ETV Bharat / bharat

41 ಘಾಟ್​ಗಳಿದ್ದರೂ ಸಂಗಮ್​ ಘಾಟ್​ಗೆ ಭಕ್ತರು ನುಗ್ಗಿದ್ದು ಕಾಲ್ತುಳಿತಕ್ಕೆ ಪ್ರಮುಖ ಕಾರಣವಾಯ್ತೆ!? - MAHAKUMBH STAMPEDE REASONS

ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿದ್ದು, ಅದಕ್ಕೆ ಪ್ರಮುಖ ಕಾರಣಗಳು ಏನು ಎಂಬುದು ಇಲ್ಲಿದೆ.

ಮಹಾ ಕುಂಭಮೇಳದಲ್ಲಿ ಕಾಲ್ತುಳಿತದಿಂದ ಉಂಟಾದ ಅವ್ಯವಸ್ಥೆ
ಮಹಾ ಕುಂಭಮೇಳದಲ್ಲಿ ಕಾಲ್ತುಳಿತದಿಂದ ಉಂಟಾದ ಅವ್ಯವಸ್ಥೆ (ETV Bharat)
author img

By ETV Bharat Karnataka Team

Published : Jan 29, 2025, 3:48 PM IST

Updated : Jan 29, 2025, 3:54 PM IST

ಪ್ರಯಾಗ್‌ರಾಜ್: ಸನಾತನಿಗಳ ಮಹಾ ಕುಂಭಮೇಳದಲ್ಲಿ ಅಚಾತುರ್ಯವೊಂದು ಘಟಿಸಿದೆ. ಇಂದು ಮಧ್ಯರಾತ್ರಿ 1.30 ರ ಸುಮಾರಿನಲ್ಲಿ ತ್ರಿವೇಣಿ ಸಂಗಮದ ಸಮೀಪ ಕಾಲ್ತುಳಿತ ಉಂಟಾಗಿದೆ. ಇದಕ್ಕೆ ಹಲವು ಕಾರಣಗಳಿದ್ದರೂ, ಇಲ್ಲಿರುವ 41 ಘಾಟ್​ಗಳ ಪೈಕಿ ಸಂಗಮ್​ ಘಾಟ್​ಗೇ ಹೆಚ್ಚಿನ ಭಕ್ತರು ಹರಿದು ಬಂದಿದ್ದು ದುರ್ಘಟನೆಗೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಇಂದು ಮೌನಿ ಅಮಾವಾಸ್ಯೆ ಕಾರಣ ಅಮೃತ ಸ್ನಾನಕ್ಕೆ ಕೋಟ್ಯಂತರ ಭಕ್ತರು ಮಹಾಕುಂಭ ನಗರಕ್ಕೆ ಹರಿದು ಬರುತ್ತಿದ್ದಾರೆ. ಕಾಲ್ತುಳಿತದಲ್ಲಿ ಈವರೆಗೂ 17 ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜನರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಐಜಿ ವೈಷ್ಣವ್​​ ಕೃಷ್ಣ ಅವರು ಮಾಹಿತಿ ನೀಡಿದಂತೆ, "ಕಾಲ್ತುಳಿತದ ನಂತರ ಅಖಾಡಗಳು ಅಮೃತಸ್ನಾನವನ್ನು ರದ್ದುಗೊಳಿಸಿದವು. ನಂತರ ಸರಳ ಸ್ನಾನಕ್ಕೆ ಒಪ್ಪಿವೆ. ಪೊಲೀಸರು ಜನಸಂದಣಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಎಲ್ಲವೂ ತಹಬದಿಗೆ ಬಂದಿದೆ" ಎಂದು ಹೇಳಿದ್ದಾರೆ.

