ಪ್ರತಿಪಕ್ಷದಲ್ಲಿ ಕೂರಲು ನಮಗೆ ಬೇಸರವಿಲ್ಲ ಎಂದ ಉಗ್ರಪ್ಪ.. ಆದರೆ? - ugrappa oppose operation kamala,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3951940-thumbnail-3x2-.jpg)
ನಾವು ಪ್ರತಿಪಕ್ಷದಲ್ಲಿ ಕೂರಲು ಯಾವುದೇ ಬೇಸರಪಟ್ಟುಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಉಗ್ರಪ್ಪ ಹೇಳಿದ್ದಾರೆ. 2018ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದ ಹಿನ್ನೆಲೆಯಲ್ಲಿ ನಾವು ಮೈತ್ರಿ ಸರ್ಕಾರ ರಚಿಸಿದ್ದೆವು. ಇದೀಗ ಅದನ್ನು ಕೆಡವಿ ಬಿಜೆಪಿ ವಾಮಮಾರ್ಗದಲ್ಲಿ ಸರ್ಕಾರ ರಚಿಸುವ ಪ್ರಯತ್ನ ಮಾಡಿದೆ. ಪ್ರಜ್ಞಾವಂತರಿಗೆ ಈ ಸರ್ಕಾರ ರಚನೆಯ ಇವರ ಕುತಂತ್ರ ಅರ್ಥವಾಗಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ. ಆಪರೇಷನ್ ಕಮಲದ ಮೂಲಕ 1,000 ಕೋಟಿ ರೂಪಾಯಿ ವ್ಯಯಿಸಿ ಇದೀಗ ಮತ್ತೊಮ್ಮೆ ಆಪರೇಷನ್ ಕಮಲ ನಡೆಸಿ ಸರ್ಕಾರ ಪತನ ಗೊಳಿಸಿದ್ದಾರೆ. ಇಂತಹ ಸರ್ಕಾರಕ್ಕೆ ಜನಮತ ಇಲ್ಲ. ಜನಾದೇಶದಿಂದ ಯಡಿಯೂರಪ್ಪ ನಾಲ್ಕನೇ ಬಾರಿ ವಾಮಮಾರ್ಗದಿಂದ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಇದು ಸ್ಥಿರ ಸರ್ಕಾರವಾಗದು ಎಂದು ಅವರು ಹೇಳಿದ್ದಾರೆ.