ಪ್ರಾಣಕ್ಕೆ ಕುತ್ತು ತಂದ ಸ್ಟಂಟ್.. ಸಮ್ಮರ್ಸಾಲ್ಟ್ ಮಾಡಿ ಜೀವ ಕಳೆದುಕೊಂಡ ಕಬಡ್ಡಿ ಪಟು - ಸಮ್ಮರ್ಸಾಲ್ಟ್ ಮಾಡಿ ಜೀವ ಕಳೆದುಕೊಂಡ ಕಬಡ್ಡಿ ಪಟು
🎬 Watch Now: Feature Video
ತಿರುವಣ್ಣಾಮಲೈ(ತಮಿಳುನಾಡು): ತಿರುವಣ್ಣಾಮಲೈ ಮಾರಿಯಮ್ಮನ್ ದೇವಸ್ಥಾನದ ಉತ್ಸವ ಪ್ರಯುಕ್ತ ಕಳತುಮೇಟು ಬೀದಿಯಲ್ಲಿ ಕಬಡ್ಡಿ ಪಂದ್ಯಾವಳಿ ನಡೆಸುವುದು ವಾಡಿಕೆ. ಕಬಡ್ಡಿ ಪಂದ್ಯಾಟದ ಅಭ್ಯಾಸದ ವೇಳೆ ಆಟಗಾರ ವಿನೋದ್ ಕುಮಾರ್ (34) ಎಂಬವರು ಸಮ್ಮರ್ಸಾಲ್ಟ್ ಸ್ಟಂಟ್ ಮಾಡಿದ್ದು, ಅವರ ತಲೆಗೆ ಭಾರಿ ಗಾಯವಾಗಿದೆ. ಸ್ಥಳದಲ್ಲಿ ಪ್ರಜ್ಞೆ ತಪ್ಪಿದ್ದ ಅವರನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಸೋಮವಾರ ರಾತ್ರಿ ಕಬಡ್ಡಿ ಆಟಗಾರ ವಿನೋದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
Last Updated : Aug 16, 2022, 4:01 PM IST