ಜೀವ ಕೈಯಲ್ಲಿ ಹಿಡಿದು ತುಂಬಿ ಹರಿಯುತ್ತಿರುವ ಹಳ್ಳ ದಾಟುತ್ತಿರುವ ವೃದ್ಧರು, ವಿದ್ಯಾರ್ಥಿಗಳು - ಚಿಕ್ಕಮಗಳೂರು ತಾಲೂಕಿನ ಆವುತಿ ಹೋಬಳಿಯ ಕೆಲ್ಲಳ್ಳಿ ಗ್ರಾಮ
🎬 Watch Now: Feature Video
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಆವುತಿ ಹೋಬಳಿಯ ಕೆಲ್ಲಳ್ಳಿ ಗ್ರಾಮದಲ್ಲಿ ಜನರು ಮಳೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗೆ ಹಳ್ಳವೊಂದು ರಭಸವಾಗಿ ಹರಿಯುತ್ತಿದ್ದು, ಹಳ್ಳ ದಾಟಲಾಗದೇ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಪರದಾಡುತ್ತಿದ್ದಾರೆ. ಕೆಲ್ಲಳ್ಳಿ - ಬೆರಣಗೋಡು - ಬಸರವಳ್ಳಿ ಸಂಪರ್ಕ ಕಡಿತವಾಗಿದೆ. ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವಂತೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಕೆಲ್ಲಳ್ಳಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.