ವಿವಾಹೇತರ ಸಂಬಂಧ.. ಕರೆ ಸ್ವೀಕರಿಸಿಲ್ಲವೆಂದು ಮಹಿಳೆಯ ಕತ್ತು ಕೊಯ್ದ ಕೀಚಕ - ನೆಲ್ಲೂರು ಮಹಿಳೆ ಕತ್ತು ಕೊಯ್ದು ಹಲ್ಲೆ ಮಾಡಿದ ಪ್ರಕರಣದ ಸುದ್ದಿ
🎬 Watch Now: Feature Video
ತನ್ನ ಫೋನ್ ಕರೆ ಸ್ವೀಕರಿಸಿಲ್ಲವೆಂದು ಕಿರಾತಕನೋರ್ವ ಮಹಿಳೆಯ ಕತ್ತು ಕೊಯ್ದು ಹಲ್ಲೆ ಮಾಡಿರುವ ಘಟನೆ ನೆಲ್ಲೂರು ಜಿಲ್ಲೆಯ ರೆಬಲ ಗ್ರಾಮದಲ್ಲಿ ನಡೆದಿದೆ. ಕೊವುರು ಮೂಲದ ವೆಂಕಟ್ ಎಂಬ ವ್ಯಕ್ತಿ ಕೃತ್ಯ ಎಸಗಿರುವ ಆರೋಪಿ. ಮೋನಿಕ ಎಂಬವವರು ಹಲ್ಲೆಗೆ ಒಳಗಾದ ಮಹಿಳೆ. ಮೋನಿಕಾ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ವೆಂಕಟ್ ಆ ಮಹಿಳೆಗೆ ನಿರಂತರ ಕರೆ ಮಾಡಿದ್ದಾನೆ. ಆದರೆ ಕರೆಯನ್ನು ಸ್ವೀಕರಿಸದೆ ಆತನನ್ನು ಮಹಿಳೆ ತಿರಸ್ಕರಿಸಿದ ಕಾರಣ, ಕೋಪಗೊಂಡ ವೆಂಕಟ್ ಸ್ನೇಹಿತ ರವಿಯೊಂದಿಗೆ ಮೋನಿಕ ಅವರ ಮನೆಗೆ ತೆರಳಿ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.