ವಿ ಮಿಸ್ ಯು ಪುನೀತ್ ಸರ್.. 'ಕೆಜಿಎಫ್: ಚಾಪ್ಟರ್ 2' ಟ್ರೈಲರ್ ರಿಲೀಸ್ ವೇಳೆ ಭಾವುಕರಾದ ಯಶ್ - Yash talking on puneeth in kgf event
🎬 Watch Now: Feature Video
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ್ ದತ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನೆಮಾ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ಈ ವೇಳೆ ದಿ. ನಟ ಪುನೀತ್ ರಾಜ್ಕುಮಾರ್ ಅವರ ಬಗ್ಗೆ ಮಾತನಾಡಿದ್ದು, 'ವಿ ಮಿಸ್ ಯು ಪುನೀತ್ ಸರ್' ಎಂದು ಭಾವುಕರಾದರು. ಅಲ್ಲದೇ, ಅಪ್ಪು ಅವರ 'ನಿನ್ನಿಂದಲೇ' ಕನ್ನಡ ಸಿನಿಮಾದ ಮೂಲಕ 'ಹೊಂಬಾಳೆ' ಸಂಸ್ಥೆಯ ಜರ್ನಿ ಪ್ರಾರಂಭವಾಯಿತು. ಅಪ್ಪು ಅವರು ನಮ್ಮ ಹೃದಯದಲ್ಲಿ ಯಾವಾಗಲೂ ಜೀವಂತವಾಗಿರುತ್ತಾರೆ ಎಂದಿದ್ದಾರೆ.
Last Updated : Feb 3, 2023, 8:21 PM IST