ETV Bharat / lifestyle

ಪೂರಿ ಎಣ್ಣೆ ಹೀರಿಕೊಳ್ಳದೆ ಚೆನ್ನಾಗಿ ಉಬ್ಬಬೇಕಾ? ಹಿಟ್ಟಿಗೆ ಈ ಪದಾರ್ಥವನ್ನು ಸ್ವಲ್ಪ ಸೇರಿಸಿ ನೋಡಿ - PURI MAKING TRICKS AND TIPS

ಹಿಟ್ಟಿಗೆ ಈ ಪದಾರ್ಥವನ್ನು ಸೇರಿಸಿದರೆ ಸಾಕು, ಪೂರಿ ಎಣ್ಣೆ ಹೀರಿಕೊಳ್ಳದೆ ಚೆನ್ನಾಗಿ ಉಬ್ಬುತ್ತದೆ. ತುಂಬಾ ಟೇಸ್ಟಿಯಾದ ಪೂರಿಗಳನ್ನು ಮಾಡುವುದು ಹೇಗೆ ಎಂಬುದನ್ನು ಈಗ ತಿಳಿಯೋಣ.

PURI FOOD  HOW TO MAKE PURIS  BREAKFAST RECIPE  PURI MAKING TRICKS AND TIPS
ಸೂಪರ್​ ಟೇಸ್ಟಿ ಪೂರಿ (ETV Bharat)
author img

By ETV Bharat Lifestyle Team

Published : Feb 25, 2025, 6:05 PM IST

Puri Making Tricks And Tips: ಬೆಳಗಿನ ಉಪಹಾರಕ್ಕೆ ಇಡ್ಲಿ, ದೋಸೆ ಎಲ್ಲ ವಯೋಮಾನದವರಿಗೂ ಕೆಲವು ಬಾರಿ ಇಷ್ಟ ಆಗುವುದಿಲ್ಲ. ಅದಕ್ಕಾಗಿ ಸಾಂದರ್ಭಿಕವಾಗಿ ಪೂರಿ ಮಾಡಿದರೆ ಅವರು ಇಷ್ಟಪಡುತ್ತಾರೆ. ಪೂರಿಗಳು ಎಣ್ಣೆಯನ್ನು ಚೆನ್ನಾಗಿ ಹೀರಿಕೊಳ್ಳುತ್ತವೆ ಹಾಗೂ ಅವು ಸರಿಯಾಗಿ ಉಬ್ಬುವುದಿಲ್ಲ ಎಂದು ಚಿಂತಿಸಬೇಕಾದ ಅವಶ್ಯಕತೆಯೇ ಇಲ್ಲ. ಎಣ್ಣೆ ಹೀರಿಕೊಳ್ಳದೇ ಚೆನ್ನಾಗಿ ಉಬ್ಬಲು ಒಂದು ಸರಳ ಉಪಾಯವಿದೆ.

ನನಗೆ ಪೂರಿ ತುಂಬಾ ಇಷ್ಟ. ಆದರೆ ಎಣ್ಣೆಯ ಕಾರಣದಿಂದಾಗಿ ತಿನ್ನಲಾರೆ ಎನ್ನುವುದು ಅನೇಕರ ಮಾತು. ಹಾಗಾಗಿ, ಅವರು ಹೋಟೆಲ್‌-ರೆಸ್ಟೋರೆಂಟ್‌ಗಳಲ್ಲಿ ಪೂರಿಯನ್ನು ಆರ್ಡರ್ ಮಾಡಲು ಇಷ್ಟಪಡುವುದಿಲ್ಲ. ಅಲ್ಲಿ ಹುರಿಯುವ ಎಣ್ಣೆಯನ್ನು ಮತ್ತೆ ಮತ್ತೆ ಬಳಕೆ ಮಾಡುತ್ತಾರೆ ಎಂಬುದೇ ಇದಕ್ಕೆ ಕಾರಣ.

