ಶಾಲಾ ಸಮವಸ್ತ್ರ & ಪುಸ್ತಕ ಹಣ ಸಿಗದ ಆಕ್ರೋಶ.. ಕತ್ತಿ ಹಿಡಿದು ಶಾಲೆಗೆ ಹೋದ ತಂದೆ:ವಿಡಿಯೋ - ಬಿಹಾರದ ವಿಡಿಯೋ ವೈರಲ್
🎬 Watch Now: Feature Video
ಅರಾರಿಯಾ(ಬಿಹಾರ): ಮಗನ ಶಾಲಾ ಸಮವಸ್ತ್ರ ಹಾಗೂ ಪುಸ್ತಕದ ಹಣ ಸಿಗದ ಕಾರಣ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಕೈಯಲ್ಲಿ ಕತ್ತಿ ಹಿಡಿದು ಶಾಲೆಗೆ ತೆರಳಿದ್ದಾನೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಬಿಹಾರದ ಭಗವಾನ್ಪುರ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಲುಂಗಿ ಧರಿಸಿರುವ ವ್ಯಕ್ತಿಯೊಬ್ಬ ಕೈಯಲ್ಲಿ ಕತ್ತಿ ಹಿಡಿದುಕೊಂಡು ಶಿಕ್ಷಕರನ್ನ ನಿಂದಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರಿಗೆ ಬೆದರಿಕೆ ಹಾಕಿದ್ದು, 24 ಗಂಟೆಯಲ್ಲಿ ಮಗುವಿಗೆ ಸಮವಸ್ತ್ರ ಮತ್ತು ಪುಸ್ತಕದ ಮೊತ್ತ ನೀಡದಿದ್ದರೆ ವಾಪಸ್ ಬರುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ಇತರೆ ಮಕ್ಕಳ ಪೋಷಕರು ಸಹ ಸ್ಥಳದಲ್ಲಿ ಉಪಸ್ಥಿತರಿದ್ದರು ಎನ್ನಲಾಗಿದೆ. ಘಟನೆಯಿಂದ ಮಕ್ಕಳು ಭಯಭೀತರಾಗಿದ್ದು, ಇದರ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರು ದೂರು ದಾಖಲು ಮಾಡಿದ್ದಾರೆ.