watch: ಎಡ ಬದಿಗೆ ಎದುರಾದ ಸರ್ಕಾರಿ ಬಸ್ಸಿಗೆ ಅಡ್ಡ ನಿಂತು ಪಕ್ಕಕ್ಕೆ ಸರಿಸಿದ ಗಟ್ಟಿಗಿತ್ತಿ! - ಸರ್ಕಾರಿ ಬಸ್ ಡ್ರೈವರ್
🎬 Watch Now: Feature Video

ಸರ್ಕಾರಿ ಬಸ್ ಚಾಲಕರು ಮೇಲಿಂದ ಮೇಲೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ವಿಚಾರ ಸುದ್ದಿಗೆ ಬರ್ತಾನೆ ಇರುತ್ತದೆ. ಅದೇ ರೀತಿ ರಸ್ತೆ ನಿಯಮ ಉಲ್ಲಂಘನೆ ಮಾಡಿ ಬಸ್ ಚಲಾಯಿಸುತ್ತಿದ್ದ ಕೇರಳ ಸರ್ಕಾರಿ ಬಸ್ ಡ್ರೈವರ್ನೋರ್ವನಿಗೆ ಸ್ಕೂಟರ್ ಮೇಲೆ ಪ್ರಯಾಣಿಸುತ್ತಿದ್ದ ಯುವತಿಯೋರ್ವಳು ಸರಿಯಾಗಿ ಪಾಠ ಕಲಿಸಿದ್ದಾರೆ. ರಾಂಗ್ ರೂಟ್ನಲ್ಲಿ ಬರುತ್ತಿದ್ದ ಬಸ್ ಅಡಗಟ್ಟಿರುವ ಮಹಿಳೆ ಸರಿಯಾದ ರಸ್ತೆಯಲ್ಲಿ ಚಲಾವಣೆ ಮಾಡುವಂತೆ ಹೇಳಿ ಬಸ್ ಅಡ್ಡಗಟ್ಟಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವತಿ ಕೆಲಸಕ್ಕೆ ಎಲ್ಲರೂ ಶಹಬ್ಬಾಸ್ಗಿರಿ ಹೇಳಿದ್ದಾರೆ.