ಮೃದುವಾದ ಪೂರಿಗಳು ಆಹಾರಪ್ರಿಯರನ್ನು ಆಕರ್ಷಿಸುತ್ತವೆ. ಅವರಿಗೆ ಎಣ್ಣೆಯ ಭಯವಿದ್ದರೂ ಅವರು ಸೇವನೆ ಮಾಡುತ್ತಾರೆ. ಮಾಂಸಪ್ರಿಯರು ಭಾನುವಾರ ಅಥವಾ ರಜಾದಿನಗಳಲ್ಲಿ ಪೂರಿಗಳನ್ನು ಮಾಡಿ ಮಟನ್ ಇಲ್ಲವೇ ಚಿಕನ್ ಶೇರ್ವಾ ಜೊತೆಗೆ ತಿನ್ನುತ್ತಾರೆ. ಪೂರಿಗಳು ಎಣ್ಣೆ ಹೀರಿಕೊಳ್ಳುವುದನ್ನು ತಡೆಯಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಿದರೆ ಸಾಕು.

ಪೂರಿಗೆ ಅಗತ್ಯವಿರುವ ಪದಾರ್ಥಗಳೇನು?

  • ಗೋಧಿ ಹಿಟ್ಟು - 2 ಕಪ್
  • ಉಪ್ಪಿಟ್ಟು ರವೆ - 3 ಟೀಸ್ಪೂನ್
  • ಸಕ್ಕರೆ - 1 ಟೀಸ್ಪೂನ್
  • ಉಪ್ಪು - ರುಚಿಗೆ ತಕ್ಕಷ್ಟು
  • ಎಣ್ಣೆ - ಸ್ವಲ್ಪ

ಹಿಟ್ಟನ್ನು ಹೀಗೆ ರೆಡಿ ಮಾಡಿ: ಹಿಟ್ಟಿಗೆ ಸ್ವಲ್ಪ ಉಪ್ಪಿಟ್ಟು ರವೆ ಸೇರಿಸುವುದರಿಂದ ಪೂರಿ ಚೆನ್ನಾಗಿ ಉಬ್ಬಿ ಬರುತ್ತವೆ. ಜೊತೆಗೆ ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳದೆ ಗರಿಗರಿಯಾಗಿ ಬರುತ್ತವೆ. ಅಷ್ಟೇ ಅಲ್ಲ, ಪಫ್ಡ್ ಪೂರಿಗಳು ದೀರ್ಘಕಾಲ ಹಾಗೆಯೇ ಇರುತ್ತವೆ.

PURI FOOD  HOW TO MAKE PURIS  BREAKFAST RECIPE  PURI MAKING TRICKS AND TIPS
ಸೂಪರ್​ ಟೇಸ್ಟಿ ಪೂರಿ (ETV Bharat)

ಪೂರಿ ತಯಾರಿಸುವ ವಿಧಾನ ಹೇಗೆ?

