ವಾಷಿಂಗ್ಟನ್,ಅಮೆರಿಕ: ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಸಂಬಂಧಗಳನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಭೆ ನಡೆಸಲು ಪ್ರಧಾನಿ ಮೋದಿ ಬುಧವಾರ ವಾಷಿಂಗ್ಟನ್ ಗೆ ಬಂದಿಳಿದಿದ್ದಾರೆ. ಯುಎಸ್ ರಾಜಧಾನಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನಿವಾಸಿ ಭಾರತೀಯರು ಅದ್ಧೂರಿ ಸ್ವಾಗತ ಕೋರಿದರು.
ಫ್ರಾನ್ಸ್ ಪ್ರವಾಸ ಪೂರ್ಣಗೊಳಿಸಿದ ಮೋದಿ ಅಲ್ಲಿಂದಾ ಸೀದಾ ಬೋಯಿಂಗ್ 777 ರಲ್ಲಿ 24 ಗಂಟೆಗಳ ಬಿರುಗಾಳಿ ಭೇಟಿಗಾಗಿ ವಾಷಿಂಗ್ಟನ್ ಗೆ ಬಂದಿಳಿದರು. ಈ ಸಂದರ್ಭದಲ್ಲಿ ಭಾರತೀಯರು ಮತ್ತು ಇತರ ಉತ್ಸಾಹಿ ಗುಂಪುಗಳು ಅವರನ್ನು ಅತ್ಯಂತ ಸಂಭ್ರಮದಿಂದ ಬರ ಮಾಡಿಕೊಂಡವು.
#WATCH | US: Prime Minister Narendra Modi lands in Washington DC to a warm welcome pic.twitter.com/YaApqGZ93Y
— ANI (@ANI) February 13, 2025
ಅನಿವಾಸಿ ಭಾರತೀಯರಿಗೆ ಅಭಿನಂದನೆ ಸಲ್ಲಿಸಿದ ಪಿಎಂ: ತೀವ್ರ ಶೀತಗಾಳಿಯ ನಡುವೆ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ಅನಿವಾಸಿಯರು ನನ್ನನ್ನು ವಿಶೇಷವಾಗಿ ಸ್ವಾಗತಿಸಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು ಎಂದು ಪ್ರಧಾನಿ ಮೋದಿ ತಮ್ಮ X ನಲ್ಲಿ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ವಾಷಿಂಗ್ಟನ್‌ಗೆ ತೆರಳುವ ಮೊದಲು, ಎಕ್ಸ್ ಪೋಸ್ಟ್ ವೊಂದನ್ನು ಹಾಕಿದ ಪ್ರಧಾನಿ ಮೋದಿ "ಈ ಭೇಟಿ ಭಾರತ - ಅಮೆರಿಕದ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಮತ್ತು ವೈವಿಧ್ಯಮಯ ವಲಯಗಳಲ್ಲಿ ಸಂಬಂಧಗಳನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
Washington, DC: Prime Minister Narendra Modi met US Director Of National Intelligence Tulsi Gabbard pic.twitter.com/IqOH1YfnFp
— ANI (@ANI) February 13, 2025
ಅಧ್ಯಕ್ಷ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಅವರೊಂದಿಗೆ ಕೆಲಸ ಮಾಡಿದ್ದನ್ನು ನಾನು ಹೃತ್ಪೂರ್ವಕವಾಗಿ ನೆನಪಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಫ್ರಾನ್ಸ್‌ನಲ್ಲಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಕೃತಕ ಬುದ್ಧಿಮತ್ತೆ ಶೃಂಗಸಭೆಯ ಸಹ-ಆತಿಥ್ಯ ವಹಿಸಿದ್ದರು. ಇದೇ ವೇಳೆ ಅವರು ಮಾರ್ಸಿಲ್ಲೆಯಲ್ಲಿ ಭಾರತದ ಕಾನ್ಸುಲೇಟ್ ಜನರಲ್ ಉದ್ಘಾಟಿಸಿದರು.
ಟ್ರಂಪ್ ತಮ್ಮ ಎರಡನೇ ಅವಧಿಯ ಅಧಿಕಾರವನ್ನು ಪ್ರಾರಂಭಿಸಿದ ನಂತರ, ಅಮೆರಿಕಕ್ಕೆ ಅಧಿಕೃತವಾಗಿ ಭೇಟಿ ಮಾಡಿದ ನಾಲ್ಕನೇ ಅಂತಾರಾಷ್ಟ್ರೀಯ ನಾಯಕ ಪ್ರಧಾನಿ ಮೋದಿ ಅವರಾಗಿದ್ದಾರೆ. ಇದಕ್ಕೂ ಮೊದಲು, ಇಸ್ರೇಲ್‌ನ ಪ್ರಧಾನ ಮಂತ್ರಿಗಳಾದ ಬೆಂಜಮಿನ್ ನೆತನ್ಯಾಹು ಮತ್ತು ಜಪಾನ್‌ನ ಶಿಗೇರು ಇಶಿಬಾ ಮತ್ತು ಜೋರ್ಡಾನ್‌ನ ರಾಜ ಅಬ್ದುಲ್ಲಾ II ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದರು.
