ನೀರಿನ ಪೈಪ್​ ಒಡೆದು ಕಾರಂಜಿಯಂತೆ ಚಿಮ್ಮಿದ ನೀರು... ವಿಡಿಯೋ!

By

Published : Jun 7, 2020, 3:13 AM IST

thumbnail
ಚಿಕ್ಕಮಗಳೂರು: ನಗರದ ಹೊರ ವಲಯದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಸಾವಿರಾರು ಲೀಟರ್​ ನೀರು ವ್ಯರ್ಥವಾಗಿರುವ ಘಟನೆ ನಡೆದಿದೆ. ಹಿರೇಮಗಳೂರು ರೈಲ್ವೆ ಬ್ರಿಡ್ಜ್ ಬಳಿ ಈ ಘಟನೆ ನಡೆದಿದ್ದು, ಇದ್ದಕ್ಕಿದ್ದಂತೆ ನೀರಿನ ಪೈಪ್ ಒಡೆದು ಹೋಗಿದೆ. ಯಗಚಿ ಜಲಾಶಯದಿಂದ ಚಿಕ್ಕಮಗಳೂರು ನಗರದ ವಾರ್ಡ್​ಗಳಿಗೆ ನೀರು ಪೂರೈಸುವ ಪೈಪ್ ಇದಾಗಿದ್ದು, ಕಳಪೆ ಪೈಪ್ ‌ಅಳವಡಿಕೆ ಮಾಡಿರುವ ಹಿನ್ನಲೆ ಈ ರೀತಿಯಾಗಿ ಆಗಿದೆ ಎಂದೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಕಾರಂಜಿಯಂತೆ ರಸ್ತೆಯಲ್ಲಿ ಚಿಮ್ಮುತ್ತಿದ್ದ ಹಿನ್ನಲೆ, ಕೆಲ ಹೊತ್ತು ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿ ವಾಹನಗಳು ನಿಂತಲ್ಲೇ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.