ಆನೆ ಚೆಕ್ ಪೋಸ್ಟ್.. ತಮಿಳುನಾಡು- ಕರ್ನಾಟಕ ಗಡಿ ಬಂದ್ ಮಾಡಿದ ಗಜಪಡೆ - ಈಟಿವಿ ಭಾರತ ಕನ್ನಡ
🎬 Watch Now: Feature Video
ಚಾಮರಾಜನಗರ: ವಾಹನಗಳನ್ನು ಚೆಕ್ ಪೋಸ್ಟ್ ಸಿಬ್ಬಂದಿ ತಡೆಗಟ್ಟುವುದು ಸಾಮಾನ್ಯ. ಆದರೆ, ತಮಿಳುನಾಡು ಮತ್ತು ಕರ್ನಾಟಕ ಗಡಿಯಾದ ಚಾಮರಾಜನಗರ ಗಡಿಭಾಗವಾದ ಆಸನೂರಿನಲ್ಲಿ ಗಜಪಡೆ ಇಂದು ಗಡಿಯನ್ನು ಬಂದ್ ಮಾಡಿದೆ. 8-10 ಆನೆಗಳ ಹಿಂಡು ಚೆಕ್ ಪೋಸ್ಟ್ ಬಳಿ ಬೀಡುಬಿಟ್ಟು ಅತ್ತಿತ್ತ ಜರುಗದ ಹಿನ್ನೆಲೆ 1 ತಾಸು ಕಾಲ ಎರಡು ಬದಿ ವಾಹನ ಸವಾರರು ಮೂಕಪ್ರೇಕ್ಷಕರಾಗಿ ನಿಲ್ಲಬೇಕಾಯಿತು. ಗಂಟೆಯ ನಂತರ ಆನೆಗಳು ಚೆಕ್ ಪೋಸ್ಟ್ನ್ನು ಬಿಟ್ಟು ಹೋದವು, ಬಳಿಕ ಸಂಚಾರ ಆರಂಭವಾಗಿದೆ. ಕಬ್ಬಿನ ಲಾರಿಗಳನ್ನು ತಡೆಯುತ್ತಿದ್ದ ಆನೆ ಹಿಂಡು ಇಂದು ಚೆಕ್ ಪೋಸ್ಟಿಗೆ ಎಂಟ್ರಿ ಕೊಟ್ಟು ವಾಹನ ಸವಾರರನ್ನು ಕಂಗೆಡೆಸಿದೆ.