ನವದೆಹಲಿ: ಇತಿಹಾಸದಲ್ಲೇ ಮೊದಲ ಬಾರಿಗೆ ದೆಹಲಿಯ ರಾಷ್ಟ್ರಪತಿ ಭವನದದಲ್ಲಿ ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
![CRPF OFFICERS GET MARRIED AT RASHTRAPATI BHAVAN, HISTORIC WEDDING](https://etvbharatimages.akamaized.net/etvbharat/prod-images/13-02-2025/23525361_mkihs.jpg)
ಹೌದು... ಈ ಮದುವೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಎಂದಿಗೂ ಅಳೆಯಲಾರದ ವಿವಾಹವಾಗಿ ಇತಿಹಾಸದಲ್ಲಿ ಮುದ್ರಿತವಾಗಿದೆ. ನಿನ್ನೆಯ ದಿನ ಇಬ್ಬರು ಸಿಆರ್‌ಪಿಎಫ್ ಯೋಧರು ರಾಷ್ಟ್ರಪತಿ ಭವನದಲ್ಲಿರುವ ಮದರ್ ತೆರೇಸಾ ಕ್ರೌನ್ ಕಾಂಪ್ಲೆಕ್ಸ್ನಲ್ಲಿ ಮದುವೆಯಾಗಿದ್ದಾರೆ.
![CRPF OFFICERS GET MARRIED AT RASHTRAPATI BHAVAN, HISTORIC WEDDING](https://etvbharatimages.akamaized.net/etvbharat/prod-images/13-02-2025/23525361_abhi.jpg)
![CRPF OFFICERS GET MARRIED AT RASHTRAPATI BHAVAN, HISTORIC WEDDING](https://etvbharatimages.akamaized.net/etvbharat/prod-images/13-02-2025/23525361_yugs.jpeg)
ಮಧುಮಗಳ ಹೆಸರು ಪೂನಂ ಗುಪ್ತಾ. ಇತ್ತೀಚಿನ ದಿನಗಳಲ್ಲಿ ನೀವು ಈ ಹೆಸರು ಕೇಳಿರಬಹುದು. ಏಕೆಂದರೆ ರಾಷ್ಟ್ರಪತಿ ಭವನದಲ್ಲಿ ನಡೆದ ಮೊದಲ ಮದುವೆ ಇವರದ್ದಾಗಿದೆ. ಈ ಜೋಡಿಗಳಿಬ್ಬರು ಸಿಆರ್‌ಪಿಎಫ್ ಅಧಿಕಾರಿಗಳು.
![CRPF OFFICERS GET MARRIED AT RASHTRAPATI BHAVAN, HISTORIC WEDDING](https://etvbharatimages.akamaized.net/etvbharat/prod-images/13-02-2025/23525361_bhavana.jpg)
![CRPF OFFICERS GET MARRIED AT RASHTRAPATI BHAVAN, HISTORIC WEDDING](https://etvbharatimages.akamaized.net/etvbharat/prod-images/13-02-2025/23525361_mansui.jpg)
ವರ ಉತ್ತರಪ್ರದೇಶದ ಅವನೀಶ್ ಕುಮಾರ್ ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಾಯಕ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೇ ಮಧ್ಯಪ್ರದೇಶದ ಶಿವಪುರಿ ನಿವಾಸಿಯಾಗಿರುವ ಪೂನಂ ಗುಪ್ತಾ ಸಿಆರ್‌ಪಿಎಫ್ ಸಹಾಯಕ ಮಹಿಳಾ ಕಮಾಂಡೋ ಆಗಿದ್ದು ಪ್ರಸ್ತುತ ರಾಷ್ಟ್ರಪತಿ ಭವನದಲ್ಲಿ ಪಿಎಸ್‌ಒ (ವೈಯಕ್ತಿಕ ಭದ್ರತಾ ಅಧಿಕಾರಿ) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
![CRPF OFFICERS GET MARRIED AT RASHTRAPATI BHAVAN, HISTORIC WEDDING](https://etvbharatimages.akamaized.net/etvbharat/prod-images/13-02-2025/23525361_maduve.jpeg)
74ನೇ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಮಹಿಳಾ ತುಕಡಿಯನ್ನು ಪೂನಂ ಗುಪ್ತಾ ಮುನ್ನಡೆಸಿದ್ದರು.
![CRPF OFFICERS GET MARRIED AT RASHTRAPATI BHAVAN, HISTORIC WEDDING](https://etvbharatimages.akamaized.net/etvbharat/prod-images/13-02-2025/23525361_tutgse.jpg)
ಪ್ರೇಮವಿವಾಹಕ್ಕೆ ಅಸ್ತು ಎಂದ ರಾಷ್ಟ್ರಪತಿ ಭವನ: ಪೂನಂ ಗುಪ್ತಾ ಹಾಗೂ ಅವನೀಶ್ ಕುಮಾರ್ ಇಬ್ಬರೂ ದೆಹಲಿಯಲ್ಲಿ ಕರ್ತವ್ಯದ ವೇಳೆ ಭೇಟಿಯಾಗಿದ್ದರು. ಇಲ್ಲಿಂದ ಅವರ ಪ್ರೀತಿ ಚಿಗುರಿತು. ಕೆಲ ದಿನಗಳ ಹಿಂದೆ ಪೂನಂ ಮತ್ತು ಅವನೀಶ್ ಅವರ ನಿಶ್ಚಿತಾರ್ಥವೂ ನೆರವೇರಿತ್ತು. ಮದುವೆ ಕಾರ್ಯಕ್ರಮದಲ್ಲಿ ಎರಡೂ ಕುಟುಂಬಗಳ ಆಪ್ತರು ಮಾತ್ರ ಭಾಗವಹಿಸಿದ್ದಾರೆ. ಫೆ.11ರ ಮಂಗಳವಾರ ತಿಲಕೋತ್ಸವ ಜರುಗಿದೆ. ಅದೇ ದಿನ ಸಂಜೆ ಸಂಗೀತ ಕಾರ್ಯಕ್ರಮವಿತ್ತು. ಫೆಬ್ರವರಿ 12 ರಂದು ಬೆಳಗ್ಗೆ ಹಳದಿ ಕಾರ್ಯಕ್ರಮ ನಡೆದಿದೆ. ಬಳಿಕ ರಾಷ್ಟ್ರಪತಿ ಭವನದಲ್ಲಿ ಮದುವೆ ನಡೆದಿದೆ.
ಇದನ್ನೂ ಓದಿ: ಆರ್ಥಿಕ ಅಭಿವೃದ್ಧಿಗೆ ಸಾಕ್ಷ್ಯಿಯಾದ ಮಹಾ ಕುಂಭಮೇಳ: ಹಲವು ಉದ್ಯೋಗಗಳ ಸೃಷ್ಟಿ- ಹೀಗೆ ಹೇಳುತ್ತಿವೆ ಅಂಕಿ - ಅಂಶಗಳು!