  • ಒಂದು ದೊಡ್ಡ ಬಟ್ಟಲಿನಲ್ಲಿ 2 ಕಪ್ ಗೋಧಿ ಹಿಟ್ಟು, 3 ಚಮಚ ಉಪ್ಪಿಟ್ಟು ರವೆ, 1 ಟೀಸ್ಪೂನ್​ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ಎಣ್ಣೆ ಮಿಶ್ರಣ ಮಾಡಿ. (ನೀವು ಅದೇ ಅಳತೆಗಳೊಂದಿಗೆ ಹೆಚ್ಚುವರಿ ಪ್ರಮಾಣದಲ್ಲಿ ಬಳಕೆ ಮಾಡಬಹುದು). ಹಿಟ್ಟಿನ ಮಿಶ್ರಣಕ್ಕೆ ಉಗುರು ಬೆಚ್ಚಗಿನ ನೀರನ್ನು ಸೇರಿಸಿ ಹಾಗೂ ಚೆನ್ನಾಗಿ ಮಿಶ್ರಣ ಮಾಡಬೇಕಾಗತ್ತದೆ.
  • ಒಮ್ಮೆಲೇ ಹೆಚ್ಚು ನೀರು ಸೇರಿಸುವ ಬದಲು ಸ್ವಲ್ಪ ಸ್ವಲ್ಪವೇ ನೀರು ಸೇರಿಸಿದರೆ ಹಿಟ್ಟು ಕೂಡ ಸರಿಯಾಗಿ ಬರುತ್ತದೆ. ತಯಾರಾದ ಪೂರಿ ಹಿಟ್ಟನ್ನು ಅರ್ಧ ಗಂಟೆ ನೆನೆಸಿಡಬೇಕಾಗುತ್ತದೆ.
  • ನೆನೆಸಿದ ಬಳಿಕ ರವೆ ಸೇರಿಸುವುದರಿಂದ ಹಿಟ್ಟು ಗಟ್ಟಿಯಾಗುತ್ತದೆ. ಅದಕ್ಕಾಗಿಯೇ ನೀವು ಅರ್ಧ ಗಂಟೆಯ ಬಳಿಕ ಇನ್ನೂ ಎರಡು ನಿಮಿಷಗಳ ಕಾಲ ಅದನ್ನು ಚೆನ್ನಾಗಿ ಮಿಶ್ರಣ ಮಾಡಿಬೇಕಾಗುತ್ತದೆ.
  • ಪೂರಿಗಳಿಗೆ ಬೇಕಾದ ಗಾತ್ರದ ಉಂಡೆಗಳನ್ನು ಮಾಡಿ ಪಕ್ಕಕ್ಕಿಡಿ. ಈ ಉಂಡೆಗಳ ಮೇಲೆ ಒಣ ಹಿಟ್ಟು ಸಿಂಪಡಿಸಿ ಹುರಿಯಿರಿ.
  • ಪೂರಿಗಳನ್ನು ತೆಳುವಾಗಿ ರೆಡಿ ಮಾಡಿದರೆ, ಅವುಗಳು ಉಬ್ಬುವ ಸಾಧ್ಯತೆ ಕಡಿಮೆ. ಅದಕ್ಕಾಗಿಯೇ, ಪೂರಿಯನ್ನು ಉಬ್ಬುವಂತೆ ಮಾಡಲು ನೀವು ಅದನ್ನು ಸ್ವಲ್ಪ ದಪ್ಪವಾಗಿ ಸಿದ್ಧಪಡಿಸಬೇಕಾಗುತ್ತದೆ. ಆದ್ರೆ ಹೆಚ್ಚು ದಪ್ಪ ಮಾಡಬಾರದು. ಆಗ ಮಾತ್ರ ಪೂರಿಗಳು ಉಬ್ಬುತ್ತವೆ ಹಾಗೂ ಗರಿಗರಿಯಾಗಿ ಬರುತ್ತವೆ.

ಪೂರಿ ಬೇಯಿಸುವಾಗ ಏನು ಮಾಡಬೇಕು ಗೊತ್ತಾ?:

  • ಕಡಾಯಿಯಲ್ಲಿ ಪೂರಿಗಳು ಮುಳುಗುವಷ್ಟು ಎಣ್ಣೆ ಸುರಿಯಿರಿ. ಉರಿ ಹೆಚ್ಚಾಗಿರಬೇಕಾಗುತ್ತದೆ. ಜ್ವಾಲೆ ಕಡಿಮೆಯಿದ್ದರೆ ಪೂರಿಗಳು ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುತ್ತವೆ ಹಾಗೂ ಉಬ್ಬಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಅದಕ್ಕಾಗಿಯೇ ಪೂರಿಗಳನ್ನು ಬೇಯಿಸುವಾಗ ಉರಿಯನ್ನು ಹೆಚ್ಚು ಇಡುವುದನ್ನು ಮರೆಯಬಾರದು.
  • ಹುರಿದ ಪೂರಿಗಳನ್ನು ಒಂದೊಂದಾಗಿ ಎಣ್ಣೆಯಲ್ಲಿ ಅದ್ದಿ. ಎಣ್ಣೆಯಲ್ಲಿ ತೇಲದಂತೆ ತಡೆಯಲು ಪೂರಿಯನ್ನು ಫ್ರೈ ಮಾಡುವ ಚಮಚದಿಂದ ನಿಧಾನವಾಗಿ ಒತ್ತಬೇಕಾಗುತ್ತದೆ. ಎರಡನೇ ಬದಿ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಹುರಿದರೆ ಸಾಕು.
  • ಇದೀಗ ಅಷ್ಟೇ ರುಚಿಯಾದ ಪಫ್ಡ್ ಪೂರಿಗಳನ್ನು ಸವಿಯಲು ಸಿದ್ಧವಾಗುತ್ತವೆ. ಇವುಗಳನ್ನು ಆಲೂ ಬಾಜಿ ಹಾಗೂ ಕೊಬ್ಬರಿ ಚಟ್ನಿಯ ಜೊತೆಗೆ ಸೇವಿಸಿದರೆ ಸಖತ್​ ರುಚಿಯಾಗಿರುತ್ತದೆ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.