ಚಿಕ್ಕಬಳ್ಳಾಪುರದಲ್ಲಿ ಭಾರಿ ಮಳೆ.. ಕೇತೇನಹಳ್ಳಿ ಫಾಲ್ಸ್ ಬಳಿ ಹೆಚ್ಚಿದ ಜನಸಾಂದ್ರತೆ - ketenahalli falls
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16306923-thumbnail-3x2-sanju.jpg)
ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗುತ್ತಿವೆ. ಮತ್ತೊಂದೆಡೆ ತಾಲೂಕಿನ ನಂದಿ ಹೋಬಳಿಯ ಕೇತೇನಹಳ್ಳಿ ಜಲಪಾತ ತುಂಬಿ ಹರಿಯುತ್ತಿದ್ದು, ಜಲಪಾತದ ದೃಶ್ಯಗಳನ್ನು ನೋಡಲು ಫಾಲ್ಸ್ ಬಳಿ ಜನಸಾಗರವೇ ಹರಿದು ಬರುತ್ತಿದೆ. ಕಳೆದ 10 ದಿನಗಳಿಂದಲೂ ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.