ಆಶಾ ಪರೇಖ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ.. ಸಂಭ್ರಮ ಹಂಚಿಕೊಂಡ ನಟಿ - ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
🎬 Watch Now: Feature Video
ಹಿರಿಯ ನಟಿ ಆಶಾ ಪರೇಖ್ ಅವರಿಗೆ ಶುಕ್ರವಾರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನವದೆಹಲಿಯಲ್ಲಿ ನಡೆದ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಅವರ 80ನೇ ಹುಟ್ಟುಹಬ್ಬದ ಒಂದು ದಿನ ಮೊದಲು ಈ ಮನ್ನಣೆ ಬಂದಿದೆ. ಪ್ರಶಸ್ತಿ ಸ್ವೀಕರಿಸಿ ಸಂಭ್ರಮ ಹಂಚಿಕೊಂಡ ನಟಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿರುವುದು ದೊಡ್ಡ ಗೌರವವಾಗಿದೆ ಎಂದರು. 1952 ರಲ್ಲಿ ತಮ್ಮ 16 ನೇ ವಯಸ್ಸಿನಲ್ಲಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಆಶಾ ಪರೇಖ್, ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಹೊಂದಿದ್ದಾರೆ. 'ದಿಲ್ ದೇಕೆ ದೇಖೋ' ಇವರು ನಾಯಕಿಯಾಗಿ ನಟಿಸಿದ್ದ ಮೊದಲ ಸಿನಿಮಾ. 'ಆಂದೋಲನ್' ಸಿನಿಮಾದಲ್ಲಿ ಕೊನೆಯ ಬಾರಿಗೆ ನಟಿಸಿ, ಅಲ್ಲಿಂದ ಸಿನಿಮಾ ರಂಗದಿಂದಲೇ ದೂರವಾದವರು. ಭಾರತದ ಅತ್ಯುನ್ನತ ಸಿನಿಮಾ ಪ್ರಶಸ್ತಿಯಾಗಿರುವ ಈ ಗೌರವವು ಕನ್ನಡದ ಡಾ.ರಾಜ್ ಕುಮಾರ್ ಅವರಿಗೂ ದೊರೆತಿದೆ. ಅಲ್ಲದೇ, ವಿನೋದ್ ಖನ್ನಾ, ಲತಾ ಮಂಗೇಶ್ಕರ್, ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ದಿಗ್ಗಜರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಕಳೆದ ಬಾರಿ ಈ ಗೌರವವು ರಜನಿಕಾಂತ್ ಅವರಿಗೆ ಸಂದಿತ್ತು.