ವೇಗವಾಗಿ ಬರ್ತಿದ್ದ ಕಾರು ನಿಲ್ಲಿಸಲು ಯತ್ನಿಸಿದ್ದೇ ತಪ್ಪಾಯ್ತು.. ಟ್ರಾಫಿಕ್ ಕಾನ್ಸ್ಟೇಬಲ್ ಮೇಲೆ ಹಲ್ಲೆ - ಕಾರು ಚಾಲಕನಿಂದ ಟ್ರಾಫಿಕ್ ಕಾನ್ಸ್ಟೆಬಲ್ ಮೇಲೆ ಹಲ್ಲೆ
🎬 Watch Now: Feature Video
ಭೀಮಾವರಂ(ಆಂಧ್ರಪ್ರದೇಶ): ಭೀಮಾವರಂ ಜಿಲ್ಲೆಯಲ್ಲಿ ಕರ್ತವ್ಯ ನಿರತ ಟ್ರಾಫಿಕ್ ಕಾನ್ಸ್ಟೇಬಲ್ ಮೇಲೆ ಕಾರು ಚಾಲಕನೊಬ್ಬ ಹಲ್ಲೆ ನಡೆಸಿದ್ದಾನೆ. ಇದರ ವಿಡಿಯೋ ಸದ್ಯ ವೈರಲ್ ಆಗಿದೆ. ವೇಗವಾಗಿ ಬರುತ್ತಿದ್ದ ಕಾರನ್ನು ಕಾನ್ಸ್ಟೇಬಲ್ ನಿಲ್ಲಿಸಲು ಯತ್ನಿಸಿದ್ದು, ಇದರಿಂದ ಆಕ್ರೋಶಗೊಂಡಿರುವ ಚಾಲಕ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿರುವ ಕಾರು ಚಾಲಕನನ್ನ ಭೀಮಾವರಂನ ಗುಣುಪುಡಿಯ ಸಂತೋಷ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಡ್ರೈವರ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ವಶಕ್ಕೆ ಪಡೆದುಕೊಂಡಿದ್ದಾರೆ.