ಬಟ್ಟೆ ಬದಲಿಸುವ ಕೋಣೆ ಕುಸಿತ: "ಭಕ್ತರ ಮೇಲೆ ಬಟ್ಟೆ ಬದಲಾಯಿಸುವ ಕೋಣೆ ಬಿದ್ದದ್ದೇ ಕಾಲ್ತುಳಿತಕ್ಕೆ ಮೊದಲ ಕಾರಣ ಎಂದು ಹೇಳಲಾಗುತ್ತಿದೆ. ಇಂದು ಮೌನಿ ಅಮಾವಾಸ್ಯೆಯಾದ ಕಾರಣ ಕೋಟ್ಯಂತರ ಭಕ್ತರು ಆಗಮಿಸುತ್ತಿದ್ದಾರೆ. ಇಡೀ ಪ್ರಯಾಗ್‌ರಾಜ್ ನಗರವು ಜನರಿಂದ ತುಂಬಿ ತುಳುಕುತ್ತಿದೆ. ತ್ರಿವೇಣಿ ಸಂಗಮದ ಕಡೆಗೆ ಬರುವ ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಶಾಸ್ತ್ರಿ ಸೇತುವೆ, ನೈನಿ ಸೇತುವೆಯ ಮೇಲೆ ಅಸಂಖ್ಯಾತ ಜನರು ಚಲಿಸುತ್ತಿದ್ದಾರೆ" ಎಂದರು.

ಸಂಗಮ್​ ಘಾಟ್​ನಲ್ಲಿ ಜನವೋ ಜನ: "ಮಹಾಕುಂಭ ನಗರದಲ್ಲಿ ಜನರ ಪುಣ್ಯ ಸ್ನಾನಕ್ಕೆ 41 ಘಾಟ್​ಗಳನ್ನು ನಿರ್ಮಿಸಲಾಗಿದೆ. ಆದರೆ, ಸಂಗಮ್​ ಘಾಟ್​​ ಕಡೆಗೆ ಹೆಚ್ಚಿನ ಭಕ್ತರು ಬರುತ್ತಿದ್ದಾರೆ. ಇದು ನಿಯಂತ್ರಣ ತಪ್ಪಲು ಕಾರಣವಾಗಿದೆ. ಈ ಪ್ರದೇಶವು ಮೂರು ನದಿಗಳ ಸಂಗಮವಾಗುವ ಸ್ಥಳವಾಗಿದೆ. ಇಲ್ಲಿ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ಈ ಘಾಟ್​​ನಲ್ಲಿ ದುರಂತ ಸಂಭವಿಸಿದೆ" ಎಂದು ಅಧಿಕಾರಿ ತಿಳಿಸಿದರು.

"ರಾತ್ರಿಯೇ ಭಕ್ತಸಾಗರ ಹರಿದುಬಂದಿತು. ಇಲ್ಲಿ ಮಲಗಿದ್ದವರನ್ನು ಲೆಕ್ಕಿಸದೇ ಜನರು ಮುಂದೆ ಸಾಗಿದರು. ಸೈರನ್​ ಮೂಲಕ ಎಚ್ಚರಿಕೆ ನೀಡಿದಾಗ್ಯೂ ಕೆಲವರು ನಿದ್ರೆಯಲ್ಲಿದ್ದರು. ಜನ ಸಂದಣಿ ಮಲಗಿದ್ದವರ ಮೇಲೆ ಹೆಚ್ಚು ಬಿದ್ದಿದ್ದಾರೆ. ಇದರಿಂದ ಅಪಾಯ ಉಂಟಾಗಿದೆ. ಪ್ರಾಣ ಉಳಿಸಿಕೊಳ್ಳಲು ಜನರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಇಡೀ ಪ್ರದೇಶವು ಕೆಲವೇ ನಿಮಿಷಗಳಲ್ಲಿ ಅಸ್ತವ್ಯಸ್ತವಾಯಿತು" ಎಂದು ಹೇಳಿದರು.

