ಬೇಲಿಯೇ ಎದ್ದು ಹೊಲ ಮೇಯ್ದ ಕಥೆ.. ₹22.53 ಲಕ್ಷದೊಂದಿಗೆ ಪರಾರಿಯಾದ ಬ್ಯಾಂಕ್ ಕ್ಯಾಶಿಯರ್! - ಅಪಾರ ಹಣದೊಂದಿಗೆ ಕ್ಯಾಶಿಯರ್ ಪರಾರಿ
🎬 Watch Now: Feature Video

ಹೈದರಾಬಾದ್ : ಇಲ್ಲಿನ ವನಸ್ಥಲಿಪುರಂನ ಸಾಹೇಬ್ ನಗರ ಶಾಖೆಯ ಬ್ಯಾಂಕ್ ಆಫ್ ಬರೋಡಾದಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡ್ತಿದ್ದ ಪ್ರವೀಣ್ ಬರೋಬ್ಬರಿ 22.53 ಲಕ್ಷ ರೂಪಾಯಿ ಜೊತೆ ಪರಾರಿಯಾಗಿದ್ದಾನೆ. ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಅನಾರೋಗ್ಯದ ಕಾರಣ ಔಷಧಿ ತೆಗೆದುಕೊಂಡು ಬರುವುದಾಗಿ ಬ್ಯಾಂಕ್ ಅಧಿಕಾರಿಗಳಿಂದ ಅನುಮತಿ ಪಡೆದ ಪ್ರವೀಣ್, ಬಳಿಕ ನಗದಿನೊಂದಿಗೆ ಪರಾರಿಯಾಗಿದ್ದಾನೆ. ಸಂಜೆಯವರೆಗೂ ವಾಪಸ್ ಬಾರದ ಕಾರಣ ಬ್ಯಾಂಕ್ ಅಧಿಕಾರಿಗಳು ಹಣದ ಲೆಕ್ಕಾಚಾರ ನಡೆಸಿದಾಗ, ಈ ಪ್ರಕರಣ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ವನಸ್ಥಲಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರವೀಣ್ ಆನ್ಲೈನ್ ಗೇಮ್ ಚಟಕ್ಕೆ ಬಿದ್ದು ಅಪಾರ ಹಣ ಕಳೆದುಕೊಂಡಿದ್ದರಿಂದ ಈ ನಗದು ಕದ್ದಿರಬಹುದು ಎನ್ನಲಾಗ್ತಿದೆ.