ಕೆಜಿಎಫ್ ಈಗ ಸಿನಿಮಾ ಮಂದಿಗೂ 'ಬಂಗಾರ'ದ ತಾಣ - people
🎬 Watch Now: Feature Video
ದೇಶಕ್ಕೆ ಚಿನ್ನವನ್ನೇ ಬಗೆದುಕೊಟ್ಟಿದ್ದ ಕೋಲಾರ ಇದೀಗ ಸಿನಿಮಾ ಮಂದಿಗೂ ಬಂಗಾರದಂತೆ. ಇಲ್ಲಿರುವುದು ಬರೀ ದಿಬ್ಬಗಳಲ್ಲ, ಸೈನೈಡ್ ದಿಬ್ಬಗಳು. ಇವು ನೈಸರ್ಗಿಕವಾಗಿ ರೂಪಗೊಂಡಿಲ್ಲ. ಬಂಗಾರವನ್ನೇ ಹುದುಗಿಸಿಕೊಂಡಿದ್ದ ಚಿನ್ನದ ಗಣಿ ಕೋಲಾರದ ಕೆಜಿಎಫ್ ಪ್ರದೇಶವಿದು.ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಸಿನಿಮಾ ಚಿತ್ರೀಕರಣಕ್ಕೆ ಇದೊಂದ್ರೀತಿ ಹಾಟ್‌ಸ್ಪಾಟ್. ಸೈನೈಡ್ ಗುಡ್ಡಗಳು ಸಿನಿಮಾ ಸೆಟ್ ಹಾಕಲು ಹೇಳಿ ಮಾಡಿಸಿದಂತಿವೆ. ಹಾರರ್, ಫೈಟಿಂಗ್ ಜತೆ ಸಾಂಗ್ ಶೂಟಿಂಗ್‌ಗೆ ಇದಕ್ಕಿಂತ ಒಳ್ಳೇ ಲೊಕೇಷನ್ ಇನ್ನೊಂದಿಲ್ಲ.ಹಾಗಾಗಿ ಕೆಜಿಎಫ್ ಸಿನಿಮಾ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿದೆ.