40 ಅಡಿ ಅಂತರದಲ್ಲಿ ಹುಲಿ - ಅರಣ್ಯ ಇಲಾಖೆ ಸಿಬ್ಬಂದಿ ಮುಖಾಮುಖಿ.. ಪ್ರತಿನೋಟಕ್ಕೆ ಪೇರಿಕಿತ್ತ ವ್ಯಾಘ್ರ - ಚಾಮರಾಜನಗರದಲ್ಲಿ ಹುಲಿ ಮತ್ತು ಅರಣ್ಯ ಸಿಬ್ಬಂದಿ ಮುಖಾಮುಖಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15929348-thumbnail-3x2-sanju.jpg)
ಹುಲಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕೇವಲ 40 ಅಡಿ ಅಂತರದಲ್ಲಿ ಮುಖಾಮುಖಿ ನೋಟ ಬೀರಿದ ಘಟನೆ ಚಾಮರಾಜನಗರ ಗಡಿಭಾಗವಾದ ತಾಳವಾಡಿ ತಾಲೂಕಿನ ಕೊಂಗಳ್ಳಿ ಬೆಟ್ಟ ಸಮೀಪದ ಬೆಳ್ತೂರು ಗ್ರಾಮ ಸಮೀಪದ ಕಾಡಿನ ಕೆರೆಯಲ್ಲಿ ನಡೆದಿದೆ. ಕೆರೆಯ ಒಂದು ಬದಿಯಲ್ಲಿ ವ್ಯಾಘ್ರ ವಿಶ್ರಮಿಸುತ್ತಿದ್ದರೆ ಮತ್ತೊಂದು ಬದಿಯಲ್ಲಿ ಅರಣ್ಯ ಸಿಬ್ಬಂದಿ ನಿಂತು ಅದನ್ನು ದಿಟ್ಟಿಸಿ ನೋಡಿದ್ದಾರೆ. ಸ್ವಲ್ಪ ಹೊತ್ತು ಹುಲಿಯೂ ಇವರತ್ತ ನೋಡಿ ನಂತರ ಅಲ್ಲಿಂದ ತೆರಳಿದೆ. ಈ ಅಪರೂಪದ ಮುಖಾಮುಖಿ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.