'ಪ್ರಧಾನಿ ಮೋದಿ ಬದಲಾವಣೆಯ ಹರಿಕಾರ ... ಪ್ರಾಮಾಣಿಕವಾಗಿ ಇಷ್ಟಪಡುತ್ತೇನೆ': ಜೈಶಂಕರ್ - ಜೈಶಂಕರ್
🎬 Watch Now: Feature Video

ನ್ಯೂಯಾರ್ಕ್(ಅಮೆರಿಕ): ಕಳೆದ ಎಂಟು ವರ್ಷಗಳಲ್ಲಿ ಭಾರತ-ಅಮೆರಿಕ ಸಂಬಂಧವನ್ನು ಪರಿವರ್ತಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಾಯೋಗಿಕ ಮನೋಭಾವ ಪ್ರಮುಖ ಪಾತ್ರ ವಹಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಹೇಳಿದರು. ನ್ಯೂಯಾರ್ಕ್‌ನಲ್ಲಿ 'ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ' ಪುಸ್ತಕ ಚರ್ಚೆಯಲ್ಲಿ ಮಾತನಾಡಿದ ಅವರು, ಮೋದಿ ಭಾರತದ ಪ್ರಧಾನಿಯಾಗಿರುವುದರಿಂದ ದೇಶ ಎಷ್ಟು ಬದಲಾಗಿದೆ ಎಂಬುದನ್ನು ತೋರಿಸುತ್ತದೆ. ದೇಶವು ಈಗ ಅಮೆರಿಕದೊಂದಿಗೆ ವಿಭಿನ್ನ ಸಂಬಂಧವನ್ನು ರೂಪಿಸುವ ಊಹೆಗಳನ್ನು ಮೀರಿದೆ ಎಂದರು. ನಾನು ಪ್ರಾಮಾಣಿಕವಾಗಿ ಅವರನ್ನ ಇಷ್ಟಪಟ್ಟಿದ್ದೇನೆ ಎಂದು ಹೇಳಿ ಅವರೊಂದಿಗಿನ ಮೊದಲ ಭೇಟಿಯ ಮೆಲಕು ಹಾಕಿದರು.
Last Updated : Sep 23, 2022, 11:02 AM IST