ತಪಾಸಣೆಗೆ ನಿಂತಿದ್ದ ಇಬ್ಬರು ಪೊಲೀಸರಿಗೆ ಡಿಕ್ಕಿ ಹೊಡೆದ ಕಾರು.. ಸಿಸಿಟಿವಿ ವಿಡಿಯೋ - ಹಿಟ್ ಅಂಡ್ ರನ್ ಕೇಸ್
🎬 Watch Now: Feature Video

ಜೈಪುರ್(ರಾಜಸ್ಥಾನ): ತಪಾಸಣೆ ನಿಮಿತ್ತ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ, ನಿಂತುಕೊಂಡಿದ್ದ ಇಬ್ಬರು ಪೊಲೀಸರ ಮೇಲೆ ವೇಗವಾಗಿ ಬಂದ ಕಾರುವೊಂದು ಡಿಕ್ಕಿ ಹೊಡೆದಿದೆ. ಇದರ ದೃಶ್ಯಾವಳಿ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಜೈಪುರದ ಝೋತ್ವಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಪೊಲೀಸರು ಕೆಲ ದೂರ ಹಾರಿ ಬಿದಿದ್ದಾರೆ. ಘಟನೆ ಬೆನ್ನಲ್ಲೇ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನ ನಂಬರ್ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.