ವಿದ್ಯುತ್ ಬೆಳಕಿನಲ್ಲಿ ಝಗಮಗಿಸುತ್ತಿರುವ ಸಾಂಸ್ಕೃತಿಕ ನಗರಿ: ವಿಡಿಯೋ
🎬 Watch Now: Feature Video
ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಾಡಹಬ್ಬ ದಸರಾ ಕಳೆಗಟ್ಟಿದೆ. ಈ ಹಿನ್ನೆಲೆ ನಗರದ ಪ್ರಮುಖ ಪಾರಂಪರಿಕ ಕಟ್ಟಡಗಳು, ರಸ್ತೆಗಳು, ಸರ್ಕಲ್ಗಳು ಹಾಗೂ ವಿಶ್ವವಿಖ್ಯಾತ ಅಂಬಾ ವಿಲಾಸ ಅರಮನೆಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇಂದಿನಿಂದ 9 ದಿನಗಳ ಕಾಲ ವಿಶೇಷ ದೀಪಾಲಂಕಾರಗಳಿಂದ ಸಾಂಸ್ಕೃತಿಕ ನಗರಿ ಕಂಗೊಳಿಸಲಿದ್ದು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ರಸ್ತೆಗಳು, ಪ್ರಮುಖ 96 ಸರ್ಕಲ್ಗಳು, 28 ವಿವಿಧ ಪ್ರತಿಕೃತಿ, ಪಾರಂಪರಿಕ ಕಟ್ಟಡಗಳು ಸೇರಿದಂತೆ ಏರ್ಪೋರ್ಟ್ನಿಂದ 124 ಕಿ.ಮೀ ದೂರದವರೆಗೆ ದೀಪಾಲಂಕಾರ ಮಾಡಲಾಗಿದೆ.
Last Updated : Sep 26, 2022, 12:44 PM IST