ಪಿಎಸ್ಐ ನೇಮಕಾತಿಗೆ ಮರು ಪರೀಕ್ಷೆ ಬೇಡವೇ ಬೇಡ: ರ‍್ಯಾಂಕ್ ಅಭ್ಯರ್ಥಿಗಳ ಒತ್ತಾಯ - re-examination for PSI recruitment
🎬 Watch Now: Feature Video
ತುಮಕೂರು: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಯುತ್ತಿದೆ. ಕನಿಷ್ಠ ಪಕ್ಷ ಅಕ್ರಮ ಎಸಗಿದವರನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮಕೈಗೊಳ್ಳಿ. ಆದರೆ, ಕಷ್ಟಪಟ್ಟು ಓದಿ ಪರೀಕ್ಷೆ ಪಾಸ್ ಆದವರಿಗೆ ತೊಂದರೆ ಕೊಡಬೇಡಿ. ಯಾವುದೇ ಕಾರಣಕ್ಕೂ ಮರು ಪರೀಕ್ಷೆ ಬೇಡವೇ ಬೇಡ ಎಂದು ತಮಕೂರಿನ ಅಭ್ಯರ್ಥಿಗಳಾದ 52ನೇ ರ್ಯಾಂಕ್ನ ಮಹೇಶ್ ಗೌಡ ಹಾಗೂ 224ನೇ ರ್ಯಾಂಕ್ನ ಸಂಜೀವ್ ನಾಯ್ಕ್ ಆಗ್ರಹಿಸಿದ್ದಾರೆ. ಈ ಕುರಿತು 'ಈಟಿವಿ ಭಾರತ'ದೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.