IPL Mega Auction 2025: ಅಬುಧಾಬಿಯ ಜೆಡ್ಡಾದಲ್ಲಿ ಇಂದು ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿ ಒಟ್ಟು ಒಟ್ಟು 1577 ಆಟಗಾರರು ಹರಾಜಿಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. aಂತಿಮಾವಗಿ 577 ಆಟಗಾರರ ಹೆಸರುಗಳು ಶಾರ್ಟ್ಲಿಸ್ಟ್ ಮಾಡಲಾಗಿದೆ. ಇವರಲ್ಲಿ 367 ಭಾರತೀಯರು ಮತ್ತು 210 ವಿದೇಶಿ ಆಟಗಾರರು ಸೇರಿದ್ದಾರೆ. ಈ ಬಾರಿ ಐಪಿಎಲ್ನಲ್ಲಿ ಹೆಚ್ಚಿನ ಸ್ಟಾರ್ ಆಟಗರಾರರು ಕಣದಲ್ಲಿದ್ದು ಭಾರೀ ನಿರೀಕ್ಷೆಗಳೊಂದಿಗೆ ಅದೃಷ್ಟದ ಪರೀಕ್ಷೆಗಿಳಿದಿದ್ದಾರೆ. ಈಗಾಗಲೇ ನಡೆಯುತ್ತಿರುವ ಹರಾಜಿನಲ್ಲಿ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಿದ್ದಾರೆ.
8 ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡಿದ್ದ ರಿಷಭ್ ಪಂತ್ ಈ ಬಾರಿ ಹೊಸ ಫ್ರಾಂಚೈಸಿಗಾಗಿ ಮೆಗಾ ಹರಾಜಿಗೆ ಎಂಟ್ರಿ ಕೊಟ್ಟಿದ್ದರು. ನಿರೀಕ್ಷೆಯಂತೆ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಜಿದ್ದಾಜಿದ್ದಿನ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಬರೋಬ್ಬರಿ 27 ಕೋಟಿಗೆ ಮಣೆಹಾಕಿ ತಂಡಕ್ಕೆ ಸೇರಿಸಿಕೊಂಡಿತು. ಇದರೊಂದಿಗೆ ಮೊದಲ ದಿನದ ಹರಾಜಿನಲ್ಲಿ ಅತಿ ಹೆಚ್ಚು ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಶ್ರೇಯಸ್ ಅಯ್ಯರ್ ಕೂಡ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದ್ದರು. ಅವರು ಒಟ್ಟು 26.75 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡ ಖರೀದಿಸಿದೆ. ಏತನ್ಮದೇ ಕನ್ನಡಿಗ ಆಟಗಾರನೊಬ್ಬ ಅನ್ಸೋಲ್ಡ್ ಆಗಿದ್ದಾರೆ.
ಹೌದು, ಮೊದಲ ದಿನ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಕನ್ನಡಿಗೆ ದೇವದತ್ ಪಡಕ್ಕಲ್ ಅವರನ್ನು ಯಾವುದೇ ತಂಡಗಳು ಹರಾಜಿನಲ್ಲಿ ಖರೀದಿಸಲು ಮುಂದೆ ಬಾರಲಿಲ್ಲ. ಇದರಿಂದಾಗಿ ಅವರು ಮೊದಲ ದಿನ ಅನ್ಸೋಲ್ಡ್ ಆಗಿದ್ದಾರೆ. ಪಡಿಕ್ಕಲ್ ಮೂಲ ಬೆಲೆ 2 ಕೋಟಿ ರೂ. ಆಗಿದ್ದರು ಯಾವುದೇ ಫ್ರಾಂಚೈಸಿಗಳು ಖರೀದಿಗೆ ಮುಂದೆ ಬರಲಿಲ್ಲ. ಕಳೆದ ಋತುವಿನಲ್ಲಿ ಪಡಿಕ್ಕಲ್ LSG ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ಅವರು 7 ಪಂದ್ಯಗಳಲ್ಲಿ ಕೇವಲ 38 ರನ್ ಗಳಿಸಿದ್ದರು. ಕಳೆದ ಸೀಸನ್‌ನಲ್ಲಿ ಲಕ್ನೋ 7.75 ಕೋಟಿ ರೂಪಾಯಿ ನೀಡಿ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಕೊಂಡಿ ತ್ತು.
ಇದರೊಂದಿಗೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಕೂಡ ಅನ್ಸೋಲ್ಡ್ ಆಗಿದ್ದಾರೆ. ಇದರೊಂದಿಗೆ ಮೊದಲ ದಿನ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಇಬ್ಬರು ಅನ್ಸೋಲ್ಡ್ ಆಗಿದ್ದಾರೆ.
ಐಪಿಎಲ್ ದಾಖಲೆ: ಇದುವರೆಗೂ 64 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 1559 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ 9 ಅರ್ಧಶತಕ ಸೇರಿವೆ. ಇವರು ಹೈಸ್ಕೋರ್ 101 ರನ್ ಆಗಿದೆ.
ಇದನ್ನೂ ಓದಿ: ಮತ್ತೆ ಹುಸಿಯಾಯ್ತು RCB ಅಭಿಮಾನಿಗಳ ನಿರೀಕ್ಷೆ: ಡೆಲ್ಲಿ ಸೇರಿದ ಕನ್ನಡಿಗ KL ರಾಹುಲ್