ETV Bharat / bharat

ಪ್ರೊಬೇಷನರಿ ಮಾಜಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್​ ಬಂಧಿಸದಂತೆ ಸುಪ್ರೀಂ ಕೋರ್ಟ್ ನಿರ್ದೇಶನ - PUJA KHEDKAR CASE

ಮಾಜಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್​​ಗೆ ಸುಪ್ರೀಂ ಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ.

ಪೂಜಾ ಖೇಡ್ಕರ್​
ಪೂಜಾ ಖೇಡ್ಕರ್​ (ians)
author img

By ETV Bharat Karnataka Team

Published : Jan 15, 2025, 6:15 PM IST

ನವದೆಹಲಿ: ಮಹಾರಾಷ್ಟ್ರ ಕೇಡರ್​ನ ವಜಾಗೊಂಡ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೊರಡಿಸಿದ ಮಧ್ಯಂತರ ಆದೇಶದಲ್ಲಿ ನಿರ್ದೇಶಿಸಿದೆ. ನಕಲಿ ಒಬಿಸಿ ಮತ್ತು ಪಿಡಬ್ಲ್ಯೂಬಿಡಿ (ವಿಕಲಚೇತನ ವ್ಯಕ್ತಿಗಳು) ಪ್ರಮಾಣಪತ್ರಗಳನ್ನು ಸಲ್ಲಿಸಿದ ಮತ್ತು ತನ್ನ ಗುರುತನ್ನು ನಕಲಿ ಮಾಡುವ ಮೂಲಕ ನಾಗರಿಕ ಸೇವೆಗಳ ಪರೀಕ್ಷೆಗೆ (ಸಿಎಸ್ಇ) ಹಾಜರಾಗಬಹುದಾದ ಗರಿಷ್ಠ ಮಿತಿಗಿಂತಲೂ ಹೆಚ್ಚು ಬಾರಿ ಪರೀಕ್ಷೆಗೆ ಹಾಜರಾದ ಆರೋಪದ ಮೇಲೆ ಖೇಡ್ಕರ್ ವಿರುದ್ಧ ವಿಚಾರಣೆ ನಡೆಯುತ್ತಿದೆ.

ಪೂಜಾ ಖೇಡ್ಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಎಸ್.ಸಿ.ಶರ್ಮಾ ಅವರ ನ್ಯಾಯಪೀಠ, ಫೆಬ್ರವರಿ 14 ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿ ಪೊಲೀಸರು ಮತ್ತು ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್​ಸಿ) ಸೂಚಿಸಿದೆ. ಈ ಮಧ್ಯೆ ನ್ಯಾಯಮೂರ್ತಿ ನಾಗರತ್ನ ನೇತೃತ್ವದ ಪೀಠವು ಪೂಜಾ ಖೇಡ್ಕರ್ ಅವರಿಗೆ ಬಂಧನದಿಂದ ರಕ್ಷಣೆ ನೀಡಿತು. ಈ ಹಿಂದೆ, ದೆಹಲಿ ಹೈಕೋರ್ಟ್ ಖೇಡ್ಕರ್ ಅವರ ಬಂಧನ ಪೂರ್ವ ಜಾಮೀನು ಅರ್ಜಿ ವಜಾಗೊಳಿಸಿತ್ತು ಮತ್ತು ಬಂಧನದಿಂದ ರಕ್ಷಿಸುವ ತನ್ನ ಹಿಂದಿನ ಆದೇಶವನ್ನು ಹಿಂತೆಗೆದುಕೊಂಡಿತ್ತು.

ಡಿಸೆಂಬರ್ 15, 2024 ರಂದು ನೀಡಿದ ತೀರ್ಪಿನಲ್ಲಿ, ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ಅವರ ನ್ಯಾಯಪೀಠವು ಖೇಡ್ಕರ್ ವಿರುದ್ಧ ಮೇಲ್ನೋಟಕ್ಕೆ ಬಲವಾದ ಪ್ರಕರಣ ದಾಖಲಾಗಿದ್ದು, ಇಂಥ ಅಪರಾಧದ ಆರೋಪ ಹೊತ್ತಿರುವ ವ್ಯಕ್ತಿಯ ಕಸ್ಟಡಿ ವಿಚಾರಣೆ ಅಗತ್ಯವಿದೆ ಎಂದು ಹೇಳಿತ್ತು.

ನ್ಯಾಯಮೂರ್ತಿ ಸಿಂಗ್ ನೇತೃತ್ವದ ನ್ಯಾಯಪೀಠವು ನವೆಂಬರ್ 28, 2024 ರಂದು ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಖೇಡ್ಕರ್ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು. ತೀರ್ಪು ನೀಡುವವರೆಗೆ, ಖೇಡ್ಕರ್ ಅವರನ್ನು ಬಂಧಿಸದಂತೆ ಆಗಸ್ಟ್ 12 ರಂದು ನೀಡಲಾದ ಮಧ್ಯಂತರ ಪರಿಹಾರ ಮುಂದುವರಿಯಲಿದೆ ಎಂದು ನಂತರ ಸ್ಪಷ್ಟಪಡಿಸಿತ್ತು.

ಇದಕ್ಕೂ ಮೊದಲು, ಇಲ್ಲಿನ ನ್ಯಾಯಾಲಯವು ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿತ್ತು ಮತ್ತು ಯುಪಿಎಸ್​ಸಿ ಸಂಸ್ಥೆಯೊಳಗಿನ ಯಾರಾದರೂ ಖೇಡ್ಕರ್​ಗೆ ಸಹಾಯ ಮಾಡಿದ್ದಾರೆಯೇ ಎಂಬುದನ್ನು ಕಂಡು ಹಿಡಿಯುವಂತೆ ತನಿಖಾ ಸಂಸ್ಥೆಗೆ ಸೂಚಿಸಿತ್ತು. ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದೇವೇಂದರ್ ಕುಮಾರ್ ಜಂಗಲಾ ಅವರು ಯುಪಿಎಸ್​ಸಿ ಶಿಫಾರಸು ಮಾಡಿದ ಇತರ ಜನ ಕೂಡ ಅರ್ಹತೆಯಿಲ್ಲದೆಯೇ ಕೋಟಾ ಪ್ರಯೋಜನಗಳನ್ನು ಪಡೆದಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದ್ದರು.

ಸರ್ಕಾರಿ ಸೇವೆಗೆ ಖೇಡ್ಕರ್ ಅವರ ಆಯ್ಕೆಯನ್ನು ಯುಪಿಎಸ್​ಸಿ ರದ್ದುಗೊಳಿಸಿದ ಒಂದು ತಿಂಗಳ ನಂತರ, ಕೇಂದ್ರವು ಸೆಪ್ಟೆಂಬರ್ 7, 2024 ರಂದು ಖೇಡ್ಕರ್ ಅವರನ್ನು ಭಾರತೀಯ ಆಡಳಿತ ಸೇವೆಯಿಂದ (ಐಎಎಸ್) ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿತ್ತು. ಖೇಡ್ಕರ್ ಅವರು ಒಬಿಸಿ ಮತ್ತು ಅಂಗವೈಕಲ್ಯ ಕೋಟಾ ಪ್ರಯೋಜನಗಳನ್ನು ನಕಲಿ ಮತ್ತು ತಪ್ಪಾಗಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : ಮಹಾಕುಂಭ ಮೇಳ: 3.5 ಕೋಟಿ ಭಕ್ತರು, ಸಾಧು - ಸಂತರಿಂದ 'ಅಮೃತ ಸ್ನಾನ' - MAHAKUMBHA MELA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.