ವಿಡಿಯೋ: ಮೃತ ಸಾಧುವಿನ ಕೋಣೆಯಲ್ಲಿ ಹಣದ ಚೀಲ ನೋಡಿ ಬೆಚ್ಚಿಬಿದ್ದ ಪೊಲೀಸರು! - ಆಂಧ್ರಪ್ರದೇಶ ಕಾಕಿನಾಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15470493-thumbnail-3x2-wdfdfdfd.jpg)
ಕಾಕಿನಾಡ(ಆಂಧ್ರಪ್ರದೇಶ): ಕಾಕಿನಾಡಿನ ಕರಪ ಮಂಡಲದ ವೇಲಂಗಿಯಲ್ಲಿ ಹೃದಯಾಘಾತದಿಂದ ಸಾಧು ಒಬ್ಬರು ಸಾವನ್ನಪ್ಪಿದ್ದು, ಅವರು ವಾಸ ಮಾಡ್ತಿದ್ದ ಕೋಣೆಯಲ್ಲಿ ಹಣದ ಚೀಲಗಳು ಪತ್ತೆಯಾಗಿವೆ. ಭಿಕ್ಷಾಟನೆ ಮತ್ತು ತಾಯತ ಕಟ್ಟುವ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕಳೆದ ಗುರುವಾರ ಹೃದಯಾಘಾತದಿಂದ ಹಠಾತ್ ಸಾವನ್ನಪ್ಪಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಕೋಣೆಯಲ್ಲಿ ಎರಡು ಚೀಲ ಹಣ ನೋಡಿ ಬೆಚ್ಚಿಬಿದ್ದಿದ್ದಾರೆ. ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಪೊಲೀಸರು ಹಣ ವಶಕ್ಕೆ ಪಡೆದುಕೊಂಡು, ಕೌಂಟ್ ಮಾಡಿದ್ದಾರೆ. ಈ ವೇಳೆ ಅದರಲ್ಲಿ ಒಟ್ಟು 3 ಲಕ್ಷದ 39 ಸಾವಿರದ 500 ರೂ. ಇರುವುದು ಗೊತ್ತಾಗಿದೆ.