್ಯದಲ್ಲಿ ಇಂಥ ಅಹಿತಕರ ಘಟನೆಗಳು ಸಂಭವಿಸದಂತೆ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಬೇಕಿದೆ. ಭಕ್ತರಿಗೆ ನೀಡುತ್ತಿರುವ ಸೌಲಭ್ಯ, ಆಹಾರ, ಪ್ರಥಮ ವೈದ್ಯಕೀಯ ಚಿಕಿತ್ಸೆಯನ್ನು ವಿಸ್ತರಿಸಬೇಕು. ಇದನ್ನೇ ಇಲ್ಲಿನ ಸಂತರು ಕೇಳುತ್ತಿರುವುದು. ನಮ್ಮ ಕಾಂಗ್ರೆಸ್​ ಕಾರ್ಯಕರ್ತರು ಕೂಡ ಸಂತ್ರಸ್ತರಿಗೆ ಎಲ್ಲಾ ರೀತಿಯ ಸಾಧ್ಯವಿರುವ ಸಹಾಯವನ್ನು ನೀಡಲು ಮುಂದಾಬೇಕು ಎಂದು ಮನವಿ ಮಾಡಿದರು.

ಏತನ್ಮಧ್ಯೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕೂಡ ಭಕ್ತರಿಗೆ ಮನವಿ ಮಾಡಿದ್ದು, ನಿಮಗೆ ಸಮೀಪದ ಘಾಟ್​ಗಳಲ್ಲಿ ಪವಿತ್ರ ಸ್ನಾನ ಮಾಡಿ, ಸಂಗಮ್​ ಘಾಟ್​ನಲ್ಲಿ ಹೆಚ್ಚಿನ ಭಕ್ತರ ಸಂಖ್ಯೆ ಇರುವ ಹಿನ್ನೆಲೆಯಲ್ಲಿ ಅಲ್ಲಿ ಸ್ನಾನ ಮಾಡದಂತೆ ಸಲಹೆ ನೀಡಿದ್ದಾರೆ.

ಇಂದು ಪ್ರಯಾಗ್​ರಾಜ್​ನಲ್ಲಿ 8ರಿಂದ 10 ಕೋಟಿ ಭಕ್ತರಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಿರುವ ಕಾರಣ ಸಂಗಮ್​ ದಡದಲ್ಲಿ ಭಕ್ತರ ಚಲನೆ ಹೆಚ್ಚಿದ್ದು, ನಿರಂತರ ಒತ್ತಡ ಇರಲಿದೆ. ಕೆಲವರು ಅಖಾರ ಮಾರ್ಗ್​​ನ ಬ್ಯಾರಿಕೇಡ್​ ಅನ್ನು ದಾಟಲು ಮುಂದಾಗಿರುವುದರಿಂದ ಕೆಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ವೈದ್ಯಕೀಯ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.

ಮೌನಿ ಅಮಾವಾಸ್ಯೆ ಮುಹೂರ್ತ ಮಂಗಳವಾರ ರಾತ್ರಿಯಿಂದಲೇ ಪ್ರಾರಂಭವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಂಗಮ್​ ಘಾಟ್​ನಲ್ಲಿ ತಡರಾತ್ರಿ ಅಮೃತ ಸ್ನಾನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದೆ.

ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: ಪ್ರಧಾನಿ ಮೋದಿ ಸಂತಾಪ; ತ್ರಿವೇಣಿ ಸಂಗಮದತ್ತ ಮತ್ತೆ ಭಕ್ತಸಾಗರ

ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: ಸಿಎಂ ಯೋಗಿ ಆದಿತ್ಯನಾಥ್​​ಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.