ಕಾರ್ - ಟ್ರಕ್ ನಡುವಿನ ಭೀಕರ ಅಪಘಾತ, ನುಜ್ಜು ಗುಜ್ಜಾದ ಕಾರು..ಮೂವರ ಸಾವು - ಉತ್ತರ ಪ್ರದೇಶ ಕಾರ್-ಟ್ರಕ್ ಅಪಘಾತ
🎬 Watch Now: Feature Video

ಉತ್ತರ ಪ್ರದೇಶ: ವೇಗವಾಗಿ ಬಂದ ಕಾರೊಂದು ಎದುರಿಗೆ ಬರುತ್ತಿದ್ದ ಟ್ರಕ್ಕಿಗೆ ಡಿಕ್ಕಿ ಹೊಡೆದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಇಲ್ಲಿನ ಆಗ್ರಾದ ಫತೇಹಬಾದ್ ಎಂಬಲ್ಲಿ ಜರುಗಿದೆ. ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಡಿಕ್ಕಿಯ ರಭಸಕ್ಕೆ ಕಾರ್ ನುಜ್ಜು ಗುಜ್ಜಾಗಿದೆ. ಸಮೀಪದಲ್ಲಿಯೇ ಸಾಗುತ್ತಿದ್ದ ಮತ್ತೊಬ್ಬ ಬೈಸಿಕಲ್ ಸವಾರನಿಗೂ ಗಂಭೀರ ಗಾಯಗಳಾಗಿವೆ. ಪೊಲೀಸರು ಕಾರ್ ಮತ್ತು ಟ್ರಕ್ ಅನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.