ಪ್ರಧಾನಿಯಾಗಿ ಪ್ರಧಾನಿ ಮೋದಿ ಅವರ 10 ನೇ ಅಮೆರಿಕ ಭೇಟಿ ಇದಾಗಿದ್ದರೆ, ಮತ್ತು ಟ್ರಂಪ್ ಅಧ್ಯಕ್ಷೀಯ ಅವಧಿಯ ನಾಲ್ಕನೇ ಭೇಟಿಯಾಗಿದೆ.
#WATCH | Washington, DC: Prime Minister Narendra Modi arrives at Blair House and greets the Indian diaspora gathered there.
— ANI (@ANI) February 12, 2025
(Video - ANI/DD) pic.twitter.com/q5tEhQtV9W
ಇಂದು ಎಲಾನ್ ಮಸ್ಕ್ ಭೇಟಿ ಮಾಡಲಿರುವ ಪ್ರಧಾನಿ: ಗುರುವಾರ ಶ್ವೇತಭವನಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮತ್ತು ವಿಶ್ವಾಸಾರ್ಹ ಮಿತ್ರ ಎಂದು ಹೊರಹೊಮ್ಮಿರುವ ಬಿಲಿಯನೇರ್ ಎಲಾನ್ ಮಸ್ಕ್ ಅವರನ್ನು ಭೇಟಿ ಮಾಡಲಿದ್ದಾರೆ.
ಪ್ರಧಾನಿ ಮೋದಿ ತಮ್ಮ ಎರಡು ದಿನಗಳ ಭೇಟಿಯಲ್ಲಿ ಇತರ ಪ್ರಮುಖ ಉದ್ಯಮಿಗಳನ್ನು ಸಹ ಭೇಟಿ ಮಾಡುವ ನಿರೀಕ್ಷೆಯಿದೆ. ಆದರೆ ಮಸ್ಕ್ ಭೇಟಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
ಪ್ರಧಾನಿ ಮೋದಿ ಮತ್ತು ಉದ್ಯಮಿ ಮಸ್ಕ್ ಹಲವಾರು ಬಾರಿ ಭೇಟಿಯಾಗಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರಾಗಿದ್ದ ಮಸ್ಕ್ ಈಗ ಬಹಳ ದೂರ ಕ್ರಮಿಸಿದ್ದಾರೆ. ಅವರೀಗ ಅಧ್ಯಕ್ಷ ಟ್ರಂಪ್ ಅವರ ಆಪ್ತ ಮಿತ್ರ ಮತ್ತು ವಿಶ್ವಾಸಾರ್ಹ ಸಲಹೆಗಾರರಾಗಿ ಹೊರಹೊಮ್ಮಿದ್ದಾರೆ. ಹೀಗಾಗಿ ಇಂದಿನ ಮಸ್ಕ್ ಅವರ ಭೇಟಿ ಭಾರಿ ಕುತೂಹಲವನ್ನು ಕೆರಳಿಸಿದೆ.
ಭಾರತದಲ್ಲಿ ಹೆಚ್ಚು ಕೈಗೆಟುಕುವ ಮಾದರಿಯ ಆಲ್ - ಎಲೆಕ್ಟ್ರಿಕ್ ಟೆಸ್ಲಾ ಕಾರಿನ ಕಲ್ಪನೆಯನ್ನು ಈ ಬಿಲಿಯನೇರ್ ರೂಪಿಸಿದ್ದಾರೆ. ಆದರೆ ಅವರು ಇನ್ನೂ ಆಸಕ್ತಿ ಹೊಂದಿದ್ದಾರೆಯೇ ಅಥವಾ ಬೇರೆ ಯಾವುದರ ಬಗ್ಗೆ ಮಾತನಾಡಲು ಬಯಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.
ಭಾರತದಲ್ಲಿ ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ನಿರಂತರ ಪ್ರಯತ್ನದಲ್ಲಿ ಪ್ರಧಾನಿ ಮೋದಿ ಇದ್ದಾರೆ. ಈ ಹಿಂದೆ ಪ್ರತಿ ಪ್ರವಾಸದ ಸಮಯದಲ್ಲಿಯೂ ಅಮೆರಿಕದ ವಾಣಿಜ್ಯೋದ್ಯಮಿಗಳನ್ನು ಪ್ರಧಾನಿ ಮೋದಿ ಭೇಟಿ ಮಾಡಿದ್ದಾರೆ.
ಇದನ್ನು ಓದಿ: 2 ದಿನಗಳ ಪ್ರವಾಸಕ್ಕಾಗಿ ವಾಷಿಂಗ್ಟನ್ ತಲುಪಿದ ಮೋದಿ: ಟ್ರಂಪ್ ಜತೆ ಮಹತ್ವದ ಮಾತುಕತೆ