ಹೊಸಪೇಟೆ: ಸೀತಾರಾಮ್ ತಾಂಡಾದಲ್ಲಿ ಗಾಳಿ ಅಬ್ಬರ, ಧರೆಗುರುಳಿದ ವಿದ್ಯುತ್ ಕಂಬಗಳು - ಹೊಸಪೇಟೆಯಲ್ಲಿ ಗಾಳಿ ಅಬ್ಬರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15501394-thumbnail-3x2-news.jpg)
ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ್ ತಾಂಡಾ ಪ್ರದೇಶದಲ್ಲಿ ಬೀಸಿದ ಭಾರಿ ಗಾಳಿಗೆ ಹಲವು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡು ಆತಂಕ ಸೃಷ್ಟಿಸಿತ್ತು. ಮಂಗಳವಾರ ತಡರಾತ್ರಿ ಗಾಳಿ ಅಬ್ಬರದಿಂದ ಅನಾಹುತ ಸಂಭವಿಸಿದೆ. ಗ್ರಾಮದ ಶಾಲೆಯ ಹೊರಭಾಗದ ಶೆಡ್ನ ಶೀಟ್ಗಳು ಕೂಡ ಗಾಳಿಯಿಂದ ಹಾರಿಬಿದ್ದಿವೆ. ಟ್ರಾನ್ಸ್ಫಾರ್ಮರ್ ಸ್ಫೋಟದಿಂದ ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗಿದೆ. ಕೆಲ ಸಮಯ ಬೀಸಿದ ಭಾರಿ ಗಾಳಿಗೆ ಗ್ರಾಮಸ್ಥರು ಬೆಚ್ಚಿ ಬೀಳುವಂತಾಗಿದೆ.