ತಮಿಳುನಾಡಿನಲ್ಲಿ ನಮೋ ರೋಡ್ ಶೋ.. ಮೋದಿ.. ಮೋದಿ ಎಂದು ಜೈಕಾರ ಹಾಕಿದ ಅಪಾರ ಜನಸ್ತೋಮ - ಚೆನ್ನೈನಲ್ಲಿ ಮೋದಿ ರೋಡ್ ಶೋ
🎬 Watch Now: Feature Video
ಚೆನ್ನೈ(ತಮಿಳುನಾಡು): ವಿವಿಧ ಯೋಜನೆಗಳಿಗೆ ಚಾಲನೆ ನೀಡುವ ಉದ್ದೇಶದಿಂದ ತಮಿಳುನಾಡು ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು, ಮೋದಿ ಪರ ಜೈಕಾರ ಹಾಕಿದರು. ಚೆನ್ನೈ ಏರ್ಪೋರ್ಟ್ಗೆ ಬಂದು ಇಳಿದುಕೊಳ್ಳುತ್ತಿದ್ದಂತೆ ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ, ಗವರ್ನರ್ ಸೇರಿದಂತೆ ಅನೇಕರು ಸ್ವಾಗತಿಸಿದರು. ಇದಾದ ಬಳಿಕ ನಡೆದ ರೋಡ್ ಶೋ ವೇಳೆ ಅಪಾರ ಜನಸ್ತೋಮ ಅವರಿಗೆ ಜೈಕಾರ ಹಾಕಿದರು. ಈ ವೇಳೆ ಮೋದಿ ಅವರತ್ತ ಕೈ ಬೀಸಿ, ತಮ್ಮ ಪ್ರೀತಿ ಹೊರಹಾಕಿದರು.