ಸರ್ದಾರ್ ವಲ್ಲಭಬಾಯ್ ಪಟೇಲ್ ಏಕತಾ ಪ್ರತಿಮೆಗೆ ಮೋದಿ ಭೇಟಿ - ಮೋದಿ ಗುಜರಾತ್ ಪ್ರವಾಸ
🎬 Watch Now: Feature Video

ಗುಜರಾತ್: ಎರಡು ದಿನಗಳ ಗುಜರಾತ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಕೆವಾಡಿಯಾದಲ್ಲಿರುವ ಸರ್ದಾರ್ ವಲ್ಲಭಬಾಯ್ ಪಟೇಲ್ ಏಕತಾ ಪ್ರತಿಮೆಗೆ ಭೇಟಿ ನೀಡಿದರು. ಹಾಗೆ ಯೂನಿಟಿ ಗ್ಲೋ ಗಾರ್ಡನ್ಗೆ ತೆರಳಿ ವೀಕ್ಷಣೆ ನಡೆಸಿದ್ದಾರೆ. ಕೆವಾಡಿಯಾದಲ್ಲೇ ಇರುವ ಸರ್ದಾರ್ ಸರೋವರ್ ಅಣೆಕಟ್ಟಿನ ಡೈನಾಮಿಕ್ ಡ್ಯಾಮ್ ಲೈಟಿಂಗ್ ಅನ್ನು ಮೋದಿ ಉದ್ಘಾಟಿಸಿದರು. ಇದೇ ವೇಳೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ್, ಮೋದಿಗೆ ಸಾಥ್ ನೀಡಿದ್ದಾರೆ.