ಎರಡು ದಿನ ಪೂರೈಸಿದ ಜಾನಪದ ಜಾತ್ರೆ: ಗಮನ ಸೆಳೆದ ಕಲಾವಿದರ ಸಾಮೂಹಿಕ ನೃತ್ಯ...! - ಕಾರ್ಯಕ್ರಮದಲ್ಲಿ ಕಲಾವಿದರ ಸಾಮೂಹಿಕ ನೃತ್ಯ ಗಮನ
🎬 Watch Now: Feature Video

ಹಾವೇರಿ: ಮಂಗಳವಾರದಿಂದ ಹೊಸಮನಿ ಸಿದ್ದಪ್ಪ ಕ್ರೀಡಾಂಗಣದಲ್ಲಿ ಆರಂಭವಾದ ಜಾನಪದ ಜಾತ್ರೆ ಎರಡು ದಿನ ಪೂರೈಸಿದೆ. ಎರಡನೇಯ ದಿನವಾದ ಬುಧವಾರ ರಾಜ್ಯದ ಕಲಾವಿದರು ತಮ್ಮ ಕಲೆಗಳನ್ನ ಅನಾವರಣಗೊಳಿಸಿದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಕಲಾವಿದರ ಸಾಮೂಹಿಕ ನೃತ್ಯ ಗಮನ ಸೆಳೆಯಿತು. ನಂತರ ನಡೆದ ಭಜನಾ ಕಾರ್ಯಕ್ರಮದಲ್ಲಿ ಬಸವಣ್ಣನವರ ವಚನಗಳು ಪ್ರೇಕ್ಷಕರಿಗೆ ಭಕ್ತಿಸುಧೆ ಉಣಬಡಿಸಿದವು. ಹಾವೇರಿ ಶಾಸಕ ನೆಹರೂ ಓಲೇಕಾರ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಮತ್ತು ಜನಸಾಮಾನ್ಯರು ಕಾರ್ಯಕ್ರಮ ವೀಕ್ಷಿಸಿದರು. ಗುರುವಾರ ಜಾನಪದ ಜಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ.