ವಿಡಿಯೋ: ರೈಲ್ವೆ ಪ್ಲಾಟ್ ಫಾರಂನಲ್ಲೇ ಪ್ರಯಾಣಿಕರಿಂದ ಸಖತ್ ಗರ್ಬಾ ಡ್ಯಾನ್ಸ್! - ಪ್ರಯಾಣಿಕರಿಂದ ಸಖತ್ ಗರ್ಬಾ ಡ್ಯಾನ್ಸ್
🎬 Watch Now: Feature Video
ರತ್ಲಾಮ್(ಮಧ್ಯಪ್ರದೇಶ): ರೈಲ್ವೆ ಪ್ಲಾಟ್ಫಾರಂನಲ್ಲಿ ತುಂಬಾ ಸಮಯ ನಿಂತುಕೊಂಡಿದ್ದ ಪ್ರಯಾಣಿಕರು ಬೇಸರ ಹೋಗಲಾಡಿಸಿಕೊಳ್ಳಲು ಗರ್ಬಾ ಡ್ಯಾನ್ಸ್ ಮಾಡಿದ್ದಾರೆ. ಮಧ್ಯಪ್ರದೇಶದ ರತ್ಲಾಮ್ನ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಪ್ಲಾಟ್ಪಾರಂ ನಂಬರ್ 4ರಲ್ಲಿ ಪ್ರಯಾಣಿಕರು ಈ ರೀತಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಾಂದ್ರಾ - ಹರಿದ್ವಾರ ರೈಲು ಸಮಯಕ್ಕಿಂತ ಮುಂಚಿತವಾಗಿ ರೈಲ್ವೆ ನಿಲ್ದಾಣದಲ್ಲಿ ಬಂದು ನಿಂತ ಕಾರಣ, ಪ್ರಯಾಣಿಕರು ಬೇಸರಗೊಂಡಿದ್ದರು. ಅದನ್ನ ಹೋಗಲಾಡಿಸುವ ಉದ್ದೇಶದಿಂದ ಎಲ್ಲರೂ ಸೇರಿಕೊಂಡು ಗರ್ಬಾ ಡ್ಯಾನ್ಸ್ ಮಾಡಿದ್ದಾರೆ. ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ಇದರ ವಿಡಿಯೋ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.