ಕಾಪಾಡಿ... ಕಾಪಾಡಿ ಎಂಬ ಚೀರಾಟ: ಕಲಬುರಗಿ ಬಸ್​​ ಅಪಘಾತದ ಬಗ್ಗೆ ಪ್ರತ್ಯಕ್ಷದರ್ಶಿಗಳ ಮಾತು - ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ

🎬 Watch Now: Feature Video

thumbnail

By

Published : Jun 3, 2022, 12:48 PM IST

ಕಲಬುರಗಿ ಹೊರವಲಯದ ಬಳಿ ನಡೆದ ವೋಲ್ವೋ ಬಸ್​ ಭೀಕರ ಅಪಘಾತ ಪ್ರಕರಣದಲ್ಲಿ ಏಳು ಜನರು ಸಜೀವ ದಹನವಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳು ಮಾತನಾಡಿದ್ದಾರೆ. ಬೆಳಗ್ಗೆ 6:30ರಿಂದ 7 ಗಂಟೆ ನಡುವೆ ಅಪಘಾತ ಸಂಭವಿಸಿದ್ದು, ಆರಂಭದಲ್ಲಿ ದೊಡ್ಡ ಮಟ್ಟದಲ್ಲಿ ಶಬ್ಧವಾಯಿತು. ಅಲ್ಲಿಗೆ ತೆರಳಿ ನೋಡುವಷ್ಟರಲ್ಲಿ ಬಸ್​​ಗೆ ಬೆಂಕಿ ಹತ್ತಿಕೊಂಡಿತ್ತು. ಈ ವೇಳೆ ಕೆಲವರು ಹೊರ ಬಂದರೆ, ಇನ್ನೂ ಹಲವರು ಕಾಪಾಡಿ... ಕಾಪಾಡಿ ಎಂದು ಚೀರಾಡುತ್ತಿದ್ದರು. ವೇಗವಾಗಿ ಬಂದಿರುವ ಬಸ್ ಗೂಡ್ಸ್​ ವಾಹನಕ್ಕೆ ಡಿಕ್ಕಿ ಹೊಡೆದು, ನಂತರ ಬ್ರಿಡ್ಜ್​ಗೆ ಡಿಕ್ಕಿ ಹೊಡೆದು, ಉರುಳಿ ಬಿದ್ದಿದೆ ಎಂದು ತಿಳಿಸಿದರು. ಬಸ್​​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಅದರೊಳಗೆ ಹೋಗಲು ಸಾಧ್ಯವಾಗಲಿಲ್ಲ ಎಂಬ ಮಾಹಿತಿ ನೀಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.