ಮನೆಯಲ್ಲಿದ್ದ ಐಫೋನ್​​ ಎತ್ತೊಯ್ದು ಟವರ್​ ಮೇಲೆ ಕುಳಿತ ಕೋತಿ; ಮಂಗನಾಟಕ್ಕೆ ಕಂಗಾಲಾದ ಮೊಬೈಲ್​​ ಒಡತಿ! - iPhone in Monkey hand - IPHONE IN MONKEY HAND

🎬 Watch Now: Feature Video

thumbnail

By ETV Bharat Karnataka Team

Published : Sep 22, 2024, 9:54 PM IST

ದೊಡ್ಡಬಳ್ಳಾಪುರ: ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕರೆ ಹೆಂಗೆಂಗೋ ಆಡಿತ್ತು ಎಂಬ ಮಾತಿನಂತೆ, ಮಂಗವೊಂದು ಮನೆಯಲ್ಲಿದ್ದ ಐಫೋನ್ ಎತ್ತೊಯ್ದು ಮೊಬೈಲ್ ಟವರ್ ಮೇಲೆ ಕುಳಿತು ಜನರಿಗೆ ಪುಕ್ಕಟೆ ಮನರಂಜನೆ ನೀಡಿದೆ.

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಭಾನುವಾರ ಸಂಜೆ (ಸೆ.22) ಈ ವಿಚಿತ್ರ ಘಟನೆ ಜರುಗಿದ್ದು, ತುಳಸಿ ಎಂಬ ಮಹಿಳೆಗೆ ಸೇರಿದ ಐಫೋನನ್ನು ಮನೆಗೆ ನುಗ್ಗಿದ ಮಂಗವೊಂದು ಎತ್ತೊಯ್ದು ಟವರ್ ಮೇಲೆ ಕುಳಿತಿತ್ತು. ಮಂಗನಿಂದ ಐಫೋನ್ ಪಡೆದುಕೊಳ್ಳಲು ಸ್ಥಳೀಯರು ಸಾಕಷ್ಟು ಹರಸಾಹಸ ಪಟ್ಟರು. ಐಫೋನ್ ಕೊಡುವಂತೆ ಜನರು ಎಷ್ಟೇ ಬೇಡಿದ್ರೂ, ಆ ಕೋತಿ ಮಾತ್ರ ಐಫೋನ್ ಕೊಡಲಿಲ್ಲ. ಈ ದೃಶ್ಯ ನೋಡುಗರಿಗೆ ಪುಕ್ಕಟೆ ಮನರಂಜನೆ ನೀಡಿತು. ಮಂಗನಿಗೆ ಆಟ ಐಫೋನ್ ಒಡತಿಗೆ ಮಾತ್ರ ಸಂಕಟ ತಂದಿಟ್ಟಿತು.

ಕೊನೆಗೂ, ಮಂಗ ಐಫೋನ್ ಕೆಳಗೆ ಎಸೆದಿದ್ದು, ಫೋನ್ ಸಿಕ್ತು ಎನ್ನುವ ಖುಷಿಯಲ್ಲಿದ್ದವರಿಗೆ ಮೇಲಿಂದ ಬಿದ್ದ ಮೊಬೈಲ್​ ಸ್ಕ್ರೀನ್ ಒಡೆದು ಹೋಗಿದೆ. ತೂಬಗೆರೆ ಗ್ರಾಮದಲ್ಲಿ ಮಂಗಗಳ ಉಪಟಳ ಹೆಚ್ಚಾಗಿದ್ದು, ಕೋತಿಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ಲಾರಿ ತಡೆದು ಕಬ್ಬು ಸವಿದ ಗಜರಾಜ: ವಿಡಿಯೋ - Elephant Stops Truck Eat Sugarcane

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.