ತಮಿಳುನಾಡಿನಲ್ಲಿ ಚಲಿಸುತ್ತಿದ್ದ ರಥ ಉರುಳಿ 10 ಭಕ್ತರಿಗೆ ಗಾಯ: ವಿಡಿಯೋ - devotes injured temple chariot overturns
🎬 Watch Now: Feature Video
ತಮಿಳುನಾಡಿನ ಪುದುಕೊಟ್ಟೈನಲ್ಲಿರುವ ಪ್ರಗತಾಂಬಲ್ ದೇವಸ್ಥಾನದಲ್ಲಿ ರಥ ಉರುಳಿ ಬಿದ್ದು 10 ಭಕ್ತರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾತ್ರೆ ನಿಮಿತ್ತ ಭಕ್ತರು ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳಲ್ಲಿ ತೊಡಗಿದ್ದರು. ಸಂಜೆಯ ವೇಳೆ ರಥೋತ್ಸವ ನಡೆಯುತ್ತಿದ್ದಾಗ ರಥದ ಮುಂದಕ್ಕೆ ವಾಲಿ ಜನರ ಮೇಲಿ ಬಿದ್ದಿದೆ. ಅದರಡಿ ಸಿಲುಕಿದ ಹತ್ತು ಭಕ್ತರು ಗಾಯಗೊಂಡರು. ತಕ್ಷಣವೇ ಎಲ್ಲರನ್ನೂ ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಯಿತು.