ಯಾದಗಿರಿ: ಹಳ್ಳದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ- ವಿಡಿಯೋ - CROCODILE SPOTTED
🎬 Watch Now: Feature Video
Published : Nov 24, 2024, 8:16 AM IST
ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಹುಲಕಲ್ (ಕೆ) ಗ್ರಾಮದ ಹಳ್ಳದಲ್ಲಿ ಶನಿವಾರ ಸಂಜೆ ಬೃಹತ್ ಮೊಸಳೆ ಪ್ರತ್ಯಕ್ಷವಾಯಿತು. ಮೊಸಳೆಯನ್ನು ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸೇರಿ ಸುರಕ್ಷಿತವಾಗಿ ಸೆರೆಹಿಡಿದರು.
ಮೊಸಳೆಗೆ ಹಗ್ಗದ ಬಲೆ ಹಾಕಿ ಸೆರೆ ಹಿಡಿದ ಬಳಿಕ ದಾಳಿ ಮಾಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಟೇಪ್ ಸುತ್ತಲಾಯಿತು. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಟಾಟಾ ಎಸಿ ವಾಹನದಲ್ಲಿ ತೆಗೆದುಕೊಂಡು ಹೋಗಿ, ನಾರಾಯಣಪುರ ಜಲಾಶಯದಲ್ಲಿ ಬಿಟ್ಟರು ಎಂದು ಉಪ ವಲಯ ಅರಣ್ಯ ಅಧಿಕಾರಿ ಕಾಶಪ್ಪ ಮಾಹಿತಿ ನೀಡಿದರು.
ಪ್ರತೀ ದಿನ ಗ್ರಾಮದ ಮಹಿಳೆಯರು ಬಟ್ಟೆಗಳನ್ನು ಇದೇ ಹಳ್ಳದಲ್ಲಿ ತೊಳೆಯುತ್ತಿದ್ದರು. ಯಾರಿಗೂ ಮೊಸಳೆ ಗೋಚರಿಸಿರಲಿಲ್ಲ. ಜನ, ಜಾನುವಾರುಗಳಿಗೂ ಪ್ರಾಣಹಾನಿ ಆಗಿರಲಿಲ್ಲ.
ಮೊಸಳೆ ಸೆರೆ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದ ಗ್ರಾಮಸ್ಥರು ಹಾಗೂ ಪೊಲೀಸರ ಸಹಕಾರಕ್ಕೆ ಅರಣ್ಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ತಡರಾತ್ರಿ ಹಳ್ಳದಿಂದ ಎರಡು ಮರಿ ಮೊಸಳೆಗಳ ಸೆರೆ
ಇದನ್ನೂ ಓದಿ: Watch.. ಹುಲಿರಾಯ ಬಂದ ದಾರಿ ಬಿಡಿ: ಸಫಾರಿ ವಾಹನದ ಮುಂದೆಯೇ ಹುಲಿ ಗಾಂಭೀರ್ಯದ ನಡಿಗೆ