ಉಡುಪಿ: ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆ: ಆರ್‌ಪಿಎಫ್‌ ಮಹಿಳಾ ಸಿಬ್ಬಂದಿಯಿಂದ ರಕ್ಷಣೆ - Woman saved - WOMAN SAVED

🎬 Watch Now: Feature Video

thumbnail

By ETV Bharat Karnataka Team

Published : Sep 20, 2024, 4:01 PM IST

ಉಡುಪಿ: ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆಯನ್ನು ಆರ್​ಪಿಎಫ್ ಮಹಿಳಾ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಮಂಗಳೂರು - ಮಡಗಾಂವ್ ಪ್ಯಾಸೆಂಜರ್ ರೈಲು ಹತ್ತುವ ವೇಳೆ ಮಹಿಳೆ ಆಯತಪ್ಪಿ ಬಿದ್ದಿದ್ದರು. ತಕ್ಷಣವೇ ಸಮಯೋಚಿತ ಕಾರ್ಯಾಚರಣೆ ನಡೆಸಿದ ಆರ್​ಪಿಎಫ್ ಸಿಬ್ಬಂದಿ ಅರ್ಪಣಾ ಅವರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ಈ ದೃಶ್ಯ ರೈಲು ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಆಯತಪ್ಪಿ ಬಿದ್ದ ಮಹಿಳೆ ಚಲಿಸುತ್ತಿದ್ದ ರೈಲು ಹಾಗೂ ಫ್ಯಾಟ್​ಫಾರ್ಮ್​ ಮಧ್ಯದಲ್ಲಿ ಸಿಲುಕಿಕೊಂಡಿದ್ದು, ಆರ್​ಪಿಎಫ್​ ಸಿಬ್ಬಂದಿ ರಕ್ಷಣೆಗೆ ಧಾವಿಸುತ್ತಿದ್ದಂತೆ, ಅಲ್ಲೆ ಇದ್ದ ಯುವಕ ಕೂಡ ಓಡಿ ಬಂದಿದ್ದಾನೆ. ಇಬ್ಬರು ಸೇರಿ ಸಿಲುಕಿಕೊಂಡಿದ್ದ ಮಹಿಳೆಯನ್ನು ರೈಲು ಚಲಿಸುತ್ತಿದ್ದಾಗಲೇ ಎಳೆದು ರಕ್ಷಿಸಿದ್ದಾರೆ.

ಮಹಿಳಾ ಸಿಬ್ಬಂದಿ ಹಾಗೂ ಯುವಕನ ಸಮಯಪ್ರಜ್ಞೆಯಿಂದ ಮಹಿಳಾ ಪ್ಯಾಸೆಂಜರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಬ್ಬಂದಿ ಅರ್ಪಣಾ ಹಾಗೂ ಯುವಕನ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ನೋಡಿ: ಪ್ರಾಣಕ್ಕೆ ಉರುಳಾದ ರೀಲ್ಸ್​: ಹಳಿಯ ಮೇಲೆ ವಿಡಿಯೋ ಮಾಡುವಾಗ ರೈಲು ಡಿಕ್ಕಿಯಾಗಿ ಗಂಡ - ಹೆಂಡತಿ -ಮಗು ಸಾವು - FAMILY DIES WHILE MAKING REEL

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.