ಘಟನೆಗೆ 5 ಪ್ರಮುಖ ಕಾರಣಗಳು

  1. ಅಮೃತ ಸ್ನಾನದ ಕಾರಣ ಮೇಳ ವಿಕಾಸ ಪ್ರಾಧಿಕಾರವು ಮೂರು ದಿನಗಳ ಕಾಲ ಹೆಚ್ಚಿನ ಪಾಂಟೂನ್ ಸೇತುವೆಗಳನ್ನು ಮುಚ್ಚಿತ್ತು. ಇದರಿಂದಾಗಿ, ಝಾನ್ಸಿ ಮತ್ತು ನೈನಿ ಪ್ರದೇಶದ ಕಡೆಗೆ ಸ್ನಾನದ ಬಳಿಕ ಹೊರಗೆ ಹೋಗಲು ಅವಕಾಶವಿರಲಿಲ್ಲ. ಇದರಿಂದಾಗಿ, ಈ ಪ್ರದೇಶದಲ್ಲೇ ಜನಸಮೂಹ ಜಮಾಯಿಸಿತ್ತು.
  2. ಭಕ್ತರ ಸಂಖ್ಯೆ ಹೆಚ್ಚುತ್ತಿದ್ದರೂ, ಎಐ ನಿಗಾ ತಂಡಗಳು ಕಾಲ್ತುಳಿತದ ಜಾಗ್ರತೆ ವಹಿಸಲಿಲ್ಲ.
  3. ತ್ರಿವೇಣಿ ಸಂಗಮಕ್ಕೆ ಬರುವ ಮತ್ತು ಹೋಗುವ ದಾರಿ ಒಂದೇ ಆಗಿದ್ದರಿಂದ ಜನರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜನಸಂದಣಿ ಮಧ್ಯೆ ಸಿಲುಕಿದ್ದವರು ಅಲ್ಲಿಯೇ ಉಳಿಯುವಂತಾಯಿತು.
  4. ವಿಐಪಿಗಳ ನಿರಂತರ ಆಗಮನದಿಂದ ಅಧಿಕಾರಿಗಳು ಮತ್ತು ಪೊಲೀಸರು ಬಸವಳಿದಿದ್ದರು. ವಿಶ್ರಾಂತಿ ಸಿಗದೇ ನಿಗಾ ವಹಿಸಲು ಸಾಧ್ಯವಾಗಿಲ್ಲ.
  5. ಸಂಗಮ್ ಘಾಟ್​ನಲ್ಲಿ ಯಾವುದೇ ಅಂಗಡಿಗಳು ಮತ್ತು ಸ್ಟಾಲ್​​ಗಳನ್ನು ಹಾಕುವುದನ್ನು ನಿರ್ಬಂಧಿಸಲಾಗಿದೆ. ಆದಾಗ್ಯೂ ನೂರಾರು ಅಂಗಡಿಗಳು ಹಾಕಲಾಗಿದೆ. ಭಿಕ್ಷುಕರು ರಸ್ತೆಬದಿಯಲ್ಲಿ ಬೀಡು ಬಿಟ್ಟಿದ್ದಾರೆ.

ಓದಿ: ಮಹಾಕುಂಭ ಮೇಳದಲ್ಲಿ ಭೀಕರ ಕಾಲ್ತುಳಿತ; 17 ಮಂದಿ ಸಾವು ಶಂಕೆ, ಸಂಕಷ್ಟದಲ್ಲಿ ಬೆಳಗಾವಿಯ ಭಕ್ತರು

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: ಸಿಎಂ ಯೋಗಿ ಆದಿತ್ಯನಾಥ್​​ಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: ಪ್ರಧಾನಿ ಮೋದಿ ಸಂತಾಪ; ತ್ರಿವೇಣಿ ಸಂಗಮದತ್ತ ಮತ್ತೆ ಭಕ್ತಸಾಗರ

ಕಳಪೆ ವ್ಯವಸ್ಥೆ, ವಿಐಪಿ ಸಂಸ್ಕೃತಿ ಕಾಲ್ತುಳಿತಕ್ಕೆ ಕಾರಣ: ಮಲ್ಲಿಕಾರ್ಜುನ್‌ ಖರ್ಗೆ

Last Updated : Jan 29, 2025, 3:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.